ಗದಗ,11. ಮತಗಳ್ಳತನದ ಕಾಂಗ್ರೆಸ್ ಆರೋಪಕ್ಕೆ ಸತ್ಯ ನುಡಿದ ಸಚಿವ ರಾಜಣ್ಣ ಅವರ ರಾಜೀನಾಮೆ ಪಡೆದುಕೊಂಡ ಕಾಂಗ್ರೆಸ್ ಹೈಕಮಾಂಡ್ ಆಂತರಿಕ ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ ಹೇಳಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು ಮತಗಳ್ಳತನದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದ ರಾಹುಲ್ ಗಾಂಧಿ ಅವರ ನಡೆಯನ್ನ ಸಮರ್ಥಿಸದ ಕೆ ಏನ್ ರಾಜಣ್ಣ “ಮತದಾರ ಪಟ್ಟಿ ಸಿದ್ದವಾಗಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೇ, ಅದರಲ್ಲಿ ನಮ್ಮದು ತಪ್ಪಿದೆ” ಅಂತ ಸತ್ಯ ಹೇಳಿಕೊಂಡಿದ್ದನ್ನೇ ಕಾರಣವಿಟ್ಟುಕೊಂಡು ಅವರ ರಾಜೀನಾಮೆ ಪಡೆದ ಕಾಂಗ್ರೆಸ್, ವ್ಯೆಕ್ತಿಯ ವಾಕ್ ಸ್ವಾತಂತ್ರ್ಯವನ್ನ ಹರಣ ಮಾಡಿದೆ.
ಸಚಿವ ರಾಜಣ್ಣ ಇದ್ದದ್ದು ಇದ್ದಂಗೆ ಹೇಳುವ ನೇರ ನಿಷ್ಟುರ ಸ್ವಭಾವದವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾತಾಡಿ ಡಿ ಕೆ ಶಿವಕುಮಾರ್ ಅವರಿಗೆ, ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮಾತಾಡಿ ಸಿದ್ದರಾಮಯ್ಯ ಅವರಿಗೆ ಬೇಡವಾಗಿದ್ದರು ಅನಿಸುತ್ತೆ, ರಾಜ್ಯದಲ್ಲಿ ಹೆಚ್ಚುತ್ತಿರುವ ರಾಜಣ್ಣ ಅವರ ಜನಪ್ರೀಯತೆಯನ್ನ ಸಹಿಸದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿಕೊಂಡೆ ರಾಜಣ್ಣ ಅವರನ್ನು ಬಲಿ ತಗೆದುಕೊಂಡಿದ್ದು ಸ್ಪಷ್ಟವಾಗಿ ಕಾಣುತ್ತದೆ.
ಪಕ್ಷದ ಬೆಳವಣಿಗೆಯಲ್ಲಿ ಸತತ ವೈಪಲ್ಯ ಕಾಣುತ್ತಿರುವ ರಾಹುಲ್ ಗಾಂಧಿ, ಈಗ ಸ್ವ ಪಕ್ಷದವರಿಂದಲೇ ಮುಜುಗರಕ್ಕೆ ಈಡಾಗುವ ಪರಸ್ಥಿತಿ ಬಂದಿದ್ದು ಅವರು ಎಷ್ಟು ಪ್ರತಿಭಾವಂತರು ಎಂಬುದಕ್ಕೆ ಸಾಕ್ಷಿಯಾಗಿದೆ. ಅಹಿಂದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಪರಶಿಷ್ಟ ಪಂಗಡದ ಒಬ್ಬ ವರ್ಚಸ್ವಿ ನಾಯಕನ ಪದಚ್ಯುತಿ ಮಾಡುವ ಮೂಲಕ ಅಸಲಿ ಮುಖವಾಡ ತೋರ್ಪಡಿಸಿದ್ದಾರೆ. ರಾಜ್ಯದ ಕಾಂಗ್ರೆಸ ಕಾರ್ಯಕರ್ತರು ರಾಹುಲ್ ಹಾಗು ಸಿದ್ದರಾಮಯ್ಯ ಅವರ ನಿರಂಕುಶ ಧೋರಣೆ ವಿರುದ್ದ ಗಟ್ಟಿ ಧ್ವನಿ ಎತ್ತಬೇಕು ಇಲ್ಲದೇ ಹೋದರೆ ಕಾಂಗ್ರೆಸ್ ಶೀಘ್ರ ಅಳಿದುಹೋಗಲಿದೆ ಎಂದು ಲಿಂಗರಾಜ ಪಾಟೀಲ ಮಲ್ಲಾಪೂರ ಹೇಳಿದ್ದಾರೆ.