ಮೂಡಲಗಿ : ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂಭಾಗದಲ್ಲಿ, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಾಟ ನಿಯಂತ್ರಿಸಲು ಪೊಲೀಸರು ನಡೆಸಿದ ಲಾಠಿಚಾರ್ಜ ನೆಪದಲ್ಲಿನ ಮಾರಣಾಂತಿಕ ಹಲ್ಲೆಯು ಖಂಡನೀಯ ಎಂದು ಪಂಚಮಸಾಲಿ ಮುಖಂಡ ಬಸನಿಂಗ ನಿಂಗನೂರ ಹೇಳಿದರು.
ಗುರುವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸುತ್ತ ಪ್ರತಿಭಟಿಸಿ ತಹಶೀಲ್ದಾರ್ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಮನವಿ ನೀಡಿ ಮಾತನಾಡಿದ ಅವರು, ಪಂಚಮಸಾಲಿಗಳು ಶಾಂತಿ ಪ್ರೀಯರು, ಹಕ್ಕಿಗಾಗಿ ಹೋರಾಟ ಮಾಡುತ್ತಿರುವಾಗ ಪೊಲೀಸರ ಲಾಠಿಚಾರ್ಜ ನಿಂದ ಸಾವಿರಾರು ಜನರಿಗೆ ಗಂಬೀರಗಾಯಗಳಾಗಿದ್ದು,, ಘಟನೆಗೆ ಕಾರಣರಾದ ಏಡಿಜಿಪಿ ಅಧಿಕಾರಿ ಆರ್.ಹಿತೇಂದ್ರ ರವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ತಾಲೂಕಾ ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಸುಭಾಸ ತುಪ್ಪದ ಹಾಗೂ ಪಂಚಮಸಾಲಿ ಯುವ ಮುಖಂಡ ಮಹಾಂತೇಶ ಕುಡಚಿ ಮಾತನಾಡಿ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಕ್ಷಾಂತರ ಪಂಚಮಸಾಲಿಗಳ ಮೇಲೆ ಗುಂಡಾಗಿರಿ ಹಾಗೂ ಲಾಟಿಚಾರ್ಜ್ ಮಾಡಿಸಿ ರಕ್ತ ಹರಿಸಿದ್ದಾರೆ. ಇಂತಹ ಕ್ರೂರ ಕೃತ್ಯಕ್ಕೆ ಕಡಿವಾಣ ಹಾಕಬೇಕು. ಲಿಂಗಾಯತರ ಹೋರಾಟ ಹತ್ತಿಕ್ಕುವ ಹುನ್ನಾರದ ರೂವಾರಿ ಸಿ.ಎಂ.ಸಿದ್ದರಾಮಯ್ಯನವರಿಗೆ ಮುಂದಿನ ದಿನಗಳಲ್ಲಿ ಪಂಚಮಸಾಲಿಗಳು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಲಿಂಗಾಯತ ಹೋರಾಟ ಸಮೀತಿಯ ಪ್ರ.ಕಾರ್ಯದರ್ಶಿ ಪ್ರಕಾಶ ಕಾಳಶೆಟ್ಟಿ ಮಾತನಾಡಿ ದುರುದ್ಧೇಶ ಪೂರ್ವಕವಾದ ಲಾಠಿಚಾರ್ಜನಿಂದ ಆದ ಅನಾಹುತದ ಗಂಭೀರತೆ ಅರಿತು ಈ ಕೂಡಲೇ ಮುಖ್ಯಮಂತ್ರಿಗಳು ಸಮಾಜದ ಹಾಗೂ ನಮ್ಮ ಜಗದ್ಗುರುಗಳ ಕ್ಷಮೆ ಕೇಳಬೇಕು. ಈ ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಿ, ಪಂಚಮಸಾಲಿಗಳ ಹಾಗೂ ರೈತರ ಮೇಲೆ ಹಾಕಿರುವ ಕೇಸ್ ಅನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಮ್.ರಂಗಾಪೂರ, ಬಸವಪ್ರಭು ನಿಡಗುಂದಿ, ಶಿವಬಸು ಜುಂಜರವಾಡ, ಎ.ಎಸ್.ಕೌಜಲಗಿ, ಸಂಗಮೇಶ ಕೌಜಲಗಿ, ಆಯ್.ವಾಯ್.ಸಂಕನ್ನವರ, ಶಿವನಗೌಡ ಪಾಟೀಲ, ಚನಗೌಡ ಪಾಟೀಲ, ಕೆಂಪಣ್ಣ ಮುದೋಳ ಸೇರಿದಂತೆ ಅನೇಕ ವಕೀಲರು ಹಾಗೂ ಹಳ್ಳಿಗಳಿಂದ ನೂರಾರು ಮುಖಂಡರು ಬಾಗವಹಿಸಿದ್ದರು