ಮಹಾಲಿಂಗಪುರ: ಅ.20: ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮಾದ ಸರಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ದಂದು ಸ್ವಾಸ್ತ್ಯ ಸಂಕಲ್ಪ ಮಾದಕ ವಸ್ತು ವಿರೋಧಿ ದಿನ ಜಾಗೃತಿ
ಕಾರ್ಯಕ್ರಮ ಜರಗಿತು.
ಸಂಪನ್ಮೂಲ ವ್ಯಕ್ತಿಗಳು, ಪತ್ರಕರ್ತರು, ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಸ್ವಾಸ್ಥ್ಯ ಸಂಕಲ್ಪಕ್ಕೆ ಬದ್ಧರಾದಾಗ ಮಾತ್ರ ಉತ್ತಮ ಆರೋಗ್ಯ ಜೀವನ ಹೊಂದಲು ಸಾಧ್ಯವಾಗುತ್ತದೆ.ದುಶ್ಚಟ ದಿಂದ ಆಗುವ ಅನಾಹುತಗಳೆಂದರೆ ಸಾಮಾಜಿಕ ಗೌರವವನ್ನು ಕಳೆದುಕೊಳ್ಳುವದೊಂದಿಗೆ ಆರ್ಥಿಕ, ಕೌಟುಂಬಿಕ ಅನೇಕ ಸಂಕಷ್ಟಗಳಿಗೆ ತುತ್ತಾಗಿ ದೈಹಿಕ,
ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತೇವೆ. ಆದ್ದರಿಂದ ದುಶ್ಚಟಗಳಿಂದ ದೂರ ಇರಬೇಕು, ವಿದ್ಯಾರ್ಥಿ ಜೀವನವು ತ್ಯಾಗಮಯ ಜೀವನವಾಗಬೇಕು, ಅಂದಾಗ ಶೈಕ್ಷಣಿಕ ಸಾಧನೆ ಸಾಧಿಸಲು
ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಗುರುಗಳಾದ ವ್ಹಿ.ಸಿ. ಚೌಧರಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕುರಿತು
ವಲಯದ ಮೇಲ್ವಿಚಾರಕರಾದ ರೇಣುಕರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಹ ಶಿಕ್ಷಕರಾದ ಸಂಗಮೇಶ ಗುರುಗಳು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ
ಶಾಲೆಯ ಸಹ ಶಿಕ್ಷಕರು, ಸೇವಾಪ್ರತಿನಿಧಿಗಳಾದ ಭಾರತಿ, ಶೋಭಾ, ವಿಪತ್ತು ನಿರ್ವಹಣೆ ಸ್ವಯಂ ಸೇವಕರಾದ ರೇಖಾ ಸೋನಾರ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.