ಗದಗ, ಸೆ. ೧೦ : ಗದಗ ನಗರದ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಎ. ಹಿರೇಮಠ ಅವರಿಗೆ ಧಾರವಾಡದ ಚೇತನ ಫೌಂಡೇಶನ್, ಧಾರವಾಡದ ಅಪ್ನಾ ದೇಶ ಫೌಂಡೇಶನ್, ಗದುಗಿನ ಅಶ್ವಿನಿ ಪ್ರಕಾಶನ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ, ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ, ವಿಶ್ವಾಸ ಫೌಂಡೇಶನ್ದ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕವಿಗೋಷ್ಠಿ ಸಮಾರಂಭದಲ್ಲಿ ನರಸಾಪೂರದ ಮಂಜು ಶಿಕ್ಷನ ಸಂಸ್ಥೆಯ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ವಿಶೇಷ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ರಾಜೇಶ್ವರಿ ಹಿರೇಮಠ ಅವರಿಗೆ ’ಗದಗ ನುಡಿ ಸಡಗರ’ ಕಾರ್ಯಕ್ರಮದಲ್ಲಿ ಶಿಕ್ಷಣ ಸಂತ ಶ್ರೀ ಲಿಂ. ಬಿ.ಜಿ.ಅಣ್ಣಿಗೇರಿ ಆದರ್ಶ ಶಿಕ್ಷಕಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಅತಿಥಿ ಮಹೋದಯರು, ವಿವಿದ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ವರಿ ಹಿರೇಮಠ ಅವರಿಗೆ ಆದರ್ಶ ಶಿಕ್ಷಕ ರತ್ನ ರಾಷ್ಟ್ರೀಯ ಪ್ರಶಸ್ತಿ
