ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ: ರಾಜು ಕಾಗೆ

Ravi Talawar
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ: ರಾಜು ಕಾಗೆ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
WhatsApp Group Join Now
Telegram Group Join Now
ಕಾಗವಾಡ: ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಶಿಕ್ಷಣ ಇಲಾಖೆಯಿಂದ ರೂ. ೩೬ ಲಕ್ಷ ಅನುದಾನದಲ್ಲಿ ಪಟ್ಟಣದ ಮರಾಠಿ ಶಾಲೆಯಲ್ಲಿ ೨ ನೂತನ ಕೋಣೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ಅವರು ಸೋಮವಾರ ದಿ. ೦೮ ರಂದು ಪಟ್ಟಣದ ಮರಾಠಿ ಶಾಲೆಯ ಆವರಣದಲ್ಲಿ ನೂತನ ಕೋಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಸರ್ಕಾರಿ ಮರಾಠಿ ಶಾಲೆಯಲ್ಲಿ ಸುಮಾರು ೨೦೦ ವಿದ್ಯಾರ್ಥಿಗಳು ಓದುತ್ತಿದ್ದು, ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ನಿರ್ಮಾಣಗೊಂಡಿತ್ತು. ಇದನ್ನು ಗಮನಿಸಿ, ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಗುಣಮಟ್ಟದಿಂದ ನಿರ್ಮಾಣಗೊಳ್ಳುವಂತೆ ಎಸ್‌ಡಿಎಂಸಿ ಸದಸ್ಯರು, ಪಾಲಕರು ನಿಗಾ ವಹಿಸಬೇಕು. ಮತ್ತು ಗುತ್ತಿಗೆದಾರು ಗುಣಮಟ್ಟದ ಕೊಠಡಿಗಳನ್ನು ನಿರ್ಮಿಸಬೇಕೆಂದು ತಾಕೀತು ಮಾಡಿದರು.
ಇನ್ನೂ ಇದೇ ವೇಳೆ ಉರ್ದು ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೋಟಿಯನ್ನು ಉದ್ಘಾಟಿಸಿ, ಮಕ್ಕಳೊಂದಿಗೆ ಸಂವಾದ ಮಾಡಿದರು. ಉರ್ದು ಶಾಲೆಯ ಎಲ್ಲ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಉರ್ದು ಶಾಲೆಯನ್ನು ಈಗಿರುವ ಪ್ರಾಥಮಿಕ ತರಗತಿಗಳನ್ನು ಪ್ರೌಢ ಶಿಕ್ಷಣದವರೆಗೆ ವಿಸ್ತರಿಸುವಂತೆ ಮನವಿ ಮಾಡಿಕೊಂಡರು. ಅದಕ್ಕೇ ಶಾಸಕರು ಸಕಾರಾತ್ಮವಾಗಿ ಸ್ಪಂದಿಸಿ, ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಮಯದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕ ಸೌರವ ಪಾಟೀಲ, ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ರಮೇಶ ಚೌಗುಲೆ, ಪವನ ಪಾಟೀಲ, ಕಾಕಾ ಪಾಟೀ¯, ಚಿದಾನಂದ ಅವಟಿ, ಶಾಂತಿನಾಥ್ ಕರವ,  ಅಮೊಲ ವಡ್ಡರ,ಅವಿನಾಶ ದೇವಣೆ, ಉದಯ ಖೋಡೆ, ಮಲ್ಲಿಕಾರ್ಜುನ ಕಾಂಬ್ಳೆ   ಅಧಿಕಾರಿಗಳಾದ ಜಯಾನಂದ ಹಿರೇಮಠ, ಈರಣ್ಣಾ ವಾಲಿ, ಸಚೀನ ಗುರುವ, ಕೆ.ಕೆ. ಗುತ್ತಿಗೆದಾರರಾದ ಲಕ್ಷö್ಮಣ ವಡ್ಡರ, ಲಕ್ಷö್ಮಣ ಅವಳೆ, ಗಾವಡೆ, ಅಸ್ಲಂ ಮಕಾನದಾರ, ಶಖೀಲ ದ್ರಾಕ್ಷಿ, ಬಾಬು ಸೈಯದ, ಅಸ್ಲಮ ಜಮಾದಾರ, ಮೀರಾ ಮಕಾನದಾರ, ಹಮಜಾಖಾನ ಜಮಾದಾರ, ಮಲಿಕ ಮಕಾನದಾರ, ರಫೀಕ ಸಾರವಾನ,ಸೇರಿದಂತೆ  ಮರಾಠಿ ಮತ್ತು ಉರ್ದು ಶಾಲೆಯ ಮುಖ್ಯಾದ್ಯಪಕರು ಎಲ್ಲ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಪಾಲಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article