ಕಾಂಗ್ರೆಸ್‌ ಸಾಧನೆ ಜನರಿಗೆ ತಿಳಿಸಿ: ರಾಹುಲ್‌ ಜಾರಕಿಹೊಳಿ ಕರೆ

Ravi Talawar
ಕಾಂಗ್ರೆಸ್‌ ಸಾಧನೆ ಜನರಿಗೆ ತಿಳಿಸಿ: ರಾಹುಲ್‌ ಜಾರಕಿಹೊಳಿ ಕರೆ
WhatsApp Group Join Now
Telegram Group Join Now
ಬೆಳಗಾವಿಯಲ್ಲಿ ಅದ್ದೂರಿಯಾಗಿ ಜರುಗಿದ ಯುವ ಕಾಂಗ್ರೆಸ್‌  ಬೃಹತ್‌ ಬೈಕ್‌ ರ್‍ಯಾಲಿ
ಬೆಳಗಾವಿ:  ರಾಜ್ಯ ಸರ್ಕಾರ ಎಲ್ಲಾ ಸಮುದಾಯದ ಬಡವರಿಗೆ  ಹಾಗೂ ಶೋಷಿತರ ಏಳ್ಗೆಗಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಗ್ಯಾರಂಟಿ ಯೋಜನೆ ಯಶಸ್ವಿಗೊಳಿಸಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಎಲ್ಲ ಮನೆ ಮನೆಗೆ ತೆರಳಿ ಪಕ್ಷ ದ ಸಾಧನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು  ರಾಜ್ಯ ಕಾಂಗ್ರೆಸ್‌ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ  ಅವರು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸೋಮವಾರ  ಆಯೋಜಿಸಲಾದ  ಬೆಳಗಾವಿ ನಗರ ಯುವ ಕಾಂಗ್ರೆಸ್‌ ಸಮಿತಿ ಕಾರ್ಯಕಾರಣಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
 ಜಿಲ್ಲೆಗಳ ನೂತನ ಅಧ್ಯಕ್ಷರು ತಮ್ಮ ಜಿಲ್ಲೆಗಳ ವ್ಯಾಪ್ತಿಯ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.  ನೂತನ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳ ಸನ್ಮಾನಿಸಿ, ಅಭಿನಂದಿಸಿದರು.
ಮುಂಬರುವ ಸವಾಲುಗಳು, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಈಗಾಗಲೇ ಚರ್ಚೆ ಮಾಡಲಾಗಿದೆ. ಪಕ್ಷದ ಹಿರಿಯ ನಾಯಕರು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಗ್ರಾಪಂ ಚುನಾವಣೆಯಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಬೂತ್ ಮಟ್ಟದಿಂದ ಜಿಲ್ಲಾ ತಂಡದ ಪಾತ್ರ ಯಾವ ರೀತಿ ಇರಬೇಕೆಂಬ ಕುರಿತು ಸಲಹೆ- ಸೂಚನೆಗಳನ್ನು ಕೊಡಲಾಗಿದೆ.  ಕಾಂಗ್ರೆಸ್ ಸರ್ಕಾರದ ಎರಡು ಅವಧಿಯಲ್ಲಿ  ಹಲವಾರು ಯೋಜನೆಗಳ ಜಾರಿಗೆ ತರಲಾಗಿದೆ.
ಜನರಿಗೆ ‌ನೀಡಿದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಎಲ್ಲಾ ಸಮುದಾಯದ ಜನರು  ಸರ್ಕಾರದ ಯೋಜನೆ ಲಾಭ ಪಡೆದುಕೊಂಡಿದ್ದಾರೆ.  ಈ ವರ್ಷದಲ್ಲಿ 52 ಸಾವಿರ ಕೋಟಿ ರೂ. ಬಜೆಟ್ ಇಡಲಾಗಿದೆ. ಕಾಂಗ್ರೆಸ್ ಪ್ರಚಾರದ ಕೊರತೆ ಇದೆ. ಸರ್ಕಾರ ಸಾಧನೆಯನ್ನು ಅಟ್ಟುಕಟ್ಟಾಗಿ ತಿಳಿಸಬೇಕು.
