ಹೊಸಪೇಟೆ (ವಿಜಯನಗರ ): ಜಿಲ್ಲೆಯ 300 ಕ್ಕೂ ಹೆಚ್ಚಿನ ಮಹಿಳೆರಿಗೆ ಕೇಂದ್ರ ಸರ್ಕಾರದ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿದ ಪ್ರಿಯಾಂಕಾ ಜೈನ ರ ವಂಚನೆ ಪ್ರಕರಣ ವನ್ನು ಸಿಬಿಐ ಗೆ ವಹಿಸಲು ‘ಸಿ ಪಿ ಐ ಎಂ ಒತ್ತಾಯಿಸುತ್ತಿದೆ. ಈ ಸಂಬಂಧ ಇದೇ 20 ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಾಲೂಕು ಕಾರ್ಯದರ್ಶಿ.ಯಲ್ಲಾಲಿಂಗ ತಿಳಿಸಿದ್ದಾರೆ.
ಪ್ರಿಯಾಂಕ ಮಹಿಳಾ ಪತ್ತಿನ ಸಹಕಾರ ಸಂಘ ನಿಯಮಿತ ಹೊಸಪೇಟೆ ಹೆಸರಿನಲ್ಲಿ ಪ್ರಿಯಾಂಕಾ ಜೈನ್ ಮತ್ತು ತಂಡದಿಂದ ಜಿಲ್ಲೆಯ 300 ಕ್ಕೂ ಮೇಲ್ಪಟ್ಟು ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಬಿಐ ಗೆ ವಹಿಸಬೇಕೆಂದು ಒತ್ತಾಯಿಸಿ, ಶಾಸಕ ಹೆಚ್.ಆರ್.ಗವಿಯಪ್ಪ ಇವರ ಮನೆ ಹತ್ತಿರ ಜೂಲೈ 20 ರಂದು ಪ್ರತಿಭಟನೆ ನಡೆಸುವುದಾಗಿ ವಿಜಯನಗರ ಜಿಲ್ಲೆಯ ಸಿಪಿಎಂ ಹೊಸಪೇಟೆ ತಾಲೂಕು ಸಮಿತಿ ತೀರ್ಮಾನಿಸಿದೆ.
ವಂಚನೆ ಮಾಡಿರುವ ತಂಡದಲ್ಲಿ ಕೆಲವರು ತುಂಬಾ ಪ್ರಭಾವಶಾಲಿಗಳು ಮತ್ತು ಹಲವಾರು ವರ್ಷಗಳಿಂದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಸಂಪರ್ಕ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳೂ ಆಗಿದ್ದಾರೆ.ಇಂತಹ ಸ್ಥಾನಗಳನ್ನೇ ಬಳಸಿಕೊಂಡು ಅಮಾಯಕ ಜನರಿಗೆ ಸಬ್ಸಿಡಿ ಸಾಲ ಕೊಡಿಸುವುದಾಗಿ ಸುಳ್ಳು ಹೇಳಿ ನಂಬಿಸಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ಸಿಪಿಎಂ ಇದೇ ಜೂಲೈ 20 ರಂದು ಭಾನುವಾರ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾ ಹೇಳಿಕೆ ಯಲ್ಲಿ ಕಾರ್ಯದರ್ಶಿ ಎನ್.ಯಲ್ಲಾಲಿಂಗ ತಿಳಿಸಿದ್ದಾರೆ.