Ad imageAd image

ಸರ್ವರೂ ಪ್ರೀತಿ,‌ ವಿಶ್ವಾಸದಿಂದ ಜನಮನ ಗೆಲ್ಲಿ: ರಾಹುಲ್‌ ಜಾರಕಿಹೊಳಿ

Ravi Talawar
ಸರ್ವರೂ ಪ್ರೀತಿ,‌ ವಿಶ್ವಾಸದಿಂದ ಜನಮನ ಗೆಲ್ಲಿ: ರಾಹುಲ್‌ ಜಾರಕಿಹೊಳಿ
WhatsApp Group Join Now
Telegram Group Join Now
ಯಮಕನಮರಡಿ: ಉರುಸು ಆಚರೆಣೆ ಏಕತೆ, ಭಾತೃತ್ವದಿಂದ ಬದುಕು ನಡೆಸಬೇಕು ಎನ್ನುವುದನ್ನು ಸಾರುತ್ತದೆ ಎಂದು ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ದಡ್ಡಿ ಗ್ರಾಮದಲ್ಲಿ ಹಜರತ್‌ ಪೀರ್‌ ಸೈಯದ್‌ ಅಬ್ದುಲ್‌ ಶಾ ವಾಲಿ ಉರುಸು ನಿಮಿತ್ತ ಹಮ್ಮಿಕೊಂಡಿದ್ದ ಕವಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸನ್ಮಾನ ಸತ್ಕರಿಸಿ ಮಾತನಾಡಿದ ಅವರು, ಧಾರ್ಮಿಕ ನಿಯಮಗಳನ್ನು ಗೌರವಿಸುವ ಮೂಲಕ ಸರ್ವರೂ ಪ್ರೀತಿ,‌ ವಿಶ್ವಾಸದಿಂದ ಜನಮನ ಗೆಲ್ಲಬೇಕೆಂದು ತಿಳಿಸಿದರು.
ತಂದೆ, ಸಚಿವ ಸತೀಶ್‌ ಜಾರಕಿಹೊಳಿ ಅವರೊಂದಿಗೆ ದಡ್ಡಿ ಗ್ರಾಮದ ಮುಸ್ಲಿಂ ಸಮಾಜದ ಬಾಂಧವರು ಉತ್ತಮ ಒಟನಾಟ ಹೊಂದಿದ್ದು, ಸದಾ ಅವರ ಬೆಂಬಲಕ್ಕೆ ನಿಂತಿದ್ದಿರಿ. ಮುಂದೆಯೂ ನೀವು ನಮ್ಮ ಜತೆ ಕೈ ಜೋಡಿಸುತ್ತಿರಿ ಎಂಬ ವಿಶ್ವಾಸ ನಮಗಿದೆ. ಹಾಗಾಗಿ ನಿಮ್ಮ ಸರ್ವ ರೀತಿಯ ಸಮಸ್ಯೆಗಳಿಗೆ ಸಂದಿಸುವ ಕೆಲಸವನ್ನು ನಾವು ಮಾಡುತ್ತೇವೆಂದು ಭರವಸೆ ನೀಡಿದರು.
ದಡ್ಡಿ ಗ್ರಾಮದಲ್ಲಿ ಹಜರತ್‌ ಪೀರ್‌ ಸೈಯದ್‌ ಅಬ್ದುಲ್‌ ಶಾ ವಾಲಿ ಉರುಸು ನಿಮಿತ್ತ ಭಕ್ತರು ಸಕ್ಕರೆ ಊದಬತ್ತಿ ಅರ್ಪಿಸಿದರು. ಉರುಸು ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧದ ಮೆರವಣೆಗೆ ನಡೆಯಿತು. ಉರುಸಿನಲ್ಲಿ ಹಿಂದೂ ಮುಸಲ್ಮಾನ ಭಕ್ತರು ಭಾಗವಹಿಸಿ ಕೋಮು ಸೌಹರ್ದತೆ ಮೆರೆದರು.
ಈ ಸಂದರ್ಭದಲ್ಲಿ ಮುಖಂಡಾರಾದ ಮುನ್ನಾ ಬುದ್ದನ್ನವರ್‌, ಅಯುಬ್‌ ಪಠಾಣ, ನೂರಹಮದ್‌ ಮುಲ್ಲಾ, ಇಮ್ರಾನ್‌ ನಾಯಕವಾಡಿ, ಬಾಬುಲ್‌ ಶೇಖ್‌, ನಾಸೀಂ ಬುದ್ದನ್ನವರ್‌, ಗಜು ಸೋನಕರ್‌, ನಾಗು ನಾಯಕ, ಮಾರುತಿ ಪಾಟೀಲ್‌, ದಯಾನಂದ ಪಾಟೀಲ್‌, ರಾಮಚಂದ್ರ ಪಾಮನಾಯಕ, ಕಲ್ಲಪ್ಪಾ ಪಾಮನಾಯಕ ಸೇರಿದಂತೆ ಅಪಾರ ಸಂಖ್ಯೆಯ ಮುಸ್ಲಿಂ ಸಮಾಜದ ಬಾಂಧವರು, ದಡ್ಡಿ ಗ್ರಾಮದ ಗ್ರಾಮಸ್ಥರು ಇದ್ದರು.
WhatsApp Group Join Now
Telegram Group Join Now
Share This Article