ಮಳೆರಾಜೇಂದ್ರಸ್ವಾಮಿ ಕಾರ್ತಿಕೋತ್ಸವ: ಲಕ್ಷದೀಪೋತ್ಸವ ಸಂಭ್ರಮ

Pratibha Boi
ಮಳೆರಾಜೇಂದ್ರಸ್ವಾಮಿ ಕಾರ್ತಿಕೋತ್ಸವ: ಲಕ್ಷದೀಪೋತ್ಸವ ಸಂಭ್ರಮ
WhatsApp Group Join Now
Telegram Group Join Now

ಬಾಗಲಕೋಟೆ: ಇದು ಕೇವಲ ದೀಪ ಹಚ್ಚುವ ಹಬ್ಬವಲ್ಲ, ಬದಲಿಗೆ ಅರಿವು ಮತ್ತು ಜ್ಞಾನದ ಬೆಳಕನ್ನು ಜೀವನದಲ್ಲಿ ಹರಡುವ ಸಂಕೇತವಾಗಿದೆ, ಸಮುದಾಯದ ಭಕ್ತಿ ಮತ್ತು ಆಧ್ಯಾತ್ಮಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ನಾಲತವಾಡದ ಬ್ರಹ್ಮಾಂಡ ಬೇರಿ ಮಠದ ಪೂಜ್ಯರಾದ ಡಾ.ಸುಧೀಂದ್ರಸ್ವಾಮಿಗಳು ಹೇಳಿದರು.

ಅವರು ಬಾಗಲಕೊಟೆ ಸಮಿಪದ ಮುರನಾಳ ಪುನರ ವಸತಿ ಕೇಂದ್ರ ಮುರನಾಳ ಗ್ರಾಮದಲ್ಲಿ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಕಾರ್ತಿಕೋತ್ಸವ ಹಾಗೂ ಲಕ್ಷ ದೀಪೋತ್ಸವಕ್ಕೆ ದೀಪ ಬೇಳಗುವದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕಾರ್ತಿಕೋತ್ಸವ ಎಂದರೆ ಕಾರ್ತಿಕ ಮಾಸದಲ್ಲಿ ದೇವಾಲಯಗಳಲ್ಲಿ ನಡೆಯುವ ದೀಪೋತ್ಸವ, ವಿಶೇಷ ಪೂಜೆಗಳು, ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮವಾಗಿದ್ದು, ಇದು ಕತ್ತಲೆಯನ್ನು ದೂರಮಾಡಿ ಜ್ಞಾನದ ಬೆಳಕನ್ನು ಹರಡುವ ಹಬ್ಬವಾಗಿದೆ, ಇದರಲ್ಲಿ ಭಕ್ತರು ದೀಪಗಳನ್ನು ಹಚ್ಚಿ, ವಿಶೇಷ ಅಲಂಕಾರದೊಂದಿಗೆ ದೇವರ ದರ್ಶನ ಪಡೆಯುತ್ತಾರೆ. ಇದನ್ನು “ಲಕ್ಷದೀಪೋತ್ಸವ” ಎಂದೂ ಕರೆಯುತ್ತಾರೆ ಮತ್ತು ಸಮುದಾಯದ ಭಕ್ತಿ ಮತ್ತು ಆಧ್ಯಾತ್ಮಿಕ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದರು.

ದಿವ್ಯ ಸಾನಿಧ್ಯವನ್ನು ವಹಸಿದ ಶ್ರೀ ಮಠದ ಪೂಜ್ಯರಾದ ಗುರುಲಿಂಗ ಮಹಾಸ್ವಾಮಿಗಳು ಮಹಾಪುರುಷ ಅವರು ಮಾತನಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ಕೃಷಿ ಪರಂಪರೆಯ ಮಠವಾಗಿದ್ದು, ಸಕಾಲಕ್ಕೆ ಬೇಕಾಗುವ ಮಳೆ ಬೇಳೆ ನೀಡುವ ಏಕೈಕ ಮಠವಾಗಿದೆ ಎಂದರು. ವೇದಿಕ ಮೇಲೆ ಗಿಣಗೇರಾ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ನರಸಿಂಹ ಸ್ವಾಮಿಗಳು, ಶ್ರೀಕಂಠಸ್ವಾಮಿಗಳು ಪಾವನ ಸಾನಿಧ್ಯ ವಹಸಿ ಆಶಿರ್ವಚನ ನೀಡಿದರು.

