ಬ್ಯಾಂಕ ಅಭಿವೃದ್ಧಿಗೆ ಸದಸ್ಯರ, ಸಿಬ್ಬಂದಿಯ ಸಹಕಾರ ಮುಖ್ಯ : ರಾಜೇಶ್ವರಿ ದೊಡ್ಡಗೌಡರ  

Ravi Talawar
ಬ್ಯಾಂಕ ಅಭಿವೃದ್ಧಿಗೆ ಸದಸ್ಯರ, ಸಿಬ್ಬಂದಿಯ ಸಹಕಾರ ಮುಖ್ಯ : ರಾಜೇಶ್ವರಿ ದೊಡ್ಡಗೌಡರ  
WhatsApp Group Join Now
Telegram Group Join Now
ನೇಸರಗಿ:  ಸಹಕಾರಿ ಸಂಘಗಳು ಮತ್ತು ಅರ್ಬನ್ ಬ್ಯಾಂಗಳು, ಇನ್ನಿತರ ಸಹಕಾರಿ ಸಂಘಗಳ ಬೆಳವಣಿಗೆಗೆ ಶೇರು ಸದಸ್ಯರು, ಗ್ರಾಹಕರು, ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಸಹಕಾರಿ ಕ್ಷೇತ್ರ ಬೆಳೆದು ಜನರ ಸೇವೆ ಮಾಡಲು ಸಹಕಾರಿ ಆಗುತ್ತದೆ ಎಂದು ನೇಸರಗಿ ಅರ್ಬನ್ ಬ್ಯಾಂಕ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸನಗೌಡ ದೊಡ್ಡಗೌಡರ ಹೇಳಿದರು.
     ಅವರು ಶುಕ್ರವಾರದಂದು  ಗ್ರಾಮದ ಬ್ಯಾಂಕಿನ ಸಭಾ ಭವನದಲ್ಲಿ, ದಿ ನೇಸರಗಿ ಅರ್ಬನ್ ಕೋ ಆಪ ಬ್ಯಾಂಕ ಲಿ. ನೇಸರಗಿ ಇದರ   ಸನ್ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸರ್ವ  ಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನೇಸರಗಿ ಭಾಗದ ರೈತರ, ಉದ್ಯೋಗಿಗಳ, ಕೈಗಾರಿಕೆಗಳ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗೆ ಸದಾ ಬ್ಯಾಂಕ ಕಾರ್ಯ ಮಾಡುತ್ತಿದೆ ಎಂದರು.
    ಬ್ಯಾಂಕಿನ ವ್ಯವಸ್ಥಾಪಕರಾದ ಸುಭಾಷ ಎಸ್ ಪಾಟೀಲ ವರದಿ  ವಾಚನ ಮಾಡಿ ಮಾತನಾಡಿ ಪ್ರಸಕ್ತ ವರ್ಷ ಬ್ಯಾಂಕು 2975 ಸದಸ್ಯರು ಇದ್ದು, 71 ಲಕ್ಷ ರೂ. 20 ಸಾವಿರ ರೂ. ಗಳ ಶೇರು ಬಂಡವಾಳ, 2 ಕೋಟಿ, 14  ಲಕ್ಷ,53 ಸಾವಿರ ರೂ ಗಳ ಸ್ವಂತ ಬಂಡವಾಳ ಹೊಂದಿದ್ದು, 11 ಕೋಟಿ ರೂ ಗಳ ಠೇವಣಿ ಹೊಂದಿದ್ದು, 7 ಕೋಟಿ ರೂ. ಸಾಲ ನೀಡಿದ್ದು, 7 ಕೋಟಿ ರೂಗಳ  ಗುಂತವನೆ, 15 ಕೋಟಿ ರೂ.ಗಳ ದುಡಿಯುವ ಬಂಡವಾಳ ಹೊಂದಿ, 6 ಲಕ್ಷ 20 ಸಾವಿರ ರೂ ಗಳ ಲಾಭ ಗಳಿಸಿದೆ ಎಂದರು.
    ಈ ವಾರ್ಷಿಕ ಸಭೆಯಲ್ಲಿ ಬ್ಯಾಂಕಿಂಗ ಉಪಾಧ್ಯಕ್ಷರಾದ ಎಸ್ ವ್ಹಿ. ಸೋಮನ್ನವರ,ಆಡಳಿತ ಮಂಡಳಿ ಸದಸ್ಯರಾದ ಆರ್ ಎ ಪಾಟೀಲ, ಎಸ್ ಎಮ್ ಪಾಟೀಲ, ಬಿ ಎಫ್ ಕೊಳದೂರ, ನಿಂಗಪ್ಪ ಅರಿಕೇರಿ, ಮಹಾಂತೇಶ ಕೂಲಿನವರ, ಬಾಳಾಸಾಹೇಬ ದೇಸಾಯಿ, ಅಡಿವಪ್ಪ ಮೋದಗಿ, ಶ್ರೀಮತಿ ಮಲ್ಲವ್ವ ಐ. ಕಳ್ಳಿಬಡ್ಡಿ, ಬಿ ಎಸ್ ಲಕ್ಕುಂಡಿ, ಎಮ್ ಬಿ ಪಾಟೀಲ, ಆರ್ ಬಿ ಪಾಟೀಲ  ಗ್ರಾಮದ ಹಿರಿಯರಾದ ಎಮ್ ಟಿ ಪಾಟೀಲ, ಅಡಿವಪ್ಪ ಮಾಳಣ್ಣವರ, ಮಲ್ಲೇಶ ಮಾಳಣ್ಣವರ, ಮಲ್ಲಿಕಾರ್ಜುನ ಮದನಬಾವಿ, ಯಲ್ಲನಗೌಡ ದೊಡ್ಡಗೌಡರ, ಡಾ. ಪ್ರಕಾಶ ಹಳ್ಯಾಳ  ಸೇರಿದಂತೆ ಈ  ಭಾಗದ ರೈತರು,ಮುಖಂಡರು, ಬ್ಯಾಂಕಿನ ಸರ್ವ ಸದಸ್ಯರು, ಗ್ರಾಹಕರು,ಸಿಬ್ಬಂದಿ  ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article