ರಾಯಭಾಗ: ರಾಹುಲ್ ಗಾಂಧಿಯವರು ನುರಿತ, ಪ್ರಬುದ್ಧ ರಾಜಕಾರಣಿ ಎಂಬ ವಿಶ್ವಾಸದಿಂದ ದೇಶದ ಜನತೆ ಕಾಂಗ್ರೆಸ್ “ಕೈ” ಹಿಡಿದಿದೆ. ಹೀಗಾಗಿ, ಲೋಕಸಭಾ ಕ್ಷೇತ್ರದಲ್ಲಿ 100 ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೆಲವೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅವರ, ಕುರಿತು ಹೇಳಿಕೆ ನೀಡುವವರಿಗೆ ಟ್ಯಾಕ್ಸ್ , ಜಿಎಸ್‌ಟಿ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ತೀರುಗೇಟು ನೀಡಿದರು.
ಮುಗಳಖೋಡದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು, ವಿಪಕ್ಷ ರಾಹುಲ್ ಗಾಂಧಿಯವರು ಪ್ರಬುದ್ಧ ರಾಜಕಾರಣಿ ಇರೊದರಿಂದ ಅವರ, ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಹೀಗಾಗಿ ಲೋಕಸಭೆಯಲ್ಲಿ 100 ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಒಲಿದಿವೆ ಎಂದು ಹೇಳುವ ಮೂಲಕ ಜೋಶಿ ಅವರಿಗೆ ಎಚ್ಚರಿಸಿದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಮತ್ತೆ ನೀರು ಬಿಡುಗಡೆ ಮಾಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಹಾಗೂ ಜಾನುವಾರುಗಳಿಗೆ ಹೆಚ್ಚಿನ ನೀರು ಬೇಕು. ಎಲ್ಲಾ ಕಾಲುವೆಗಳ ಮೂಲಕ ರೈತರಿಗೆ ನೀರು ಮುಟ್ಟಿಸುವ ಕೆಲಸವಾಗಿದೆ. ಕ್ಷೇತ್ರದ ಜನರಿಗೆ ಯಾವುದೇ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲಲ್ಲಿ ಕಾಲುವೆಗಳ ಸಮಸ್ಯೆಯಾಗಿದೆ ಎಂಬುವುದನ್ನು ಖುದ್ಧಾಗಿ ಪರಿಶೀಲನೆ ನಡೆಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾರ್ಖಾನೆಗಳಿಂದ ಕೃಷ್ಣಾ ನದಿಯು ಕಲುಷಿತಗೊಳ್ಳುತ್ತಿದೆ ಎಂಬ ಮಾಧ್ಯಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಜನಪ್ರನಿಧಿಗಳು ಸಹ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ನದಿ ಕಲುಷಿತಗೊಳ್ಳುವುದರ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.