ಗ್ರಾಮೀಣ ಭಾಗದಲ್ಲಿ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಪ್ರತಿಭಟನೆ

Pratibha Boi
ಗ್ರಾಮೀಣ ಭಾಗದಲ್ಲಿ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆ ಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಪ್ರತಿಭಟನೆ
WhatsApp Group Join Now
Telegram Group Join Now
ವಿಜಯನಗರ:(ಡಿ.13), ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ತಾಲೂಕಿನ   ಗ್ರಾಮಗಳಾದ ಹಳೆ ಎಣಿಗಿ ಬಸಾಪುರ, ಹೊಸ ಎಣಿಗಿ ಬಸಾಪುರ ಮತ್ತು  ಹಂಪಸಾಗರ-3 ಗ್ರಾಮಗಳಲ್ಲಿ  ವಿದ್ಯಾರ್ಥಿಗಳು ಮತ್ತು ಊರಿನ ಪೋಷಕರು AIDSO ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ   ಮ್ಯಾಗ್ನೆಟ್ ಹೆಸರಿನಲ್ಲಿ ನಮ್ಮೂರಿನ ಸರ್ಕಾರಿ ಶಾಲೆ ಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಪ್ರತಿಭಟನೆಯನ್ನು ಮಾಡಿದರು.
ಸರ್ಕಾರಿ ಶಾಲೆ ಉಳಿಸಲು ಒತ್ತಾಯಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಏಐಡಿಎಸ್ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ರವಿಕಿರಣ್ ಜೆಪಿ ಅವರು ಮಾತನಾಡುತ್ತಾ.., ‘ಈ ಊರಿನ ಶಾಲೆಯನ್ನು ಮುಚ್ಚಿದರೆ ಒಂದನೇ ತರಗತಿಯ ಚಿಕ್ಕ ಮಕ್ಕಳು ಮೂರು ಮತ್ತು ನಾಲ್ಕು ಕಿಲೋ ಮೀಟರ್ ಇರುವ ಹಂಪಸಾಗರ-2 ಶಾಲೆಗೆ ಹೋಗೋದು ಬಹಳ ಕಷ್ಟ, ಹೀಗಾದರೆ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸುತ್ತಾರೆ.
 140 ವಿದ್ಯಾರ್ಥಿಗಳು ಇರುವ ಹಂಪಸಾಗರ-3 ಶಾಲೆಯನ್ನು ಸಹ ಮುಚ್ಚಲಾಗುತ್ತಿದೆ. ಈಗಾಗಲೇ ಮುಚ್ಚುವ ಶಾಲೆಗಳ ಪಟ್ಟಿಯನ್ನು ಬಿಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೇ 738 ಶಾಲೆಗಳನ್ನು ಮುಚ್ಚಲಗುತ್ತಿದೆ. ಶಿಕ್ಷಣ ಸಚಿವರು ಬೆಳಗಾವಿ ಅಧಿವೇಶನದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಯನ್ನು ಮುಚ್ಚುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇಲಾಖೆಯಿಂದ ಶಾಲೆ ಮುಚ್ಚುವ ಆದೇಶ ಮತ್ತು ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿರುವ ಸರ್ಕಾರ ಬಡವರಿಂದ ಶಿಕ್ಷಣವನ್ನು ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಎಚ್ .ಕೆ ಪಾಟೀಲ್ ಅವರು ಈ ಯೋಜನೆಯನ್ನು ಜಾರಿ ಮಾಡಲು ಕೆಲವು ಸರ್ಕಾರಿ ಶಾಲೆಗಳನ್ನು ಮುಚ್ಚ ಬೇಕಾಗುತ್ತದೆ. ಸರ್ಕಾರದ ಆದೇಶಗಳು ಹೇಳುವುದು ಒಂದು, ಸಚಿವರ ಹೇಳಿಕೆ ಮತ್ತೊಂದು-ಜನರು ಯಾವುದನ್ನು ನಂಬಬೇಕು? ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ಕೂಡಲೇ ರಾಜ್ಯ ಸರ್ಕಾರ ತನ್ನ ಅ.15ರ ಆದೇಶದಲ್ಲಿ ನಮೂದಿಸಿರುವ ವಿಲೀನದ ಅಂಶವನ್ನು ಹಿಂಪಡೆಯಲಿ ಜೊತೆಗೆ ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದಿಲ್ಲ. ಎಂದು ಲಿಖಿತ ಆದೇಶ ಹೊರಡಿಸಲಿ ಎಂದು ಒತ್ತಾಯಿಸಿದರು.
AIDSO ಜಿಲ್ಲಾ ಸದಸ್ಯರಾದ ಉಮಾದೇವಿ, ಊರಿನ ಗ್ರಾಮಸ್ಥರಾದ ವಿನಾಯಕ, ಗ್ರಾಮಪಂಚಾಯಿತಿ ಸದಸ್ಯರಾದ ಸಂತೋಷ್, ಶ್ರೀನಿವಾಸ್, ಹನುಮಂತಪ್ಪ, ಕರಿಬಸಪ್ಪ, ನಾಗರಾಜ್, ನಿಂಗಪ್ಪ, ಕೃಷ್ಣಪ್ಪ ಹಾಗೂ ಮೂರು ಊರಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿದ್ದರು.
WhatsApp Group Join Now
Telegram Group Join Now
Share This Article