 ಕ್ಷೇತ್ರದ ಜನತೆಯ ಯಾವುದೇ ಸಮಸ್ಯೆ ಖುದ್ದಾಗಿ ಬಗೆಹರಿಸಬೇಕು. ಯುವಕರಿಗೆ ಸಹಾಯ ಮಾಡುವ ಕೆಲಸ ವಾಗಬೇಕಿದೆ ಎಂದು ಸಲಹೆ ನೀಡಿದರು.
ಕ್ಷೇತ್ರದ ಜನರ ಮನಸ್ಸಿನಲ್ಲಿ ಎಷ್ಟು ನೆಲೆಯೂರುತ್ತೆವೆ ಅಷ್ಟು ಮತ ಕೈಗೆ ಶಕ್ತಿ  ನೀಡಲಿವೆ. ಕೇಂದ್ರ ಬಿಜೆಪಿಯ ಸರ್ಕಾರದ ವೈಫಲ್ಯವನ್ನು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪಿಸಬೇಕು. ಕಾಂಗ್ರೆಸ್ ಸರ್ಕಾರದ ಆಡಳಿತ ಬಗ್ಗೆ ಜನಜಾಗೃತಿ ಮಾಡಲು ಸೂಚನೆ ಪಕ್ಷದಿಂದ ಕೈಗೊಳ್ಳಬೇಕಾದ ಹೋರಾಟಗಳಿಗೆ ಮತ್ತಷ್ಟು ಚುರುಕುಗೊಳ್ಳಬೇಕು ಎಂದು ಹೇಳಿದರು.
ತಂದೆಯವರಾದ ಸತೀಶ  ಜಾರಕಿಹೊಳಿ ಅವರು ಘಟಪ್ರಭಾದಲ್ಲಿ ಉಚಿತ ಶಿಕ್ಷಣ, ಉದ್ಯೋಗದ ತರಬೇತಿ ಆರಂಭಿಸಿದ್ದಾರೆ. ಜೊತೆಯಲ್ಲಿ ಪಕ್ಷದ ಸಂಘಟನೆಯನ್ನು  ಕಟ್ಟುವ ಕೆಲಸವಾಗುತ್ತಿದೆ. ಎಲ್ಲಾ ಕಡೆಯಿಂದಲೂ ಪ್ರಯತ್ನ ಮಾಡಿದಾಗ ಪಕ್ಷ ಮಾತ್ರ ಬಲಿಷ್ಠಗೊಳಿಲಿದೆ , ಆದಷ್ಟೂ ತಳಮಟ್ಟದಿಂದ ಕೆಲಸ ಮಾಡಿ ಎಂದರು.
ಇದಕ್ಕೂ ಮುಂಚೆ, ಜಿಲ್ಲಾ ಯುವ ಕಾಂಗ್ರೆಸ್‌ವತಿಯಿಂದ ನೂರಾರು ಹೆಚ್ಚು  ಯುವ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನ ಮೂಲಕ  ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾ ಕಾಂಗ್ರೆಸ್‌ ಕಚೇರಿವರೆಗೂ  ಬೃಹತ್‌ ಬೈಕ್‌ ರ್‍ಯಾಲಿ  ನಡೆಸಿದರು.
 ಈ ಸಂದರ್ಭದಲ್ಲಿ  ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ,  ಜಿಲ್ಲಾಧ್ಯಕ್ಷ ವಿನಯ ನಾವಲಟ್ಟಿ, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಗೌಡ , ರಾಜ್ಯ ಉಪಾಧ್ಯಕ್ಷೆ  ದೀಪಿಕಾ ರೆಡ್ಡಿ ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ. ಜೆ,    ಜಿಲ್ಲಾಧ್ಯಕ್ಷ,  ಸಾಗರ ದಿವಟಗಿ,  ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಿದ್ದಿಕ್ ಅಂಕಲಗಿ, ಶ್ರೀಧರ ಜಾಧವ, ಸಿದ್ದು ಹಳ್ಳಿಗೌಡ, ಇಮ್ರಾನ್ ಅಂಕಲಗಿ, ನೌಮಾನ್ ಮೊಕಾಶಿ ಹಾಗೂ ಇತರರು ಇದ್ದರು.
WhatsApp Group Join Now
Telegram Group Join Now
Share This Article