ವಿಜಯನಗರ ( ಹೊಸಪೇಟೆ ): ಮೋದಿ ಸರ್ಕಾರದ ಪ್ರಸ್ತುತ ಆಡಳಿತದಲ್ಲಿ ದೇಶಾದ್ಯಂತ ಕ್ಯಾಂಪಸ್‌ಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳು ಸಾಮಾನ್ಯ ಸಂಗತಿಗಳಾಗಿವೆ . ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಹಾಗೂ ಅತ್ಯಾಚಾರಗಳನ್ನು ಖಂಡಿಸಿ ಎಸ್ಎಸ್ಐ ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ಹೊಸಪೇಟೆ ತಾಲೂಕಿನ ಉಪ ತಹಸೀಲ್ದಾರ್ ವೆಂಕಟೇಶ್ ಅವರ ಮುಖಂತರ ರಾಷ್ಟ್ರಪತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ SFI ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವರೆಡ್ಡಿ ಮಾತನಾಡಿ ಕ್ಯಾಂಪಸ್‌ನಲ್ಲಿ ನಾವು ಸುರಕ್ಷಿತವಾಗಿಲ್ಲದಿದ್ದರೆ, ಇನ್ನೆಲ್ಲಿ ನಾವು ಸುರಕ್ಷಿತ ? ಎಂಬ ಪ್ರಶ್ನೆ ಕಾಡುತ್ತಿದೆ.
.ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ಕಾಲೇಜಿನ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಪರಾಧಿಗಳನ್ನು ಈಗಾಗಲೇ ಬಂದಿಸಲಾಗಿದೆ. ಆದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಸರಿಯಾದ ತನಿಖೆಯನ್ನು ಮಾಡಬೇಕಿದೆ. ಸರಿಯಾದ ತನಿಖೆ ನಡೆಸದಿದ್ದರೆ ಆರೋಪಿಗಳು ತಪ್ಪಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಆದರಿಂದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ತನಿಖೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಒತ್ತಾಯಿಸಿದೆ.. ರಾಜ್ಯದಲ್ಲಿ ಶಾಲಾ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ಹೆಚ್ಚಾಗುತ್ತಿವೆ. ಇದ್ರಿಂದಾಗಿ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿತು.
ಕೆ. ಎ ಪವನ್ ಕುಮಾರ್ ಅವರು ಮಾತನಾಡಿ, ಒಡಿಶಾದ ಫಕೀರ್ ಮೋಹನ್ ಕಾಲೇಜಿನಲ್ಲಿ ಇತ್ತೀಚೆಗೆ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕ್ಯಾಂಪಸ್‌ಗಳಲ್ಲಿನ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.
ಪಶ್ಚಿಮ ಬಂಗಾಳದ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಕಾಲೇಜಿನ ಯೂನಿಯನ್ ಕಚೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಲಾಗಿದೆ.
ಮಹಾರಾಷ್ಟ್ರದ ಥಾಣೆಯಲ್ಲಿರುವ ಶಾಲೆಯೊಳಗೆ, ಬೆರಳಚ್ಚುಗಳ ರೂಪದಲ್ಲಿ ಒಪ್ಪಿಗೆ ಪಡೆದ ನಂತರ, ಮುಟ್ಟಿನ ತಪಾಸಣೆಗಾಗಿ ವಿದ್ಯಾರ್ಥಿನಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಲಾಯಿತು. ಈ ಘಟನೆಗಳ ತೀವ್ರವಾಗಿ ವಿರೋಧ ವ್ಯಕ್ತವಾದರೂ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ವ್ಯಕ್ತಪಡಿಸದರು. ಜಿಲ್ಲಾ ಅಧ್ಯಕ್ಷರಾದ ವಿ ಸ್ವಾಮಿ ಅವರು ಮಾತನಾಡಿ,
ಸಹ ಅಪರಾಧಿಗಳ ವಿರುದ್ಧ ದೂರು ದಾಖಲಿಸಿದ ನಂತರವೂ ಆರೋಪಿಯನ್ನು ರಕ್ಷಿಸುವ ಮೂಲಕ ಸರ್ಕಾರ ಆರೋಪಿಯ ಪರವಾಗಿ ನಿಂತಿದೆ.ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಪಶ್ಚಿಮ ಬಂಗಾಳದ ಕ್ಯಾಂಪಸ್‌ಗಳ ಒಳಗೆ ಟಿಎಂಸಿ ಸ್ಥಾಪಿಸಿರುವ ಯೂನಿಯನ್ ಕಚೇರಿಗಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮತ್ತು ಹಿಂಸೆಯನ್ನು ನೀಡಲು ನಿರ್ದಿಷ್ಟವಾಗಿ ಸ್ಥಾಪಿಸಲಾಗಿದೆಯೇ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಹೇಳಿದರು, ಆಟೋ ಯೂನಿಯೋನ್ ಸಂಘದ ರಾಜ್ಯ ಕಾರ್ಯದರ್ಶಿ CITU ಸಂತೋಷ ಕುಮಾರ್ ಅವರು ಮಾತನಾಡಿದರು.
ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಮನುಸ್ಮೃತಿ ವಿಚಾರಗಳನ್ನು ಅಳವಡಿಸುವ ಮತ್ತು ಜಾರಿ ಮಾಡಲು ಮುಂದಾಗುತ್ತಿವೆ. ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಹೊಸಪೇಟೆ ತಾಲೂಕ ಸಮಿತಿ ತೀವ್ರವಾಗಿ ವಿರೋಧಿಸುತ್ತೇದೆ ಮತ್ತು ಈ ಕೇಳಿಗಿನ ಬೇಡಿಕೆಗಳನ್ನು ಈಡೇರಿಸುವಂತೆ ಎಸ್ ಎಫ್ ಐ ಒತ್ತಾಯ ಮಾಡಿದೆ ಈ ಸಂದರ್ಭದಲ್ಲಿ SFI ತಾಲೂಕು ಮುಖಂಡರಾದ ಲೋಕೇಶ್, ರುದ್ರಮ್ಮ, ನಂದಿನಿ, ಶ್ವೇತ , ಮೀನಾಕ್ಷಿ, ವಿನಾಯಕ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು