ಸಾಹಿತಿಗಳೂ ರಾಜಕಾರಣಿಗಳೇ ಎಂಬ ಡಿಸಿಎಂ ಡಿಕೆಶಿ​ ಹೇಳಿಕೆ ಪ್ರಗತಿಪರರು ಆಕ್ರೋಶ

Ravi Talawar
ಸಾಹಿತಿಗಳೂ ರಾಜಕಾರಣಿಗಳೇ ಎಂಬ ಡಿಸಿಎಂ ಡಿಕೆಶಿ​ ಹೇಳಿಕೆ ಪ್ರಗತಿಪರರು ಆಕ್ರೋಶ
WhatsApp Group Join Now
Telegram Group Join Now

ಗದಗ, ಜೂನ್​ 22: ಸಾಹಿತಿಗಳೂ ರಾಜಕಾರಣಿಗಳೇ ಎಂಬ ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೆ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾಹಿತಿ ಬಸವರಾಜ್ ಸೂಳಿಭಾವಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಡಿಕೆ ಶಿವಕುಮಾರ್​ ಅವರಿಗೆ ಬುದ್ಧಿ ಹೇಳಲು ಕೇಳಿಕೊಂಡಿದ್ದೇವೆ ಎಂದರು.

ವಿಚಾರವಾದಿಗಳ, ಪ್ರಗತಿಪರರ ಆಶಯದಂತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬರಹಗಾರರನ್ನ, ಸಾಹಿತಿಗಳನ್ನ ಅವಮಾನಿಸುವ, ದರ್ಪತೋರುವ ಕೃತ್ಯ ದುರಂತ ಎಂದು ವಾಗ್ದಾಳಿ ಮಾಡಿದ್ದಾರೆ.

ಡಿಕೆ ಶಿವಕುಮಾರ್​ ನಾನೇ ಸಭೆ ಕರೆದಿದ್ದೇನೆ ಅದರಲ್ಲಿ ತಪ್ಪೇನಿದೆ ಅಂತಾರೆ. ಆದರೆ ಸಾಹಿತಿಗಳೂ ರಾಜಕಾರಣಿಗಳು ಅಂತಾ ಹೇಳಿ ಸಾಂಸ್ಕೃತಿಕ ವಲಯವನ್ನ ಅವಮಾನಿಸಿದ್ದಾರೆ. ಇನ್ನು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ್ದು ತಪ್ಪೇನು ಎಂದು ಸಚಿವ ತಂಗಡಗಿ ಅಂತಾರೆ. ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಕ ಅಧಃಪತನಕ್ಕೆ ಸಾಕ್ಷಿ ಎಂದು ಕಿಕಾರಿದ್ದಾರೆ.

ಪಕ್ಷದ ಸರ್ಕಾರ ಅನ್ನೋದಾದರೆ ಸಚಿವ ಸಂಪುಟ ಸಭೆಯನ್ನ ಪಕ್ಷದ ಕಚೇರಿಯಲ್ಲಿ ಕರೆಯಿರಿ. ಸಾಂಸ್ಕೃತಿಕ ರಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಸರಿಯಲ್ಲ. ಸಂಪುಟದ ಸದಸ್ಯರಿಗೆ ತಿಳಿಹೇಳುವಂತೆ ಸಿಎಂಗೆ ಪತ್ರ ಬರೆದು ಕೇಳಿಕೊಂಡಿದ್ದೇವೆ‌‌. ಸಿಎಂ ಮಾತ್ನಾಡ್ತಿರೋದು ಅನುಮಾನ ಮೂಡಿಸಿದೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article