ಬಳ್ಳಾರಿ, ಏಪ್ರಿಲ್ 04..: ನಗರದ ಬೆಳಗಲ್ ಕ್ರಾಸ್ ಸಮೀಪದಲ್ಲಿರುವ ಪಲ್ಸ್ ಹೆಲ್ತ್ ಕೇರ್ ಆಸ್ಪತ್ರೆ ತನ್ನ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆರೋಗ್ಯ ಸೇವೆಗಳ ಮೂಲಕ ವಿಶಿಷ್ಟವಾಗಿ ಆಚರಿಸಿದೆ.
ಈ ಅಂಗವಾಗಿ ಏಪ್ರಿಲ್ 2 ಮತ್ತು 3 ರಂದು ಹೊರರೋಗಿಗಳಿಗೆ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕಿವಿ-ಮೂಗು-ಗಂಟಲು (ಇಎನ್‌ಟಿ), ಮಕ್ಕಳ ವೈದ್ಯಕೀಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉಚಿತ ಓಪಿಡಿ ಸಲಹೆ ನೀಡಲಾಗಿದೆ.
ಇದೇ ವೇಳೆ, ಇಸಿಜಿ ಹಾಗೂ ಎಂಡೋಸ್ಕೋಪಿ ಪರೀಕ್ಷೆಗಳಿಗೆ ಶೇಕಡಾ 50 ರಿಯಾಯಿತಿ, ಫಾರ್ಮಸಿ ಮತ್ತು ಲ್ಯಾಬ್ ಪರೀಕ್ಷೆಗಳಿಗೆ ಶೇಕಡಾ 10 ರಿಯಾಯಿತಿ ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಿಶಾಲ್ ಜೈನ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಕಳೆದ ಫೆಬ್ರವರಿಯಲ್ಲಿ ಆಯೋಜಿಸಿದ ಉಚಿತ ಮೆಗಾ ಹೆಲ್ತ್ ಕ್ಯಾಂಪ್‌ನಲ್ಲಿ 500ಕ್ಕೂ ಹೆಚ್ಚು ಜನರು ಸೇವೆ ಪಡೆದಿದ್ದಾರೆ. ಉತ್ತಮ ಆರೋಗ್ಯದತ್ತ ಹೆಜ್ಜೆ ಇಡಲು ಸಾರ್ವಜನಿಕರು ನಮ್ಮ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಮಿಶಾಲ್ ಜೈನ್, ಆಯೇಷಾ, ಚೇತನ, ಲ್ಯಾಬ್ ಟೆಕ್ನಿಶಿಯನ್ ದರ್ವೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಈ ಆರೋಗ್ಯ ಶಿಬಿರವು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ, ಸಮೀಪದಲ್ಲೇ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಲು ಸಹಕಾರಿ ಆಗಿದೆ.


