ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿಗೆ ರಾಜಗೋಳಿ ಭಾಜನ

Pratibha Boi
ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿಗೆ ರಾಜಗೋಳಿ ಭಾಜನ
WhatsApp Group Join Now
Telegram Group Join Now

ಬೈಲಹೊಂಗಲ: (ಡಿ.13), ಚಿರಾಯು ಕನ್ನಡ ಟಿವಿ, ನೆನಪು ಪೌಂಡೇಶನ್ ಕರ್ನಾಟಕ (ಕುಂದಗೋಳ) ಇದರ ಅಡಿಯಲ್ಲಿನ ಸಂಸ್ಥಾಪಕ ಡಾ. ಮಂಜುನಾಥ ಶಿವಕ್ಕನವರ ನೇತೃತ್ವದಲ್ಲಿ ಕೊಡ ಮಾಡುವ “ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿಗೆ” ನಗರದ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ಧೇಶಕ, ಶಾಸಕರ ಮತಕ್ಷೇತ್ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ ೪ ರ ಎಸ್‌ಡಿಎಂಸಿ ಸದಸ್ಯ, ಹಿರಿಯ ಪತ್ರಕರ್ತ ಮಹಾಂತೇಶ ಮಲ್ಲಪ್ಪ ರಾಜಗೋಳಿ ಭಾಜನರಾಗಿದ್ದಾರೆ.
ಡಿ. ೧೪ ರಂದು ಭಾನುವಾರ ಅಂತರರಾಜ್ಯ ಗೋವಾದ ಮಡಗಾಂವದ ರವೀಂದ್ರ ಭವನದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾದ ರಾಷ್ಟç ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಅದ್ವೀತೀಯ ಪ್ರತಿಭೆ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುವದೆಂದು ಚಿರಾಯು ಕನ್ನಡ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Share This Article