ವಾಲಿದ ವಿದ್ಯುತ್ ಕಂಬಗಳ ಸ್ಥಳಾಂತರ; ಕೆಇಬಿ ತ್ವರಿತ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ!

Ravi Talawar
ವಾಲಿದ ವಿದ್ಯುತ್ ಕಂಬಗಳ ಸ್ಥಳಾಂತರ;  ಕೆಇಬಿ ತ್ವರಿತ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ!
WhatsApp Group Join Now
Telegram Group Join Now

ಅಂಕಲಗಿ: ಬೆಳಗಾವಿ ಕಣಬರ್ಗಿ ರಸ್ತೆಯಲ್ಲಿಯ ರಾಮತೀರ್ಥ ನಗರದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಬಳಿಯ ವಾಲಿದ. ವಿದ್ಯುತ್ ಕಂಭಗಳನ್ನು ತಕ್ಷಣ ಕಿತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಬೆಳಗಾವಿ ಕೆಇಬಿ ಹಿರಿ,ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಹಸದ ಕಾರ್ಯಕ್ಕೆ ಎಲ್ಲೆಡೆ ಸಾರ್ವಜನಿಕರಿಂದ ಮತ್ತು ಭಕ್ತರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಕುರಿತು ಕರ್ನಾಟಕ ಟೈಮ್ಸ್ ದಿನಪತ್ರಿಕೆಯಲ್ಲಿ ದಿನಾಂಕ ೧೬ ಆಗಷ್ಟ ದಂದು ಘಟನೆಯ ವಿಶೇಷ ವರದಿ ಮಾಡಿದ್ದರ ಪ್ರಯುಕ್ತ ತಕ್ಷಣ ಕೆಇಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಕಾರ್ಯಪ್ರವರ್ತರಾಗಿ ವಾಲಿದ ವಿದ್ಯುತ್ ಕಂಭಗಳನ್ನು ಬೇರೆಡೆ ಸ್ಥಳಾಂತರಿಸಿ ಆಗಬಹುದಾದ ಅವಗಢಕ್ಕೆ ತೆರೆ ಎಳೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸೆಕ್ಷನ್ ಆಫೀಸರ್ ಶೀತಲ್ ಸನದಿ ಇಲಾಖೆಯ ಗಮನಕ್ಕೆ ಬಾರದೆ ಇರುವ ಇಂಥ ಸಮಸ್ಯೆಗಳ ಕುರಿತು ರಹಾವಾಸಿಗಳು ಇಲಾಖೆಯ ಗಮನಕ್ಕೆ ತಂದರೆ ತ್ವರಿತವಾಗಿ ಸ್ಪಂದಿಸುವದಾಗಿ ಮತ್ತು ಹಗಲಿರುಳು ಎನ್ನದೆ ಸಮಾಜದೊಂದಿಗೆ ಕೈ ಜೋಡಿಸುವದಾಗಿ ಹೇಳಿದರು.

ಕೆಇಬಿ ಇಲಾಖೆಯ ಈ ತ್ವರಿತ ಕಾರ್ಯಕ್ಕೆ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಆಡಳಿತ ಮಂಡಳಿ , ಸಾರ್ವಜನಿಕರು ಮತ್ತು ದೇವಸ್ಥಾನದ ಭಕ್ತರು ಕೆಇಬಿ ಸೆಕ್ಷನ್ ಆಫೀಸರ್ ಶೀತಲ್ ಸನದಿ ಸೇರಿದಂತೆ ಸಿಬ್ಬಂದಿ ವರ್ಗದವರಾದ ಮಹೇಶ ನಾವಲಗಟ್ಟಿ, ರಾಹುಲ್, ಮಹೇಶ.ಎಚ್, ಕಲೀಮ್ ಮತ್ತು ಹಿರಿ,ಕಿರಿಯ ಅಧಿಕಾರಿಗಳನ್ನು ಅಭಿನಂದಿಸಿ ಶ್ಲಾಘಿಸಿದ್ದಾರೆ .

ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ, ಸದಸ್ಯರಾದ ಮಲ್ಲಪ್ಪ ದಂಡಿನವರ, ಸಿದ್ದಪ್ಪ.ತೇರಣಿ, ಬಸವರಾಜ ಗೌಡಪ್ಪಗೋಳ, ಈರಯ್ಯಾ ಖೋತ, ಶಿವನಪ್ಪಾ ಕಮತ್ ಉಪಸ್ತಿತರಿದ್ದರು.

ವರದಿ, ಸುರೇಶ ಉರಬಿನಹಟ್ಟಿ

WhatsApp Group Join Now
Telegram Group Join Now
Share This Article