ಸಿರುಗುಪ್ಪ :ಮಾ,11- ರಾಜ್ಯದ ರೈಲ್ವೇ ಕ್ರಿಯಾ ಸಮಿತಿಯ ನಿಯೋಗವು ದೆಹಲಿಗೆ ತೆರಳಿ ಬಳ್ಳಾರಿ, ಸಿರುಗುಪ್ಪ, ಸಿಂಧನೂರು, ಲಿಂಗಸುಗೂರು ನೂತನ ರೈಲ್ವೆ ಮಾರ್ಗ ದ ಆರಂಭಕ್ಕೆ ಆಗ್ರಹಿಸಿ ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮೊದಲಾದವರಿಗೆ ಇಂದು ಮನವಿ ಸಲ್ಲಿಸಿದೆ.
ಹಿಂದಿನ ಯುಪಿಎ ಸರ್ಕಾರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈಲ್ವೆ ಮಂತ್ರಿ ಸದಾನಂದಗೌಡರು ತಮ್ಮ ರೈಲ್ವೆ ಬಜೆಟ್ಟಿನಲ್ಲಿ ಈ ಮಾರ್ಗಕ್ಕೆ ಸರ್ವೆ ಆದೇಶ ಮಾಡಿದ್ದರು. ಸರ್ವೆ ಮುಗಿಸಿ13 ವರ್ಷ ಗಳಾಗಿವೆ. ಆದರೆ ಇಂದಿಗೂ ಈ ಮಾರ್ಗದ ಕೆಲಸ ಆರಂಭವಾಗಿಲ್ಲ. ಕೂಡಲೇ ಬಳ್ಳಾರಿ ಸಿರುಗುಪ್ಪ ಸಿಂಧನೂರು ನೂತನ ರೈಲು ಮಾರ್ಗದ ನಿರ್ಮಾಣದ ಕೆಲಸ ಆರಂಭಿಸಬೇಕು.
ಬಳ್ಳಾರಿ ಇಂದ ಬೆಂಗಳೂರಿಗೆ ಸೂಪರ್ ಫಾಸ್ಟ್ ರೈಲು ಇಲ್ಲವೇ ಒಂದೇ ಭಾರತ ರೈಲಿನ ಸೌಲಭ್ಯ ಒದಗಿಸಬೇಕು.
ಬಳ್ಳಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ ಮುನಗೂರು ಎಕ್ಸ್ಪ್ರೆಸ್ ರೈಲು ರೈಲ್ವೆ ಬಜೆಟಿನಲ್ಲಿ ಘೋಷಣೆಯಾಗಿ ಲೋಕಸಭೆಯಿಂದ ಅನುಮೋದನೆ ಪಡೆದ ರೈಲಾಗಿತ್ತು ಕಳೆದ ಒಂದು ವರ್ಷದಿಂದ ಈ ರೈಲು ಓಡುತ್ತಿಲ್ಲ. ಅದೇ ರೀತಿ ಶಿವಮೊಗ್ಗ ಚೆನ್ನೈ ಬೈ ವೀಕ್ಲಿ ರೈಲುಗಳು ನಿಲುಗಡೆ ಯಾಗಿದ್ದು ಈ ರೈಲುಗಳನ್ನು ಪುನಾರಾರಂಭಿಸಬೇಕು ಬಳ್ಳಾರಿ ರೈಲ್ವೆ ನಿಲ್ದಾಣದ ಆಧುನಿಕರಣ ಬೇಗನೆ ಪೂರ್ಣಗೊಳ್ಳಬೇಕು ಜೊತೆಗೆ ರಸಗೊಬ್ಬರಗಳ ಡೌನ್ಲೋಡಿಂಗ್ ಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಸೇರಿದಂತೆ ಹಲವು ಬೇಡಿಕೆಗಳಮನವಿ ಪತ್ರವನ್ನು ಕೇಂದ್ರ ಪ್ರಹ್ಲಾದ ಜೋಶಿ, ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಇವರಿಗೆ ನಿಯೋಗ ನೀಡಿದೆ.
ನಿಯೋಗದಲ್ಲಿ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ, ಸಿರುಗುಪ್ಪದ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ. ಯೋಗಿರಾಜ್, ಗೋನಾಳ್ ರಾಜಶೇಖರಗೌಡ, ದಮ್ಮೂರು ಶೇಖರ್, ಪಲ್ಲೇದ ದೊಡ್ಡಪ್ಪ, ಗಣಪಾಲ್ ಐನಾಥ ರೆಡ್ಡಿ, ಬಂಡೆಗೌಡ ಮೊದಲಾದವರು ಇದ್ದರು.


