ಹುಕ್ಕೇರಿ; ತಾಲೂಕಿನ ವಿವಿಧ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಭೇಟಿ ನೀಡಿ, ಜಲ ಜೀವನ ಮಿ?ನ್ ಯೋಜನೆಯ ಕಾಮಗಾರಿಗಳ ಪರೀಶಿಲಿಸಿದರು.
ತಾಲೂಕಿನ ಕೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಂಕಿ ಗ್ರಾಮ ಮತ್ತು ನಾಗನೂರ ಕೆ.ಡಿ. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದ್ರೇವಾಡಿ, ಕೇಸ್ತಿ ಗ್ರಾಮ ಪಂಚಾಯತಿಯ ಅಕ್ಕಿವಾಟ ಮತ್ತು ಆಲೂರ ಕೆ.ಎಂ. ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಾತ್ಮಕ ನಳ ಸಂಪರ್ಕ ಸ್ಥಳ ಪರಿಶೀಲನೆ ಮಾಡಿದರು,
ಮನೆ ಮನೆಗೆ ಅಳವಡಿಸಲಾಗಿರುವ ನಳ ಸಂಪರ್ಕದ ಸ್ಥಳೀಯ ಫಲಾನುಭವಿಗಳ ಜೊತೆ ಚರ್ಚೆಮಾಡಿ. ಕಾರ್ಯತ್ಮಕ ನಳ ಸಂಪರ್ಕ ಬಗ್ಗೆ ರೇಖಾ ನಕ್ಷೆ ಮೂಲಕ ಮಾಹಿತಿ ಪಡೆದುಕೊಂಡು ಗ್ರಾಮ ಪಂಚಾಯತಿ ಅಧ್ಯಕ್ಷ ಸದಸ್ಯರೊಂದಿಗೆ ಚರ್ಚೆ ಮಾಡಿದರು
ಜಲ ಜೀವನ ಮಿ?ನ್ ಯೋಜನೆಯ ಸ್ಥಳಗಳನ್ನು ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿ ನೀರಿನ ಟ್ಯಾಂಕಗಳ ಸ್ವಚ್ಛತೆ ಮತ್ತು ಯೋಜನೆ ಮಾಹಿತಿ ಮೇಲೆ ಬರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಲ ಜೀವನ ಯೋಜನೆಯಡಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಶಿಘ್ರದಲ್ಲಿ ಪೂರ್ತಿಗೊಳಿಸಿ ಜನತೆ ನಳ ಸಂಪರ್ಕ ಒದಗಿಸಿ ನೀರು ಕೊಡಲು ಸೂಚಿಸಿದರು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ನೀರಿನ ಪರೀಕ್ಷೆಯ
ಬಿದ್ರೇವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿಮಕ್ಕಳೊಂದಿಗೆ ಚರ್ಚೆಸಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಅವರಿಂದ ಶಾಲಾ ಕಟ್ಟಡ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಡಿಯಲ್ಲಿ ರಚನೆಯಾದ ಶ್ರಮಜೀವಿ ಸಂಜೀವಿನಿ ವನ ಧನ ವಿಕಾಸ ಕೇಂದ್ರ, ಚಿಕ್ಕಾಲಗುಡ್ಡಕ್ಕೆ ಭೇಟಿ ನೀಡಿ ವಿಕಾಸ ಕೇಂದ್ರಲ್ಲಿ ತಯಾರಾದ ಬ್ಯಾಗ, ಕುರ್ತಾ, ಕೌದಿ, ಬಾಳೆದಿಂಡಿನ ಸಾಮಗ್ರಿಗಳನ್ನು, ಇತರೆ ಉತ್ಪನನ್ನಗಳನ್ನು ವೀಕ್ಷಣೆ ಮಾಡಿ . ಮಹಿಳಾ ಸಂಘದ ಸದಸ್ಯರೊಂದಿಗೆ ಚರ್ಚಿಸಿ ಇದರೊಂದಿಗೆ ಸಂಘದಲ್ಲಿ ಟಿ ಶರ್ಟಗಳನ್ನು ತಯಾರಿ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಚಿಕ್ಕೋಡಿ ವಿಭಾಗದ ಇಇ ಪಾಂಡುರಂಗರಾವ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ, ತಾಪಂ. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ರಾಜು ಢಾಂಗೆ, ಸಹಾಯಕ ನಿರ್ದೇಶಕ (ಗ್ರಾ.ಉ) ಲಕ್ಷ್ಮೀನಾರಾಯಣ ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಾರುತಿ ಕಳ್ಳಿಮನಿ, ಉಪ ವಿಭಾಗ ವಲಯ ಶಾಖಾಧಿಕಾರಿಗಳಾದ ಚೇತನ ಕಡಕೋಳ, ಅಭೀ?ಕ ಪವಾರ, ಜ್ಯೋತಿ ಬಡಗಾವಿ, ಸಂತೋ? ಪಾಟೀಲ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ ಕಬ್ಬಗೋಳ, ಶೋಭಾ ಬಡಕುಂದ್ರಿ, ಶಿವಾನಂದ ವಾಸನ್ನವರ, ಬಿ.ಬಿ ಅಲಗರಾವುತ, ಅರ್ಷದ ನೇರ್ಲಿ, ಮಹಾಂತೇಶ ಬಾದವಾನಮಠ, ಮತ್ತಿತರರು ಉಪಸ್ಥಿತರಿದ್ದರು,
ಪೋಟೋ ಶಿರ್ಷಿಕೆ ೨೨ ಹುಕ್ಕೇರಿ -೦೩.
ಹುಕ್ಕೇರಿ ತಾಲೂಕಿನ ವಿವಿಧ ಹಳ್ಳಿಗಳಿಗೆ ಮಂಗಳವಾರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಭೇಟಿ ನೀಡಿ ಜಲಜೀವನ ಕಾಮಗಾರಿಗಳನ್ನು ಪರೀಶಿಲಿಸಿದರು.
ಜಲಜೀವನ ಕಾಮಗಾರಿಗಳ ಪರಿಶೀಲನೆ: ಜಿಪಂ ಸಿಇಒ ರಾಹುಲ್ ಶಿಂಧೆ