‘ಸನ್ಮಾನ: ಇಂಜನಿಯರಿAಗ್ ಕಂಪ್ಯೂಟರ್ ಸೈನ್ಸ್ ನಲ್ಲಿನ ಪಿಎZಡಿಗಾಗಿ ಗೌರವ ಡಾಕ್ಟರೇಟ ಪದವಿ ಪಡೆದ ಡಾ.ರಾಘವೇಂದ್ರ ಬಡಿಗೇರ, ಸಹಾಯಕ ಪ್ರಾಧ್ಯಾಪಕಿ ಡಾ.ದೀಪಾ ಬಡಿಗೇರ ಮತ್ತು ಬಾಗಲಕೋಟೆಯ ಕೆಇಬಿ ಇಂಜನೀಯರರ ಸಂಘ ಸಿಇಸಿ ಯಾದ ಮಲ್ಲಪ್ಪ ಗೊಲಭಾವಿ ಸೇರಿದಂತೆ ಲಕ್ಷದೀಪೋತ್ಸವದ ಧಾನಿಗಳಿಗೆ ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಯಚ್ಚರಪ್ಪ ಪತ್ತಾರ ಹೊಳೆ ಆಲೂರ, ಬಸವರಾಜ ಯಂಕAಚಿ, ಪಾಂಡುರAಗ ಪತ್ತಾರ, ದೇವೆಂದ್ರ ಅಗಳತಕಟ್ಟಿ, ಕೆಇಬಿಯ ಅಧಿಕ್ಷಕ ಅಭಿಯಂತ್ರರಾದ ಸಿ.ಬಿ ಯಂಕAಚಿ, ಪಿಡಿಓ ಮಹಾಂತೇಶ ನಾಲತವಾಡ, ಶಿವನಗೌಡ ಪಾಟೀಲ, ಹುಚ್ಚಪ್ಪ ಶಿರೂರ, ಶಿವಪುತ್ರಪ್ಪ ತೆಗ್ಗಿ, ಶಿವಣ್ಣ ಬೂದಿಹಾಳ, ಸೇರಿದಂತೆ ಗ್ರಾಮದ ಪಂಚಾಯತ್ ಸದಸ್ಯರು, ಊರಿನ ಹಿರಿಯರು ಯವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಂಭ್ರಮದ ಲಕ್ಷದೀಪೋತ್ಸವ :

ಕಾರ್ತೀಕೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜಂಭಣೆಯಿAದ ಶ್ರೀಮಳೆರಾಜೇಂದ್ರಸ್ವಾಮಿಮಠದ ಆವರಣದಲ್ಲಿ ಜರುಗಿತು. ಕಾರ್ತೀಕೋತ್ಸವದ ಪ್ರಯುಕ್ತ ಬೆಳಗಿನ ಜಾವ ಶ್ರೀ ಮಳೆಸ್ವಾಮಿಗೆ ಪಂಚಾಮೃತ ಅಭಿಷೇಕ, ಜಲಾಭೀಷೇಕ, ಪುಷ್ಪಾಲಂಕಾರ ಮಾಡಿ ಮಹಾಮಂಗಳಾರುತಿ ಮಾಡಿ ವರುಣನ ಪ್ರಾರ್ಥನೆ ಮಾಡಲಾಯಿತು, ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವಸ್ಥಾನ ಹಾಗೂ ಶಿಖರವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂದಿನ ಆವರಣದಲ್ಲಿ ಸಾಲಾಗಿ ಜೋಡಿಸಲಾಗಿದ್ದ ಹಣತೆಗಳನ್ನು ಮಾತೆಯರು ಸೇರಿದಂತೆ ಭಕ್ತಾಧಿಗಳು ಬೆಳಗುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.

WhatsApp Group Join Now
Telegram Group Join Now
Share This Article