ಯರಗಟ್ಟಿ : ಪಟ್ಟಣದ ಹಿಂದೂ ಸಮುದಾಯಕ್ಕೆ ಮೀಸಲಿರುವ ಸ್ಮಶಾನ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಮತ್ತು ಸ್ಮಶಾನದಲ್ಲಿ ಅಧಿಕೃತ ರಸ್ತೆ ಕಾಮಗಾರಿ ಮಾಡುತ್ತಿರುವುದನ್ನ ಆಗ್ರಹಿಸಿ ವೀರಶೈವ ಲಿಂಗಾಯತ ಸಮುದಾಯದಿಂದ ಮಂಗಳವಾರ ಪಟ್ಟಣದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಈ ಪಟ್ಟಣದಲ್ಲಿ ಹಿಂದೂ ಸಮುದಾಯಕ್ಕೆ ಸುಮಾರು ೬ ಎಕರೆ ಸ್ಮಶಾನ ಜಾಗ ಮೀಸಲಿದ್ದು, ಇದರಲ್ಲಿ ೪ ಎಕರೆ ಮಾತ್ರ ಸ್ಮಶಾನಕ್ಕೆ ಜಾಗ ಉಳಿದಿದೆ. ಇದರಲ್ಲಿ ೨ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಇದನ್ನು ತೆರೆವುಗೊಳಿಸಬೇಕು ಎಂದು ಆಗ್ರಹಿಸಿದರು.
ಲಿಂಗಾಯತ ಸಮಾಜದ ಮುಖಂಡ ಕುಮಾರ ಹಿರೇಮಠ ಮಾತನಾಡಿ ಹಿಂದೂ ಸಮಾಜದ ಸ್ಮಶಾನದಲ್ಲಿ ಪಟ್ಟಣ ಪಂಚಾಯಿತಿಯಿಂದ ರಸ್ತೆ ಕಾಮಗಾರಿಗೆ ಪ್ರಾರಭಿಸಿದ್ದು ಕೂಡಲೇ ಕಾಮಗಾರಿ ಸ್ಥಗಿತಗೋಳಿಸಬೇಕ ಹಾಗೂ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಿಸಲಿಟ್ಟ ಸ್ಮಶಾನ ಜಾಗ ಗುರುತಿಸಿ ಹದ್ದುಬಸ್ತ ಮಾಡಬೇಕು ಎಂದು ಹೇಳಿದರು.
ಈ ವೇಳೆ ಮಹಾಂತೇಶ ಜಕಾತಿ, ಶಶಿಕಾಂತ ಹಾದಿಮನಿ, ಶಿವಾನಂದ ಯರಗಣವಿ, ರಾಜೇಂದ್ರ ವಾಲಿ, ವಿರೂಪಾಕ್ಷ ಜಕಾತಿ, ದುಂಡಪ್ಪ ಉಪ್ಪಿನ, ಸುರೇಶ ತಲ್ಲೂರ, ಶಿವಾನಂದ ಪಟ್ಟಣಶೆಟ್ಟಿ, ರಾಜು ಕತ್ತಿಶೆಟ್ಟಿ, ದುಂಡಯ್ಯ ಹಿರೇಮಠ, ತಮ್ಮಣ್ಣಾ ವಾಲಿ, ಬಸವರಾಜ ಮಲಶೆಟ್ಟಿ, ಬಸವಪ್ರಭು ಪಾಟೀಲ, ಸಿದ್ದಲಿಂಗಪ್ಪ ಗಲಗಲಿ, ಶಿವಿನಂದ ಉಪ್ಪಿನ, ಬಾಲಕೃ? ಹಡಪದ, ಶ್ರೀಶೈಲ ಹಾರುಗೇರಿ, ಪ್ರವೀಣ ಬೆಣ್ಣಿ, ಶ್ರೀಧರ ಉಪ್ಪಿನ, ರಾಜು ಬೆಣ್ಣಿ, ರಮೇಶ ಮುರಗೋಡ, ವಿನಾಯಕ ಅಂತನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೇಳಿಕೆ: ಸ್ಮಶಾನ ಭೂಮಿ ದೊರೆಯುವುದು ಈಗ ಕ?ವಾಗುತ್ತಿರುವುದರಿಂದ ಸ್ಮಶಾನ ಭೂಮಿಗಳ ಒತ್ತುವರಿ ಸರ್ವೆ ನಡೆಸಿ, ಬೇಲಿ ಅಳವಡಿಸಿ ಹದ್ದುಬಸ್ತ್ ಮಾಡಿಸಲಾಗುವುದು ಎಂದು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಅವರು ಹೇಳಿದರು.


