ನೇಸರಗಿ: ಗ್ರಾಮದ ಮನೆಗಳಿಗೆ ವಾಣಿಜ್ಯ ತೆರಿಗೆ ಹೆಚ್ಚಳ ಖಂಡಿಸಿ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಇತ್ತೀಚೆಗೆ ಗ್ರಾಮ ಪಂಚಾಯತಿಯಿoದ ಅತಿಯಾದ ವಾಣಿಜ್ಯ ತೆರಿಗೆಯನ್ನು ಈ ಮೊದಲಿನಕ್ಕತ ಹತ್ತು ಪಟ್ಟು ಹೆಚ್ಚಿಗೆ ಹಾಕುತ್ತಿದ್ದಾರೆ. ರಸ್ತೆ ಬದಿಯ ಅಂಗಡಿಯವರಿಗೆ ಗ್ರಾ.ಪಂ ಯವರು ಅತಿಯಾದ ವಾಣಿಜ್ಯ ತೆರಿಗೆ ಅತಿಯಾಗಿ ಹಾಕುತ್ತಿದ್ದಾರೆ.
ಇತ್ತೀಚೆಗೆ ಗ್ರಾಮ ಪಂಚಾಯತಿಯಿoದ ಅತಿಯಾದ ವಾಣಿಜ್ಯ ತೆರಿಗೆಯನ್ನು ಈ ಮೊದಲಿನಕ್ಕತ ಹತ್ತು ಪಟ್ಟು ಹೆಚ್ಚಿಗೆ ಹಾಕುತ್ತಿದ್ದಾರೆ. ರಸ್ತೆ ಬದಿಯ ಅಂಗಡಿಯವರಿಗೆ ಗ್ರಾ.ಪಂ ಯವರು ಅತಿಯಾದ ವಾಣಿಜ್ಯ ತೆರಿಗೆ ಅತಿಯಾಗಿ ಹಾಕುತ್ತಿದ್ದಾರೆ.
ಇದರಿಂದ ರಸ್ತೆ ಬದಿಯ ಬಡ ವ್ಯಾಪಾರಿಗಳಿಗೆ ಬಹಳೇ ತೊಂದರೆಯಾಗಿದೆ. ಇತ್ತೀಚೆಗಿನ ನಿಯಮಾವಳಿಗಳಂತೆ ಈ ಗ್ರಾಮವನ್ನು ವಾಣಿಜ್ಯ ನಗರವನ್ನಾಗಿ ಕಂಪ್ಯೂಟರ ಸಾಪ್ಟವೇರ ಪಂಚತoತ್ರ-೨ದಲ್ಲಿ ದಾಖಲಿಸಿಕೊಳ್ಳಲಾಗಿದೆ. ಇದರಿಂದಾಗಿ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನೇಸರಗಿ ಗ್ರಾಮದ ಮೂಲಕ ಹಾಯುವ ಬೈಲಹೊಂಗಲ- ಗೋಕಾಕ ರಸ್ತೆಗೆ ಹೊಂದಿ ಇರುವ ಮನೆ ಹಾಗೂ ಅಂಗಡಿಗಳಿಗೆ ಸೇರಿದಂತೆ ಗ್ರಾಮದ ಮನೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ಗ್ರಾಮದಲ್ಲಿ ಮಳೆ ಆಧಾರಿತ ವ್ಯವಸಾಯವಿದ್ದು, ಇಲ್ಲಿ ನೀರಾವರಿಯ ಯಾವುದೇ ರೀತಿಯ ಸೌಲಭ್ಯಗಳಿರುವುದಿಲ್ಲ ಹಾಗೂ ಕೈಗಾರಿಕೆಗಳೂ ಇರುವುದಿಲ್ಲ. ಹಾಗಾಗಿ ಇಲ್ಲಿ ವಾಣಿಜ್ಯ ತೆರಿಗೆ ಪದ್ಧತಿಯನ್ನು ಅಳವಡಿಸುವುದು ಸರಿಯಲ್ಲ. ಒಂದು ವರ್ಷದಿಂದ ತೆರಿಗೆ ಹೆಚ್ಚಳವಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ತೆರಿಗೆ ಹೆಚ್ಚಳ ಮಾಡಬಾರದು ಎಂದರು.
ಗ್ರಾ.ಪo ಸದಸ್ಯರು, ಗ್ರಾಮಸ್ಥರು ಸೇರಿಕೊಂಡು ಬೆಳಗಾವಿ ಜಿ.ಪಂ ಕಾರ್ಯನಿರ್ವಾಕರಿಗೆ ಬೇಟಿಯಾಗಿ ಸಮಸ್ಯೆ ತಿಳಿಸಲಾಗುವದು ಎಂದು ಪ್ರತಿಭಟನಾಕಾರರು ತಿಳಿಸಿದರು.
ಪಿಡಿಓ ಅವಿನಾಶ ಮಾತನಾಡಿ, ಸರಕಾರದ ನಿಯಮಾವಳಿಯಂತೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ನಾಗರಿಕರು ಆತಂಕಗೊಳ್ಳಬಾರದು ಎಂದು ಮನವಿ ಮಾಡಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮನ್ನವರ, ನಾಗರಿಕರಾದ ಬಸನಗೌಡ ಚಿಕ್ಕನಗೌಡರ, ಮಲ್ಲೇಶಪ್ಪ ಮಾಳನ್ನವರ, ರವಿ ಸೋಮನ್ನವರ, ಮಾಜಿ ಸೈನಿಕರ ಸಂಘದ ಸದಸ್ಯರು, ಗ್ರಾ.ಪಂ ಸದಸ್ಯರು, ನಾಗರಿಕರು ಪಾಲ್ಗೊಂಡಿದ್ದರು.