ವಿಜಯಪುರ,ಎ,೧೧: ಬುದ್ಧ ಬಸವ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪುಸ್ತಕ ಮೇಳದ ಮೂಲಕ ಹಮ್ಮಿಕೊಂಡಿರುವ ಪುಸ್ತಕ ಮೇಳ ಸಾಹಿತ್ಯ ಮತ್ತು ವೈಚಾರಿಕ ಕ್ಷೇತ್ರದ ಮಾದರಿಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಪ್ರಕಾಶನ ಸಂಸ್ಥೆಗಳು ಲೇಖಕರು ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದು ಸಾರ್ವಜನಿಕರು ಮೇಳದಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಾಗಲಕೋಟ ವಿಶ್ವ ವಿದ್ಯಾಲಯದ ಕುಲಸಚಿವ ಸೋಮಲಿಂಗ ಗೆಣ್ಣೂರ ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ ೧೦ರಿಂದ ೧೪ರ ವರೆಗೆ ೫ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ನಿಮಿತ್ಯ ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳದ ವೇದಿಕೆಯ ವರೆಗೆ ಹಮ್ಮಿಕೊಂಡ ಸಾಹಿತಿಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಂ ಪಾಟೀಲ ಗಣಿಹಾರ, ಶಶಿಕಾಂತ ಹೊನವಾಡಕರ, ಅಪ್ಪಾಸಾಹೇಬ ಯರನಾಳ,ಸುರೇಶ ಜೀಬಿ, ಲಕ್ಷ್ಮಣ ಹಂದ್ರಾಳ, ಸೋಮು ರಣದೇವಿ, ಸಂಗಮೇಶ ಸಗರ, ಬಸವರಾಜ ಸೂಳಿಬಾವಿ, ಅನಿಲ ಇಕ್ಕಡೆ, ಸುರೇಶ ಬಿಜಾಪುರ, ವೈ ಎಸ್ ಗುಣಕಿ, ಚೆನ್ನು ಕಟ್ಟಿಮನಿ, ಮೀನಾಕ್ಷಿ ಸಿಂಗೆ ನೀಲಾಂಬಿಕಾ ಬಿರಾದಾರ, ರೇಣುಕಾ ಕೋಟ್ಯಾಳ, ಬೋಗೇಶ ಸೋಲಾಪುರ, ಸಂಘರ್ಷ ಹೊಸಮನಿ, ನಾಗರಾಜ ಲಂಬು, ಲಾಯಪ್ಪ ಇಂಗಳೆ ಶರಣು ಕಿರಣಗಿ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.
ಸಾರ್ವಜನಿಕರು ಪುಸ್ತಕ ಮೇಳದ ಸದುಪಯೋಗ ಪಡೆದುಕೊಳ್ಳಬೇಕು : ಸೋಮಲಿಂಗ ಗೆಣ್ಣೂರ


