ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ : ಸಿದ್ದಲಿಂಗ ನಿರಂಜನ ದೇಶಿಕರು

Ravi Talawar
ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ : ಸಿದ್ದಲಿಂಗ ನಿರಂಜನ ದೇಶಿಕರು
WhatsApp Group Join Now
Telegram Group Join Now
 ಬಳ್ಳಾರಿ. ಮೇ. 10: ನಾನು ಈ ಮಠಕ್ಕೆ ಆಸ್ತಿ ಇದೆ ಹಣ ಇದೆ ಎಂದು ಬಂದಿಲ್ಲ ಈ ಮಠದ ಅಪಾರ ಭಕ್ತರನ್ನು ಕಂಡು ನನಗೆ ಅತ್ಯಂತ ಖುಷಿಯಾಗಿದೆ  ಮಠಕ್ಕೆ ನನ್ನನ್ನು ಕೊಟ್ಟೂರು ಸ್ವಾಮಿ ಶ್ರೀಗಳು ಉತ್ತರಾಧಿಕಾರಿಗಳ್ಳನ್ನಾಗಿ ನೇಮಕ ಮಾಡಿದ್ದಾರೆ. ಈ ಮಠದ ಭಕ್ತರು ಮತ್ತು ಈ ಗ್ರಾಮದ ಹಾಗೂ ಸುತ್ತಮುತ್ತಲ ಭಕ್ತಾದಿಗಳನ್ನು ಕಾಯುವುದು ನನ್ನ ಕರ್ತವ್ಯವಾಗಿದೆ, ನೀವೆಲ್ಲರೂ ನನಗೆ ಸಹಕಾರ ಕೊಟ್ಟಲ್ಲಿ ನಾನು ಈ ಈ ಮಠದಲ್ಲಿ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು  ಸಿದ್ದಲಿಂಗ ನಿರಂಜನ
ದೇಶಿಕ ಸ್ವಾಮಿಗಳು ತಿಳಿಸಿದರು.
 ಅವರಿಂದು ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಶಾಖಾ ಮಠದ ಚರ ಪಟ್ಟಾಧಿಕಾರ ಸಮಾರಂಭದಲ್ಲಿ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿ, ಗ್ರಾಮದ ಜನತೆ ನನಗೆ ಏನನ್ನು ಕೊಡಬೇಕಿಲ್ಲ, ಕೇವಲ ಅವರ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಲಿ ಅವರ ಮತ್ತು ಅವರ ಕುಟುಂಬವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದು ನನ್ನ ಧರ್ಮ, ಮಠದ ಭಕ್ತರಲ್ಲಿ ವಿನಂತಿ ಏನೆಂದರೆ ಯಾರೂ ಸಹ ಜಾತಿ ಭೇದ ಭಾವ ಮೇಲು ಕೀಳುಗಳನ್ನು ಎಣಿಸಬಾರದು ಎಲ್ಲರೂ ಶ್ರೀ ಕೊಟ್ಟೂರು ಸ್ವಾಮಿಗಳ ಭಕ್ತರು ಅವರೆಲ್ಲರನ್ನು ಒಂದೇ ರೀತಿಯಲ್ಲಿ ಕರೆದುಕೊಂಡು ಹೋಗಬೇಕಾಗಿರೋದು ಮಾನವ ಧರ್ಮ ಎಂದರು.
 ನಾನು ಈ ಮಠಕ್ಕೆ ಕಳೆದ 15 ವರ್ಷಗಳ ಹಿಂದೆ ಮಠದ ಸೇವಕನಾಗಿ  ಬಂದಿದ್ದೇನು ಆ ಸಂದರ್ಭದಲ್ಲಿ ನನಗೆ ಸ್ವಾಮೀಜಿಗಳು ನೀನು ಈ ಮಠದ ಮರಿಸ್ವಾಮಿ ಯಾಗಿ ಕೆಲಸ ಮಾಡಬೇಕು ಎಂದು ಆಗ್ನೇಯನ್ನು ನೀಡಿದ್ದರು ಅದೇ ರೀತಿಯಾಗಿ ನಾನು ಮರಿಸ್ವಾಮಿಯಾಗಿ ಮುಂದುವರಿದುಕೊಂಡು ಬಂದು ಇಂದು ಈ ಶಾಖ ಮಠಕ್ಕೆ ಗುರುಗಳಾಗಿ ನೇಮಕಗೊಂಡು ಪಟ್ಟಾಧಿಕಾರವನ್ನು ಅಲಂಕರಿಸುತ್ತಿದ್ದೇನೆ  ಎಂದರು.
 ಈ ಪಟ್ಟಾಧಿಕಾರ ಸಮಾರಂಭದಲ್ಲಿ ಉತ್ತಂಗಿ ಮಠದ ಸೋಮಶೇಖರ ಮಹಾಸ್ವಾಮಿಗಳು, ನೀಲಗುಂದ ವಿರಕ್ತಮಠದ ಚನ್ನಬಸವ ಮಹಾಸ್ವಾಮಿಗಳು, ಹಡಗಲಿಯ ನಿಡಗುಂದಿ ಮಠದ ಶಿವಾಚಾರ್ಯ ಮಹಾಸ್ವಾಮಿಗಳು, ನಂದಿಪುರ ಚರಂತೆಶ್ವರ ಮಠದ ಮಹೇಶ್ವರ ಮಹಾಸ್ವಾಮಿಗಳು, ಹೂವಿನಹಡಗಲಿಯ ಗವಿಮಠದ ಶಾಂತಿವೀರ ಮಹಾಸ್ವಾಮಿಗಳು, ಹಿರಿಮಲ್ಲನಕೇರಿ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು, ಹಂಪಸಾಗರ ಮಹಾದೇವ ತಾತ ಮಠದ ಶಿವಾಚಾರ್ಯ ಮಹಾಸ್ವಾಮಿಗಳು, ಅಡವಿ ಅಮರೇಶ್ವರ ಸುಕ್ಷೇತ್ರ ತೋಂಟದ ಮಹಾಸ್ವಾಮಿಗಳು  ಸೇರಿದಂತೆ
ಕಂಪ್ಲಿ ಶಾಸಕ ಗಣೇಶ್, ಮಾಜಿ ಸಚಿವ ಬಿ ಶ್ರೀರಾಮುಲು, ಅಲ್ಲಂ ಪ್ರಶಾಂತ್, ಮಸೀದಿಪುರ ಸಿದ್ದರಾಮನಗೌಡ ಸೇರಿದಂತೆ ನೂರಾರು ಜನ ಮಠದ ಭಕ್ತರು ಈ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article