೨ನೇ ಬೆಳೆಗೆ ನೀರು ಒದಗಿಸಿ ಇಲ್ಲ ಪರ್ಯಾಯ ಕೆಲಸ ನೀಡಿ 

Ravi Talawar
೨ನೇ ಬೆಳೆಗೆ ನೀರು ಒದಗಿಸಿ ಇಲ್ಲ ಪರ್ಯಾಯ ಕೆಲಸ ನೀಡಿ 
WhatsApp Group Join Now
Telegram Group Join Now
ಬಳ್ಳಾರಿ: 13.ತುಂಗಾಭದ್ರ ಜಾಲಾಶಯದಿಂದ ೨ನೇ ಬೆಳೆಗೆ ನೀರು ಹರಿಸಬೇಕು ಅಥವಾ ಈ ಭಾಗದ ಎಲ್ಲಾ ರೈತರಿಗೆ ಪರ್ಯಾಯ ಕೆಲಸ ಒದಗಿಸಲು  ಆಗ್ರಹಿಸಿ ಎಐಕೆಕೆಎಂಎಸ್ ರೈತ ಸಂಘಟನೆಯಿAದ  ನೀರಾವರಿ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಬಳ್ಳಾರಿ, ವಿಜಯ ನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರು ತಾವು ಬೆಳೆಯುವ ಎರಡನೇ ಬೆಳೆಯ ಮೇಲೆ ಸಾಕಷ್ಟು ಅವಲಂಬಿತರಾಗಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ರೈತರಿಗೆ ಈಗ ಒಂದು ಬೆಳೆ ನಷ್ಟವಾಗುತ್ತಿವೆ. ಸರ್ಕಾರ ಮೊದಲೇ ಇದರ ಬಗ್ಗೆ ಗಮನ ಹರಿಸಬೇಕಿತ್ತು. ಮೊದಲ ಬೆಳೆಗಿಂತ ಹೆಚ್ಚಾಗಿ ಅವರಿಗೆ ಎರಡನೇ ಬೆಳೆಯಿಂದ ಕಡಿಮೆ ವೆಚ್ಚದಲ್ಲಿ, ಹೆಚ್ಚಿನ ಆದಾಯ ಬರುವಂತಾಗುತ್ತಿತ್ತು. ಆದ್ದರಿಂದ ಈ ನಾಲ್ಕು ಜಿಲ್ಲೆಗಳ ರೈತರಿಗೆ (ಎಲ್.ಎಲ್.ಸಿ ನಾಲೆಗೆ) ಎರಡನೇ ಬೆಳೆಗೆ ನೀರು ಹರಿಸಲು ಸರ್ಕಾರ ಮುಂದಾಗಬೇಕು. ಈಗಾಗಲೇ ಸರ್ಕಾರ ತಮ್ಮ ನಿರ್ದಾರ ಮಾಡುವುದನ್ನು ಮುಂದುಡುತ್ತಲೇ ಇದೆ.  ಇದೇ ತಿಂಗಳು ೫ ರಂದು ನಡೆಯಬೇಕಿದ್ದ  ಜಲಾಶಯದ ಸಲಹಾ ಸಮಿತಿ ಸಭೆಯನ್ನು ವಿನಾಕಾರಣ ೧೪ ಕ್ಕೆ ಮುಂದೂಡಿ, ರೈತರನ್ನು ಗೊಂದಲದಲ್ಲಿ ಸಿಲುಕುವಂತೆ ಮಾಡಿದ್ದಾರೆ. ಮತ್ತು ಇದರಿಂದ ಅವರಿಗೆ ಅನಾನುಕೂಲವಾಗಿದೆ. ಆದ್ದರಿಂದ ಕೂಡಲೇ ರೈತರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕು.
ಹಾಗೆಯೇ, ಎಚ್.ಎಲ್.ಸಿ ಕಾಲುವೆಗೆ ಪ್ರತಿ ವರ್ಷದಂತೆ ಜನವರಿ ೧೦ ರ ವರೆಗೆ ನೀರನ್ನು ಹರಿಸಿದ್ದಲ್ಲಿ ಈ ಭಾಗದ ರೈತರು ತಾವು ಬೆಳೆದ ಬೆಳೆ ಕೈಸೇರಲು ಸಾಧ್ಯ. ಹಾಗಾಗಿ ಇವರಿಗೆ ನೀರನ್ನು ಒದಗಿಸಬೇಕು.
ಜೊತೆಗೆ,  ಜಲಾಶಯದ ತೊಂದರೆಯಲ್ಲಿರುವ ಗೇಟ್‌ಗಳನ್ನು ತಜ್ಞರ ಸಲಹೆ ಮೇರೆಗೆ  ಭದ್ರವಾಗಿ ನಿರ್ಮಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು.
ನೀರು ಹರಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ರೈತರಿಗೆ ಪಾರ್ಯಾಯ ಕೆಲಸಗಳನ್ನು ಒದಗಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು, ಮತ್ತು ಈಗಿರುವ ಭತ್ತದ ಬೆಳೆಗೆ ೩೫೦೦ ರೂ ಮತ್ತು ಇತರ ಬೆಳೆಗೆ ಉತ್ತಮ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಹೊನ್ನೂರಪ್ಪ, ಮಾರೆಪ್ಪ, ಬಸವರಾಜ್, ರುದ್ರಯ್ಯ, ಕಾಸಿಂ ಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article