ಗದಗ: ಸಮಾಜದ ಅಭಿವೃದ್ಧಿ ಹೊಂದಲು ಶಿಕ್ಷಣ ಹಾಗೂ ಸಂಘಟನೆ ಮೂಲಕ ಮಾತ್ರ ಸಾಧ್ಯವಾಗುತ್ತಿದೆ ಎಂದು ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ಬಸವರಾಜ್ ಬಿಂಗಿ ಹೇಳಿದರು.
ತಾಲೂಕಿನ ಹೊಂಬಳ ಗ್ರಾಮದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ ಹಾಗೂ ಅಖಿಲ ಭಾರತ ಗಾಣಿಗ ವಿದ್ಯ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ಸಹಯೋದಲ್ಲಿ ಗಾಣದಮ್ಮ ದೇವಿಗೆ ಪೂಜಾ ಹಾಗೂ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಇದೇ ಮೊದಲ ಸಲ ಕಾರ ಹುಣ್ಣಿಮೆ ಅಂಗವಾಗಿ ಗಾಣದಮ್ಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಎತ್ತುಗಳಿಗೆ ಪೂಜೆ ಮಾಡುವುದು ವಿಶೇಷವಾದ ಕಾರ್ಯಕ್ರಮವಾಗಿದೆ. ಆದರಿಂದ ಪ್ರತಿ ವರ್ಷ ಸಮಾಜದಿಂದ ಗಾಣದಮ್ಮ ದೇವಿಗೆ ವಿಶೇಷ ಪೂಜೆ ಹಾಗೂ ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಗಾಣಿಗ ಸಮಾಜದ ಮಹಿಳೆಯರು ಸಹ ಸಂಘಟನೆ ಮಾಡುವ ಮೂಲಕ ಸಮಾಜವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿದೆ. ಮಹಿಳೆಯರು ಸಹ ವಿವಿಧ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಸಮಾಜದ ಅಭಿವೃದ್ಧಿ ಹೊಂದಲು ಮುಂದಾಗಬೇಕು. ಸಮಾಜ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗದ ಕೆ.ಸಿ.ವೀಣಾ ಮಾತನಾಡಿ, ಸಮಾಜದಲ್ಲಿ ಮಹಿಳಾ ಸಂಘಟನೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರವು ಪ್ರಮುಖ ವಹಿಸುತ್ತಿದೆ. ಆದರಿಂದ ಸಮಾಜದ ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಮುಂದಾಗಬೇಕು. ವಿವಿಧ ಕ್ಷೇತ್ರದಲ್ಲಿ ಕೆಲಸ ಕಾರ್ಯ ಮಾಡುವ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗಾಣದಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಅಂಗವಾಗಿ ೧೫೦ ಅಧಿಕ ಮಹಿಳಿರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ಸಮಾಜದ ಮುಖಂಡರು ಸೇರಿಕೊಂಡು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗಾಣದಮ್ಮ ದೇವಿ ದೇವಸ್ಥಾನ ಕಟ್ಟಲು ಜಮೀನು ನೀಡಿದ ವರಿಗೆ ಹಾಗೂ ದೇವಸ್ಥಾನ ಕಟ್ಟಿಸಿದವರಿಗೆ ಸನ್ಮಾನ ಮಾಡಲಾಯಿತು.
ಗಾಣಿಗ ಸಮಾಜದ ಜಿಲ್ಲಾ ಕಾರ್ಯದರ್ಶಿ ಮುರುಗರಾಜೇಂದ್ರ ಬಡ್ನಿ ಮಹಾಂತೇಶ್ ಷೋಳಚಗುಡ್ಡ, ಮಹಾಬಳೇಶ ಗಾಣಿಗೇರ, ಅಂದಪ್ಪ ಬಿಂಗಿ, ಮಹೇಶ್ ಗಾಣಿಗೇರ, ಗವಿಸಿದ್ದಪ್ಪ ಗಾಣಿಗೇರ, ರಾಜಶೇಖರ ಹಾದಿ, ಜೆ.ಎಸ್.ಬ್ಯಾಳಿ, ಮಹಾಂತೇಶ ಹಸಬಿ, ಪ್ರೊ.ಮೇಘನಾ ಎ.ಜಿ.ಕೂಡ್ಲಿಗಿ, ಪ್ರತಿಭಾ ಬಡ್ನಿ, ವಿಜಯಲಕ್ಷ್ಮೀ ಬ್ಯಾಳಿ, ಪು? ಕೊರವನವರ್, ರೇವತಿ ಹಾದಿ, ಶೋಭಾ ಬಿಂಗಿ, ಗಾಣಿಗ ಸಮಾಜದ ಬಂಧುಗಳು ಮಹಿಳೆಯರು, ಹೊಂಬಳ ಗ್ರಾಮದ ಹಿರಿಯರು ಇದ್ದರು.


