ಬೆಳಗಾವಿ. ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ದೇಶ ಕಂದ ಅಪ್ರಬುದ್ಧ ರಾಜಕಾರಣಿ ಅಗಿದ್ದು ಸಂಸತ ಒಳಗೆ ಹೊರಗೆ ಆಧಾರ ರಹಿತ ಆರೋಪಗಳನ್ನು ಮಾಡಿ ನಾಗೇಪಾಡಿಲು ಅನುಭವಿಸುತ್ತಿದ್ದು, ಜನರ ದುಡ್ಡು ಸಂಸತ ಅಧಿವೇಶನದಲ್ಲಿ ಪೋಲು ಆಗುತ್ತಿದ್ದು, ರಾಜ್ಯದ ಮಹಾದೇವಪುರದಲ್ಲಿ 1 ಲಕ್ಷ ಕೊಟ್ಟಿ ಮತದಾರರಿದ್ದಾರೆ ಎಂದು ಸಭೆಯಲ್ಲಿ ಹೇಳುತ್ತಾರೆ, ಅದಕ್ಕೆ ಸಾಕ್ಷಿ ಕೇಳಿದರೆ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗಕ್ಕೆ ಸಾಕ್ಷಿ ಕೊಡದೆ ಹೋಗಿ, ರಾಜ್ಯದ ಸಿ ಎಮ್ ಮತ್ತು ಡಿಸಿಎಂ ಹೋಗಿ ಮನವಿ ಸಲ್ಲಿಸಿ ಸಾಕ್ಷಿ ಆಮೇಲೆ ಕೊಡುತ್ತೇವೆ ಎಂದು ಹೇಳಿ ಬರುತ್ತಾರೆ. ರಾಹುಲ ಗಾಂಧಿ ಎದುರಿಸಿದ ನೇತೃತ್ವದ 40 ಚುನಾವನೆಗಳಲ್ಲಿ ಸೋಲು ಅನುಭವಿಸಿ ಅಧಿಕಾರ ಇರುವ ಕರ್ನಾಟಕದಲ್ಲಿ ಬಂದು ಆಧಾರ ರಹಿತ ಆರೋಪ ಮಾಡಿ ಹೋಗುತ್ತಾರೆ, ಬಳ್ಳಾರಿ, ಚುನಾವಣೆ ಎಸ್ ಟಿ ಅನುದಾನ ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ ಇದು ಅವರಿಗೆ ಕಾಣಲ್ವಾ ಎಂದರು.
ಆಗಸ್ಟ್ 10 ರಂದು ಬೆಳಗಾವಿಗೆ ಒಂದೇ ಭಾರತ ರೈಲು ಪ್ರಾರಂಭ. ಬಹುದಿನಗಳ ಬೇಡಿಕೆಯಾದ ಒಂದೇ ಭಾರತ ರೈಲು ಆಗಸ್ಟ್ 10 ರಂದು ಬೆಳಗಾವಿ ಗೆ ಉದ್ಘಾಟನೆ ಆಗಿ ಪ್ರಾರಂವಾಗಲಿದೆ.ಮುಂಜಾನೆ 11 ಘಂಟೆಗೆ ಬಿಟ್ಟು ಸಂಜೆ 8 ಘಂಟೆಗೆ ಬೆಳಗಾವಿ ತಲುಪಲಿದೆ ಮತ್ತು ನಾನು ಎಮ್ ಪಿ ಆಗಿ ಪ್ರಥಮ ಭಾರಿಗೆ ಪ್ರಧಾನಿ ಮೋದಿಜೀ ಅವರನ್ನು ಬೇಟಿ ಆಗಿ ಬೆಳಗಾವಿ ಅಭಿವೃದ್ಧಿ ಬಗ್ಗೆ, ರೈಲು ಯೋಜನೆ ಬಗ್ಗೆ ಚರ್ಚಿಸಿದ್ದೆ, ಅವರು ರೈಲು ಮಂತ್ರಿಗಳಿಗೆ ಹೇಳಿ ಮೇ 8 ರಂದು ಅನುಮೋದನೆ ದೊರಕಿತ್ತು. ಅದು ಈಗ ನಾಳೆಯಿಂದ ಕಾರ್ಯರೂಪಕ್ಕೆ ಬರ್ತಾ ಇದ್ದು ಇದ್ದಕ್ಕೆ ಕಾರಣ ದೇಶದ ಪ್ರಧಾನಿ ಮೋದಿಜೀ, ವಿ ಸೋಮಣ್ಣ, ಪ್ರಹ್ಲಾದ ಜೋಶಿ, ಶಾಸಕರಾದ ಅಭಯ ಪಾಟೀಲ, ಮಾಜಿ ಸಂಸದೆ ಮಂಗಳ ಅಂಗಡಿ, ಅನಿಲ ಬೆನಕೆ, ಸಂಜಯ ಪಾಟೀಲ, ಬಿಜೆಪಿ ಪದಾಧಿಕಾರಿಗಳು ಹಾಗೂ ನಾನು ಸತತ ಸಂಪರ್ಕದಿಂದ ಅನುಷ್ಠಾನವಾಗಿದೆ ಎಂದರು. ಪುಣಾ ಬೆಳಗಾವಿ ಒಂದೇ ಭಾರತ ವಾರಕ್ಕೆ ಮೂರು ಬರೀ ಬರುತಿದ್ದು, ಸವದತ್ತಿ ಯಲ್ಲಮ್ಮ ತೆರಳಲು ಮತ್ತೊಮ್ಮೆ ಸರ್ವೇ ಮಾಡಲು ಪ್ರಯತ್ನ ಮಾಡಿ ಕೋಟ್ಯಂತರ ಜನರು ಬರುತ್ತಾರೆ ಎಂದು ವರದಿ ಕೊಡವ ಕೆಲಸ ಮಾಡುತ್ತೇವೆ. ಬೆಳಗಾವಿ ಕಿತ್ತೂರು ಧಾರವಾಡ ರೈಲು ಮಾರ್ಗ ನಿರ್ಮಾಣ 8 ತಿಂಗಳಲ್ಲಿ ಚಾಲನೆ ಸಿಗಲಿದೆ, ಬೆಳಗಾವಿಯಿಂದ ಸಾಂಬ್ರಾ ವರೆಗೆ ಚತುಸ್ಪದ ರಸ್ತೆ,ಬೆಳಗಾವಿ ರಾಜ್ಯ ಹೆದ್ದಾರಿಗಳ ಸುಧಾರಣೆಗೆ ಸಚಿವ ನಿತಿನ್ ಗಡ್ಕರಿ ಉತ್ಸಾಹ ತೋರಿದ್ದಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಕೆಡಿಸುವ ಹುನ್ನಾರ. ರಾಜ್ಯ ಸರ್ಕಾರ ಮತ್ತು ಹಿಂದೂ ವಿರೋಧಿಗಳಿಂದ ಪವಿತ್ರ ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸುವ ಕೆಲಸ ನಡೆಯುತ್ತಿದೆ. ಎಸ್ ಐ ಟಿ ತನಿಖೆ ಮಾಡುವದರಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ.ಯಾವ ಹಿನ್ನೆಲೆಯಲ್ಲಿ ಎಸ್ ಐ ಟಿ ನೇಮಕ ಮಾಡಿದ್ದರೋ, 17 ಕಡೆ ಮುಸುಕುದಾರಿ ತೋರಿಸಿದ ಕಡೆ ಏನು ಸಿಕ್ಕಿಲ್ಲ ಇನ್ನೂ ಹುಡುಕುತಿದ್ದಾರೆ ಇದು ಹಿಂದೂ ವಿರೋಧಿ ನೀತಿ ರಾಜ್ಯ ಸರ್ಕಾರ ತೋರುತ್ತದೆ ಎಂದರು. ಅವರು ಶನಿವಾರದಂದು ನಗರದ ರಾಯಲ್ ಲಿಟಿಸ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಪಾತ್ರಕಾಗೋಷ್ಟಿಯಲ್ಲಿ ಮಾತನಾಡಿದರು.
ಪಾತ್ರಕಾಗೋಷ್ಟಿಯಲ್ಲಿ ಮಾಜಿ ಸಂಸದೆ ಮಂಗಳಾ ಅಂಗಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷಗೌಡ ಪಾಟೀಲ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಡಾ. ರವಿ ಪಾಟೀಲ,ಮಲ್ಲಿಕಾರ್ಜುನ ಮದಮ್ಮನವರ,ಜಿಲ್ಲಾ ಮಾಧ್ಯಮ ವಕ್ತಾರ ಸಚಿನ್ ಕಡಿ, ಹಣಮಂತ ಕೊಂಗಾಡಿ,ರಾಜಶೇಖರ ದೋಣಿ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.