ಬೆಳಗಾವಿ: (ಡಿ.11) ರಾಜ್ಯದ ಗ್ರಾಮ ಪಂಚಾಯತ ಅರಿವು ಕೇಂದ್ರ ಗ್ರಂಥಾಲಯಗಳ ಗ್ರಂಥಪಾಲಕರಿಗೆ ಕನಿಷ್ಠ ವೇತನವನ್ನು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ ಇಲಾಖೆ ವತಿಯಿಂದ ದಿ. 16-8-2023 ಜಾರಿಯಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ನಮ್ಮ ವೇತನವನ್ನು ರೂ. 19201/- ಮತ್ತು ತುಟ್ಟಿಬಟ್ಟೆ ರೂ. 7201/- ಪಾವತಿಸಲು ಆದೇಶ ನೀಡಲಾಗಿದೆ. ಆದರೆ ಕೇವಲ ರೂ 12000/- ಮಾತ್ರ ಸಂದಾಯ ಮಾಡುತ್ತಿದ್ದು ರೂ 7201/- ತುಟ್ಟಿಬಟ್ಟೆ ನೀಡಿತ್ತಿಲ್ಲ. ಪ್ರಸಕ್ತ ಸರಿಯಾದ ಸಮಯಕ್ಕೆ ವೇತನ ನೀಡದ ಕಾರಣ ಇಬ್ಬರು ಗ್ರಂಥಪಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದು. ಸರ್ಕಾರ ಶೀಘ್ರವಾಗಿ ಗ್ರಾತಾಪಲಕರಿಗೆ ರೂ. 19201/- ಗಳ ವೇತನವನ್ನು ನೇರವಾಗಿ ನೀಡಬೇಕೆಂದು ಕರ್ನಾಟಕ ರಾಜ್ಯ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಗ್ರಂಥಪಾಲಕರ ನೌಕರರ ಸಂಘ ಅಗ್ರಹಿಸಿದೆ.
ಈ ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ಶಿವಶರಣಪ್ಪ ಕಾಳಗಿ, ರಾಜ್ಯಾಧ್ಯಕ್ಷರಾದ ಪಂಚನಗೌಡ ಪಾಟೀಲ, ಸಂಘದ ಪದಾಧಿಕಾರಿಗಳು, ರಾಜ್ಯದ ಗ್ರಂಥಪಾಲಕರು ಉಪಸ್ಥಿತರಿದ್ದರು.


