ದೇಶಾದ್ಯಂತ ಸಾಕಷ್ಟು ಇಂಧನ ಸಂಗ್ರಹ; ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ  ಪ್ರಕಟಣೆ

Ravi Talawar
ದೇಶಾದ್ಯಂತ ಸಾಕಷ್ಟು ಇಂಧನ ಸಂಗ್ರಹ; ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ  ಪ್ರಕಟಣೆ
WhatsApp Group Join Now
Telegram Group Join Now

ನವದೆಹಲಿ, ಮೇ 9: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ದೇಶಾದ್ಯಂತ, ಅದರಲ್ಲೂ ಉತ್ತರ ಭಾರತದಲ್ಲಿ ಜನರು ಪೆಟ್ರೋಲ್ ಖರೀದಿಗೆ  ಮುಗಿಬಿದ್ದಿದ್ದಾರೆ. ಪೆಟ್ರೋಲ್ ಬಂಕ್​​​​ಗಳಲ್ಲಿ ಉದ್ದುದ್ದ ಕ್ಯೂ ಇರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆ  ಪ್ರಕಟಣೆ ನೀಡಿದ್ದು, ದೇಶದಲ್ಲಿ ಇಂಧನ ಸಂಗ್ರಹ ಸಾಕಷ್ಟಿದೆ ಎಂದು ತಿಳಿಸಿದೆ.

‘ಇಂಡಿಯನ್ ಅಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ಸಂಗ್ರಹ ಇಟ್ಟುಕೊಂಡಿದೆ. ನಮ್ಮ ಸಪ್ಲೈ ಲೈನ್​​​ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂಧನ ಖರೀದಿಸುವ ದಾವಂತ ಬೇಡ. ನಮ್ಮ ಎಲ್ಲಾ ಬಂಕ್​​​ಗಳಲ್ಲಿ ಇಂಧನ ಮತ್ತು ಎಲ್​​ಪಿಜಿ ಸಿಗುತ್ತವೆ’ ಎಂದು ಎಕ್ಸ್ ಪೋಸ್ಟ್​​​ನಲ್ಲಿ ಐಒಸಿಎಲ್ ಹೇಳಿದೆ.ʼ

ಮೊನ್ನೆಯಿಂದ ಪಾಕಿಸ್ತಾನವು ಭಾರತದ ಗಡಿಭಾಗದ ಪ್ರದೇಶಗಳ ಮೇಲೆ ಯಥೇಚ್ಛವಾಗಿ ಕ್ಷಿಪಣಿ, ಡ್ರೋನ್, ಬಾಂಬ್, ಮದ್ದುಗುಂಡುಗಳ ದಾಳಿ ಮಾಡುತ್ತಿದೆ. ಕಾಶ್ಮೀರ, ಪಂಜಾಬ್, ರಾಜಸ್ಥಾನ ರಾಜ್ಯಗಳಲ್ಲಿ ಪಾಕ್ ಗಡಿ ಬಳಿ ಇರುವ ಪ್ರದೇಶಗಳಲ್ಲಿ ಪಾಕಿಸ್ತಾನದ ಶೆಲ್​​​ಗಳು ಬಿದ್ದಿವೆ. ಈ ಭಾಗದ ಜನರು ಸಾಕಷ್ಟು ದೈನಂದಿನ ಬಳಕೆಯ ವಸ್ತುಗಳನ್ನು ಖರೀದಿಸತೊಡಗಿದ್ದಾರೆ. ಅದರಲ್ಲಿ ಪೆಟ್ರೋಲ್, ಡೀಸಲ್, ಗ್ಯಾಸ್ ಇತ್ಯಾದಿಯನ್ನೂ ಖರೀದಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article