ಮಳೆ ಅನಾಹುತಗಳ ಚರ್ಚೆಗೆ ಅವಕಾಶ ನೀಡಿದ್ದನ್ನು ಆಕ್ಷೇಪಿಸಿದ ಆರ್. ಅಶೋಕ್

Ravi Talawar
ಮಳೆ ಅನಾಹುತಗಳ ಚರ್ಚೆಗೆ ಅವಕಾಶ ನೀಡಿದ್ದನ್ನು ಆಕ್ಷೇಪಿಸಿದ ಆರ್. ಅಶೋಕ್
WhatsApp Group Join Now
Telegram Group Join Now

ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಧರಣಿಯ ನಡುವೆಯೂ ಮಳೆ ಅನಾಹುತಗಳ ಚರ್ಚೆಗೆ ಅವಕಾಶ ನೀಡಿದ್ದನ್ನು ಆಕ್ಷೇಪಿಸಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅಜೆಂಡಾ ಕಾಪಿಯನ್ನು ಹರಿದು ಎಸೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ಮೈತ್ರಿಕೂಟ ಸದಸ್ಯರು ಸ್ಪೀಕರ್ ಅವರ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದರು. ಎಷ್ಟೇ ಮನವಿ ಮಾಡಿದರೂ ಧರಣಿ ಕೈ ಬಿಡದ ಹಿನ್ನೆಲೆ ಸ್ಪೀಕರ್ ಯು. ಟಿ ಖಾದರ್ ಅವರು, ಮಳೆ ಅನಾಹುತಗಳ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಇದನ್ನು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಲ್ಲದೆ, ಅಜೆಂಡಾದಲ್ಲಿ ಇಲ್ಲದೇ ಇರುವ ವಿಚಾರಗಳ ಚರ್ಚೆಗೆ ಅವಕಾಶ ನೀಡಲಾಗಿದೆ. ನಿಯಮ ಬಾಹಿರವಾಗಿ ಕಲಾಪವಾಗುತ್ತಿದೆ. ಇತಿಹಾಸದಲ್ಲಿ ಈ ರೀತಿ ನಡೆದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕಲಾಪ ಪಟ್ಟಿ ಕಾಗದವನ್ನು ಹರಿದು ಎಸೆದರು.

ಈ ನಡುವೆ ಕಾಂಗ್ರೆಸ್ ಶಾಸಕರು ಮಾತನಾಡುವಾಗ ಪ್ರತಿಬಾರಿಯೂ ಆರ್. ಅಶೋಕ್, ಕಲಾಪ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸುತ್ತಾ ಬಂದರು. ಆದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಯಥಾ ರೀತಿ ಕಲಾಪ ಮುಂದುವರೆದಿತ್ತು. ಮಳೆಗಾಲದ ಅನಾಹುತಗಳ ಬಗ್ಗೆ ಆಡಳಿತ ಪಕ್ಷದ ಶಾಸಕರು ಸುದೀರ್ಘ ಚರ್ಚೆ ನಡೆಸಿದರು.

 

 

 

 

 

WhatsApp Group Join Now
Telegram Group Join Now
Share This Article