ಮಾಧ್ಯಮದಲ್ಲಿ ಬಿತ್ತರಿಸುವ ಮಾದಕ ದ್ರವ್ಯಗಳಿಗೆ ಮಾರು ಹೋಗಬೇಡಿ: ರಾಘವೇಂದ್ರ ನೀಲಣ್ಣವರ

Pratibha Boi
ಮಾಧ್ಯಮದಲ್ಲಿ ಬಿತ್ತರಿಸುವ ಮಾದಕ ದ್ರವ್ಯಗಳಿಗೆ ಮಾರು ಹೋಗಬೇಡಿ: ರಾಘವೇಂದ್ರ ನೀಲಣ್ಣವರ
WhatsApp Group Join Now
Telegram Group Join Now

ಮುಧೋಳ: ಜು.೨೨., ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ದಂದು ಬೀಳಗಿ ಯೋಜನಾ ಕಚೇರಿಯ ಹಲಗಲಿ ವಲಯ ದಿಂದ “ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ” ಕಾರ್ಯಕ್ರಮ ಜರಗಿತು.

ರಾಘವೇಂದ್ರ ನೀಲಣ್ಣವರ ಯೋಗ ಶಿಕ್ಷಕರು ಮಾಧ್ಯಮದಲ್ಲಿ ಬಿತ್ತರಿಸುವ ಮಾದಕ ದ್ರವ್ಯಗಳಿಗೆ ಮಾರು ಹೋಗಬೇಡಿ, ಇವತ್ತಿನ ದಿನ ಮಕ್ಕಳು ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಮಾದಕ ವೇಸನದ ಪ್ರೇರೇಪಿತ ದೃಶ್ಯಾವಳಿಗಳಿಂದ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜೊತೆಗೆ ಶೈಕ್ಷಣಿಕ ಸಾಧನೆಯಿಂದ, ಹಿಂದೆ ಉಳಿದು ತಮ್ಮ ಜೀವನವನ್ನು ನರಕ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತಂದೆ-ತಾಯಿ ಗುರುವಿನ ತ್ಯಾಗವನ್ನು ಮನಗಂಡು,ನಿತ್ಯ ಯೋಗವನ್ನು ಮೈಗೂಡಿಸಿಕೊಂಡು ಉತ್ತಮ ಜೀವನವನ್ನು ನಡೆಸಬೇಕು. ಇವತ್ತಿನ ದಿನ ಸಾಮಾಜಿಕ ಜೀವನ ಹದಗೆಡಲು ಡ್ರಗ್ಸ್, ಮಧ್ಯಪಾನ,ಧೂಮಪಾನ, ಗುಟುಕಾ ಮತ್ತು ಅತಿಯಾದ ಮೊಬೈಲ್ ಬಳಕೆ ಕೂಡಾ ಮಾದಕ ವ್ಯಸನವೇ ಆಗಿದೆ ಆದುದರಿಂದ ಈ
ಮಾದಕ ದ್ರವ್ಯಗಳಿಂದ ದೂರ ಇದ್ದು ಕಲಿಕೆಗೆ ಒತ್ತು ಕೊಡಿ, ನಿಮ್ಮ ಭವಿ?ತ್ತಿನ ಜೀವನ ನಿಮ್ಮ ಪರಿಶ್ರಮದಲ್ಲಿ ಅಡಿಗಿದೆ ಎಂದು ತಿಳಿಸಿದರು.

ಪ್ರಾಚಾರ್ಯರಾದ ವಿ ಕೆ ಜಮಖಂಡಿ, ಶಿಕ್ಷಕರಾದ ಎಂ ಆರ್ ಕಾರಭಾರಿ,ಎಲ್ ಸಿ ಸಸಲಾದಿ,ಜಿ ಎಸ್ ಕೊಬ್ರಿ,ಎ ಬಿ ಮುತ್ತಗಿ,ಆರ್ ಕೆ ಕಾಂಬ್ಳೆ ,ಜಿ ವಿ ಘಟ್ಟದ, ಕೆ ವಿ ಅಮರಿ,ಯು ಎಸ್ ಕೊಡಬಾಗಿ,ಜೆ ಬಿ ತೊಂಡಿಹಾಳ, ಎಮ್ ಎಲ್ ಹೂಗಾರ,ಎ ಎಸ್ ಬನ್ನೂರ,ಎಂ ಎಸ್ ಬಿರಾದರ, ಎಸ್ ಎಚ್ ಬಂಡೆನ್ನವರ ಮತ್ತು ವಲಯದ ಮೇಲ್ವಿಚಾರಕರು ಹಣಮಂತ ಹೂವಿನಭಾವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article