ಸಂಡೂರು ಅರಣ್ಯ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ವಿರೋಧಿಸಿ ಪ್ರತಿಭಟನೆ

Ravi Talawar
ಸಂಡೂರು ಅರಣ್ಯ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ವಿರೋಧಿಸಿ ಪ್ರತಿಭಟನೆ
WhatsApp Group Join Now
Telegram Group Join Now
ಬಳ್ಳಾರಿ:ಜು,30: ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಪರವಾನಿಗೆ ನೀಡದಂತೆ ಆಗ್ರಹಿಸಿ ಇಂದು ನಗರದಲ್ಲಿ ಜನಸಂಗ್ರಾಮ ಪರಿಷತ್ ಮತ್ತಿತರೆ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕಳಿಸಲಾಯಿತು.
ನಗರದ ಇಂದಿರಾ ಸರ್ಕಲ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ. ಕೆ.ಸಿ.ರಸ್ತೆ. ಮೀನಾಕ್ಷಿ ಸರ್ಕಲ್, ಗಡಗಿ ಚೆನ್ನಪ್ಪ ವೃತ್ತಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹೊಸ ಗಣಿಗಾರಿಕೆ ಬಗ್ಗೆ ಹೊಂದಿರುವ ಧೋರಣೆಯನ್ನು ಖಂಡಿಸಿ ಘೋಷಣೆ ಕೂಗಿದರು . ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಡಿಸಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು.  ಅವ್ಯಾಹಿತ ಅವೈಜ್ಞಾನಿಕ ಅಕ್ರಮಗಣಿಗಾರಿಕೆಯಿಂದ ಸಂಡೂರು ಭಾಗದಲ್ಲಿ ಪರಿಸರ, ವನ್ಯಜಿವಿ,ಅರಣ್ಯ ನಾಶ ಸೇರಿದಂತೆ ಇಡೀ ತಾಲೂಕಿನ ಜನರ ಬದುಕಿನ ಮೇಲೆ ಮತ್ತು ಆರೋಗ್ಯ, ಶಿಕ್ಷಣ, ಸಾರಿಗೆ, ರಸ್ತೆ ಸೇರಿದಂತೆ ಎಲ್ಲಾ ವಲಯಗಳ ಮೇಲೆ ಗಂಭೀರವಾದ ಪರಿಣಾವನ್ನುಂಟು ಮಾಡಿದೆ. ನಂತರ ಸುಪ್ರಿಂಕೋರ್ಟನ ಅಕ್ರಮಗಳಿಗೆ ಕಡಿವಾಣ ಹಾಕಿದ್ದರಿಂದ ನಿಗಮದಿಂದ ಈಗಾಗಲೆ ಗಣಿಭಾದಿತ ಪ್ರದೇಶ ಅರಣ್ಯ ಪುನಶ್ಚೇತನ ಕಾರ್ಯವು ಸೇರಿದಂತೆ ಗಣಿಗಾರಿಕೆಯಿಂದ ಭಾದಿತವಾಗಿರುವ ಹಳ್ಳಿಗಳ ಜನರಜೀವನ, ಕೃಷಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆಗಳು ಸೇರಿದಂತೆ ಗಣಿ ಭಾದಿತ ಪ್ರದೇಶದ ಪುನಶ್ಚೇತನಗೊಳಿಸಲು ಯುದ್ದೋಪಾದಿಯಲ್ಲಿ ಇಡೀ ಆಡಳಿತ ಮಂಡಳಿಯು ಕಾರ್ಯೋನ್ಮುಖರಾಗಿರುತ್ತದೆ.
ಬಳ್ಳಾರಿ ಜಿಲ್ಲೆಯಿಂದ ದೇಶದ ಕಾರ್ಖಾನೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಅದಿರನ್ನು ಹೊರ ತೆಗೆಯಲಾಗುತ್ತಿದೆ, ಸಂಡೂರಿನ ಅರಣ್ಯ ಪ್ರದೇಶದ ಭಾಗವೊಂದರಿಂದಲೆ ಮಿತಿಮೀರಿದ ಪ್ರಮಾಣದ ಅದಿರು ಉತ್ವಾದನೆ. ಸಾಗಾಣೆ ನಡೆಯುತ್ತಿದೆ ಇದರಿಂದಲೂ ಪರಿಸರಕ್ಕೆ ಸಾಕಷ್ಟು ಧಕ್ಕೆ ಆಗುತ್ತಿದೆ. ಹೀಗಿರುವಾಗ ಮತ್ತೆ ಕೇಂದ್ರ ಸರ್ಕಾರಿ ಸೌಮ್ಯದ ಕುದುರೆಮುಖ  ಪನಿಗೆ ಸಂಡೂರಿನ ದಕ್ಷಿಣ ವಲಯದ ದೇವದಾರಿ ಬ್ಲಾಕ್ನಲ್ಲಿ ನೈಸರ್ಗಿಕವಾಗಿ ಬೆಳೆದ ಕಾಡಿನಲ್ಲಿ ೪೦೦ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರಣ್ಯ ಇಲಾಖೆಯ ಆಕ್ಷೇಪಣೆಗೆ ವಿರುದ್ದವಾಗಿ ೧ ಲಕ್ಷ ಮರಗಳನ್ನು ಕಡಿದು ಗಣಿಗಾರಿಕೆಗೆ ನೀಡಲು ಸಿದ್ದತೆ ನಡೆಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅದಿರು ಉತ್ವಾದನೆ ಮಿತಿಯನ್ನು ನಿಗದಿಗೊಳಿಸುವ ಪ್ರಕ್ರಿಯೆಯು ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಹೊಸಅರಣ್ಯ ಪ್ರದೇಶದಲ್ಲಿ ಅದಿರು ಶೋಧನೆ ನಡೆಸುವುದಾಗಲಿ ಅಥವ ಗಣಿಗಾರಿಕೆಗೆ ಅವಕಾಶ ನೀಡುವುದಕ್ಕೆ ಅವಕಾಶ ಮಾಡಬಾರದೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಆರ್ ಮಾಧವರೆಡ್ಡಿ ಕರೂರು, ಟಿ.ಎಂ.ಶಿವಕುಮಾರ್    ಶ್ರೀಶೈಲ ಆಲದಳ್ಳಿ ಖಾಜಅಸ್ಲಂ, ಸೈಯ್ಯದ್ ಹೈದರ್, ನಾಗರಾಜ್ ಜಿ.ಕೆ. ಲೇಪಾಕ್ಷಿ ಅಸುಂಡಿ, ತಿಮ್ಮನಗೌಡ, ದೊಡ್ಡ ತಿಪ್ಪಣ್ಣ, ಎಱ್ರಿಸ್ವಾಮಿ, ಗೋವಿಂದ, ಸೋಮಶೇಖರ್ ಗೌಡ  ಮೊದಲಾದವರು ಇದ್ದರು.
WhatsApp Group Join Now
Telegram Group Join Now
Share This Article