ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ್ ಮರದೂರು ಕಾರ್ಯದರ್ಶಿಯಾಗಿ ರಾಘವೇಂದ್ರ ಅರಕೇರಿ ಆಯ್ಕೆ

Ravi Talawar
ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ್ ಮರದೂರು ಕಾರ್ಯದರ್ಶಿಯಾಗಿ ರಾಘವೇಂದ್ರ ಅರಕೇರಿ ಆಯ್ಕೆ
WhatsApp Group Join Now
Telegram Group Join Now
ಕೊಪ್ಪಳ 24: ಸುವರ್ಣ ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣ ವರ್ಣೇಕರ್ ಕಾಂಪ್ಲೆಕ್ಸ್ ಹತ್ತಿರ ಪತಕರ್ತರ ಸಂಘದ ಸರ್ವ ಸದಸ್ಯರ ಒಪ್ಪಂದದ ಮೇರೆಗೆ ಅವಿರೋಧವಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಮರದೂರ ಕಾರ್ಯದರ್ಶಿ ಸ್ಥಾನಕ್ಕೆ ರಾಘವೇಂದ್ರ ಅರಕೇರಿ ಅವರನ್ನು ಆಯ್ಕೆ ಮಾಡಲಾಯಿತು
 ಈ ಸಂದರ್ಭದಲ್ಲಿ ಅಧ್ಯಕ್ಷ ಬಸವರಾಜ ಮರದೂರ ಅವರು ಮಾತನಾಡಿ ಪತ್ರಕರ್ತರ ಏಳಿಗೆಗೆ ಸಧಾ ಸಿದ್ದನಿದ್ದೇನೆ, ಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳಲ್ಲಿ ತಾಲೂಕು ಪದಾಧಿಕಾರಿಗಳ ನೇಮಕ ಮಾಡಿ ಸಂಘಟನೆ ಬಲಿಷ್ಠ ಗೊಳಿಸಲಾಗುವದು ಹಾಗೂ ಪತ್ರಕರ್ತ ಸಂಘದಿಂದ ಪತ್ರಕರ್ತರ ಕುಂದು ಕೊರತೆಗೆ ಸ್ಪಂದಿಸುವುದಾಗಿ ಅಧ್ಯಕ್ಷನಾಗಿ ಬಸವರಾಜ್ ಮರದೂರ ಭರವಸೆ ನೀಡಿದರು
ತದನಂತರ ಕಾರ್ಯದರ್ಶಿ ರಾಘವೇಂದ್ರ ಅರಕೇರಿ ಅವರು ಮಾತನಾಡುತ್ತಾ ಪತ್ರಕರ್ತರಿಗೆ ಅನ್ಯಾಯ ವಾದಾಗ ನಾವು ಪತ್ರಕರ್ತರ ಸಂಘದಿಂದ ನ್ಯಾಯಕ್ಕೆ ಕೊಡಿಸುವ ಕೆಲಸ ನಮ್ಮ ಸಂಘದಿಂದ ಮಾಡಬೇಕು ಎಲ್ಲಾ ತಾಲೂಕು ಕೇಂದ್ರದಲ್ಲಿ ನಮ್ಮ ಸಂಘ ಮುನ್ನಡೆಯಬೇಕು ಸಂಘದ ನಿರ್ಣಾಯಕ ಎಲ್ಲಾ ಸದಸ್ಯರು ಬದ್ಧರಾಗಿರಬೇಕು ಈಗಾಗಲೇ ಕೊಪ್ಪಳದಲ್ಲಿ ಈಗಾಗಲೇ ಎರಡು ಪತ್ರಕರ್ತರ ಸಂಘಗಳು ಇದ್ದಾವೆ ಕೊಪ್ಪಳ ಜಿಲ್ಲೆಯಲ್ಲಿ ಮೂರನೇ ಸಂಘವಾಗಿ ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ ಜಿಲ್ಲಾ ಸಮಿತಿಯನ್ನು ಪುನರ್ ರಚಸಿ ಸುವರ್ಣ ಕರ್ನಾಟಕ ರಾಜ್ಯ ಅಧ್ಯಕ್ಷರು ಕಾರ್ಯದರ್ಶಿಗಳು ಉಪಾಧ್ಯಕ್ಷರು ಅನುಮತಿ ಮೇರೆಗೆ ಇತರ ವಿಷಯಗಳನ್ನು ಚರ್ಚೆ ಮಾಡಿ ಜಿಲ್ಲಾಧ್ಯಕ್ಷರಾಗಿ ಬಸವರಾಜ ಮಾರದೂರ ಕಾರ್ಯದರ್ಶಿಯಾಗಿ ರಾಘವೇಂದ್ರ ಅರಕೇರಿಯನ್ನು ಆಯ್ಕೆ ಮಾಡಲಾಯಿತು
 ಈ ವೇಳೆ ಸಂಘದ ರಾಜ್ಯ ಅಧ್ಯಕ್ಷರಾದ ವೈ. ಬಿ. ಜೂಡಿ, ರಾಜ್ಯ ಕಾರ್ಯದರ್ಶಿಗಳಾದ ರಮೇಶ್ ಪವಾರ್ ರಾಜ್ಯ ಉಪಾಧ್ಯಕ್ಷರಾದ ಲಲಿತಾ ಪೂಜಾರ್ ಜಿಲ್ಲಾ ಸಮಿತಿ ನೂತನ ಜಿಲ್ಲಾಧ್ಯಕ್ಷರಾದ ಬಸವರಾಜ್
ಮಾರದುರ ಕಾರ್ಯದರ್ಶಿಗಳಾದ ರಾಘವೇಂದ್ರ ಅರಕೇರಿ ಪದಾಧಿಕಾರಿಗಳಾದ ಆನಂದ ಜಾಲಿಹಾಳ, ಮಹೇಶ್ ಹಳ್ಳಿಕೇರಿ ಪ್ರಭು ಚೆನ್ನದಾಸರ, ಎಂ. ಎನ್. ಕುಂದಗೋಳ, ದಸ್ತಗಿರಿ ಸಾಬ್, ಉದಯ್ ತೋಟದ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article