ನಿಗದಿತ ಅವಧಿಯಲ್ಲಿ ಸಾಲ ಪಾವತಿ ಮಾಡಿ ಬ್ಯಾಂಕ ಅಭಿವೃದ್ಧಿಗೆ ಸಹಕರಿಸಿ: ರಾಜೇಶ್ವರಿ ದೊಡ್ಡಗೌಡರ

Ravi Talawar
ನಿಗದಿತ ಅವಧಿಯಲ್ಲಿ ಸಾಲ ಪಾವತಿ ಮಾಡಿ ಬ್ಯಾಂಕ ಅಭಿವೃದ್ಧಿಗೆ ಸಹಕರಿಸಿ: ರಾಜೇಶ್ವರಿ ದೊಡ್ಡಗೌಡರ
WhatsApp Group Join Now
Telegram Group Join Now

ನೇಸರಗಿ: ಯಾವತ್ತೂ ಶೇರುದಾರರು, ಗ್ರಾಹಕರು ಸಾಲ ಪಡೆದ ಬ್ಯಾಂಕಿಗೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿ ಮತ್ತು ಬ್ಯಾಂಕಿನ ಮೇಲೆ ವಿಶ್ವಾಸ ಇಟ್ಟ ಠೇವಣಿ ಮಾಡಬೇಕೆಂದು ನೇಸರಗಿ ಅರ್ಬನ್ ಬ್ಯಾಂಕ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ದೊಡ್ಡಗೌಡರ ಹೇಳಿದರು.

ಅವರು ಶನಿವಾರದಂದು ಗ್ರಾಮದ ಬ್ಯಾಂಕಿನ ಸಭಾಭವನದಲ್ಲಿ 2023-24 ನೇ ಸಾಲಿನ 59 ನೇ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯನ್ನು ಉದ್ದೇಸಿಸಿ ಮಾತನಾಡಿ ಬ್ಯಾಂಕು ಇಂದು ಈ ಹಂತದಲ್ಲಿರಲು ಅನೇಕ ಹಿರಿಯರ ಶ್ರಮ, ದಿ. ಎಸ್ ಎಫ್. ದೊಡ್ಡಗೌಡರ ಬ್ಯಾಂಕಿನ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಇಂದು ಹಲವಾರು ಜನರು ಬ್ಯಾಂಕಿನ ಸಹಕಾರ ಪಡೆದು ಬೆಳವಣಿಗೆ ಹೊಂದಿದ್ದಾರೆ, ಸಮಸ್ಯೆಗಳಿಗೆ ಸದಸ್ಯರಾದ ತಮ್ಮ ಸಲಹೆ ಸೂಚನೆ ನಮಗೆ ನೀಡಿರಿ ನಾವು ನೀವು ಸೇರಿ ಬ್ಯಾಂಕಿನಲ್ಲಿ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಿಕೇರಿ ಮಾತನಾಡಿ ಆರ್ ಬಿ ಐ ಬ್ಯಾಂಕಿನ ಮೇಲೆ ಕೆಲವೊಂದು ನಿಯಮಗಳನ್ನು ಹೇರುತ್ತಿದ್ದು ಆ ನಿಯಮ ಪಾಲನೆ ಬ್ಯಾಂಕಿಗೆ ಅನಿವಾರ್ಯ ಇದೆ ಅದಕ್ಕಾಗಿ ಕಡ್ಡಾಯವಾಗಿ ಪಾಲಿಸಬೇಕು. ಬ್ಯಾಂಕ ಅಭಿವೃದ್ಧಿಗೆ ಸಲಹೆ ಸೂಚನೆ ನೀಡಿ ಎಂದರು.

ಬ್ಯಾಂಕಿನ ವ್ಯವಸ್ಥಾಪಕರಾದ ಸುಭಾಶ ಎಸ್. ಪಾಟೀಲ ವಾರ್ಷಿಕ ವರದಿ ವಚನ ಮಾಡಿ ಮಾತನಾಡಿ ಪ್ರಸಕ್ತ 2023-24 ವರ್ಷ ಬ್ಯಾಂಕು 2995 ಸದಸ್ಯರು, 176 ಸಹ ಸದಸ್ಯರು, ರೂ. 72,86,650=00 ಶೇರು ಬಂಡವಾಳ, ರೂ. 11,00,00,605=20 ಠೇವಣಿ, ರೂ. 6,42,89,393=00 ಸಾಲ ನೀಡಿದ್ದು, ಪ್ರಸಕ್ತ ವರ್ಷ ರೂ. 5,86,825=54 ರೂಪಾಯಿಗಳ ಲಾಭ ಗಳಿಸಿದ್ದು. ರೈತರ ಸಾಲದ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸಾಲದ ಕಂತು ತುಂಬುವ ಸಮಯ ವಿಸ್ತರಣೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸಭೆಯಲ್ಲಿ ಬ್ಯಾಂಕ ಉಪಾಧ್ಯಕ್ಷ ಸೋಮಪ್ಪ ಸೋಮಣ್ಣವರ, ನಿರ್ದೇಶಕರಾದ ಆರ್ ಎ.ಪಾಟೀಲ, ಎಸ್ ಎಮ್. ಪಾಟೀಲ, ಬಿ ಎಫ್. ಕೊಳದೂರ, ಮಹಾಂತೇಶ್ ಎಮ್ . ಕೂಲಿನವರ, ಬಾಳಾಸಾಹೇಬ ಆರ್. ದೇಸಾಯಿ, ಶ್ರೀಮತಿ ಎಮ್ ಐ. ಕಳ್ಳಿಬಡ್ಡಿ, ಶ್ರೀಮತಿ ಎಮ್ ಬಿ. ಪಾಟೀಲ,ಶ್ರೀಮತಿ ಬಸವಣ್ಣೆವ್ವಾ ಲಕ್ಕುಂಡಿ, ಆಡಿವಪ್ಪ ಮೊದಗಿ, ವಾಯ್ ಎಲ್. ಮಾಳಗಿ, ಶ್ರೀಮತಿ ರಾಜೇಶ್ವರಿ ಪಾಟೀಲ, ಹಿರಿಯರಾದ ಎಮ್ ಟಿ. ಪಾಟೀಲ, ಯಲ್ಲನಗೌಡ ದೊಡ್ಡಗೌಡರ,ನಿಂಗನಗೌಡ ಹೊಸಮನಿ, ಮಲ್ಲೇಶಪ್ಪ ಮಾಳಣ್ಣವರ, ರಾಮನಗೌಡ ದೊಡ್ಡಗೌಡರ, ಪ್ರಕಾಶ ತೋಟಗಿ, ಯಮನಪ್ಪ ಪೂಜೇರಿ ಸೇರಿದಂತೆ ಬ್ಯಾಂಕಿನಲ್ಲಿ ಸರ್ವ ಸದಸ್ಯರು, ನೇಸರಗಿ ಭಾಗದ ಸಹಕಾರಿ ಬಂದುಗಳು, ಬ್ಯಾಂಕಿನ ಸಿಬ್ಬಂದಿ, ಗ್ರಾಹಕರು, ರೈತರು ಭಾಗವಹಿಸಿದ್ದರು. ಬಸವಂತ ಸೋಮಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article