ಉಕ್ರೇನ್‌ ಮತ್ತು ರಷ್ಯಾ ಭೀಕರ ಕಾಳಗ; ಕದನ ವಿರಾಮಕ್ಕೆ ಒಪ್ಪಿದ ಪುಟಿನ್‌

Ravi Talawar
ಉಕ್ರೇನ್‌ ಮತ್ತು ರಷ್ಯಾ ಭೀಕರ ಕಾಳಗ; ಕದನ ವಿರಾಮಕ್ಕೆ ಒಪ್ಪಿದ ಪುಟಿನ್‌
WhatsApp Group Join Now
Telegram Group Join Now

ವಾಷಿಂಗ್ಟನ್(ಯುಎಸ್‌ಎ)​: ಉಕ್ರೇನ್​-ರಷ್ಯಾ ನಡುವೆ ಕದನ ವಿರಾಮ ಘೋಷಿಸುವ ಅಮೆರಿಕದ ಪ್ರಸ್ತಾಪವನ್ನು ವ್ಲಾಡಿಮಿರ್​ ಪುಟನ್​ ಒಪ್ಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಯುದ್ದ ಅಂತ್ಯಗೊಳಿಸುವ ಕುರಿತು ಮಂಗಳವಾರ ದೂರವಾಣಿ ಕರೆ ಮೂಲಕ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್‌ನ ಇಂಧನ ಮೂಲಸೌಕರ್ಯಕ್ಕಾಗಿ 30 ದಿನಗಳ ತಕ್ಷಣದ ಸಣ್ಣ ಕದನ ವಿರಾಮಕ್ಕೆ ರಷ್ಯಾ ಒಪ್ಪಿಗೆ ಸೂಚಿಸಿದೆ.

ಉಕ್ರೇನ್​ನ ಇಂಧನ ಹಾಗೂ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಲು ಪುಟಿನ್ ಮತ್ತು ಟ್ರಂಪ್ ನಡುವೆ ಪ್ರಾಥಮಿಕ ಒಪ್ಪಂದವಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮ ಟ್ರುಥ್​ನಲ್ಲಿ ಟ್ರಂಪ್​, “ಶಾಂತಿ ಒಪ್ಪಂದಕ್ಕೆ ಅನೇಕ ಅಂಶಗಳ ಕುರಿತು ಮಾತುಕತೆ ನಡೆಸಲಾಗಿದೆ. ಇದರ ಪರಿಣಾಮ ಕದನ ವಿರಾಮ ಪ್ರಕ್ರಿಯೆ ನಡೆಸಲಾಗುವುದು” ಎಂದಿದ್ದಾರೆ.

“ರಷ್ಯಾಧ್ಯಕ್ಷರ ಜೊತೆಗಿನ ತಮ್ಮ ಮಾತುಕತೆ ಫಲಪ್ರದವಾಗಿದೆ. ಎಲ್ಲಾ ಇಂಧನ ಮತ್ತು ಮೂಲಸೌಕರ್ಯದ ಮೇಲಿನ ಕದನ ವಿರಾಮಕ್ಕೆ ರಷ್ಯಾ ಒಪ್ಪಿದೆ. ಈ ಕದನ ವಿರಾಮವನ್ನು ತ್ವರಿತಗೊಳಿಸಲು ನಾವು ಕಾರ್ಯನಿರ್ವಹಿಸುತ್ತೇವೆ. ರಷ್ಯಾ ಮತ್ತು ಉಕ್ರೇನ್​ ನಡುವಿನ ಭೀಕರ ಯುದ್ಧವನ್ನು ಕೊನೆಗೊಳಿಸಬೇಕಿದೆ. ಆಗ ನಾನು ಅಧ್ಯಕ್ಷನಾಗಿದ್ದಿದ್ದರೆ ಈ ಯುದ್ದವೇ ಪ್ರಾರಂಭವಾಗುತ್ತಿರಲಿಲ್ಲ. ಯುದ್ಧದಲ್ಲಿ ಅನೇಕ ಸೈನಿಕರು ಸಾವನ್ನಪ್ಪಿದ್ದಾರೆ. ಪುಟಿನ್​ ಮತ್ತು ಝೆಲನ್ಸ್ಕಿ ಇಬ್ಬರೂ ಯುದ್ದ ಕೊನೆಗೊಳಿಸಲು ಬಯಸಿದ್ದಾರೆ. ಈ ಪ್ರಕ್ರಿಯೆ ಇದೀಗ ಪೂರ್ಣ ಪ್ರಮಾಣದಲ್ಲಿದೆ. ಮಾನವೀಯತೆ ದೃಷ್ಟಿಯಿಂದ ನಾವು ಕೆಲಸ ಮಾಡುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article