ಬಳ್ಳಾರಿ,ಜ.10. ಯುವಕರು ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕುರಿತು ಕಾಳಜಿ ವಹಿಸಬೇಕು ಎಂದು ವಿಶ್ರೀಕೃವಿವಿ ಪ್ರಭಾರ ಕುಲಸಚಿವರಾದ ಪ್ರೊ ತಿಪ್ಪೇರುದ್ರಪ್ಪ.ಜೆ ಅವರು ಹೇಳಿದರು.
ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟಿçÃಯ ಸೇವಾ ಯೋಜನೆ ಎ.ಬಿ.ಸಿ ಮತ್ತು ಡಿ ಘಟಕಗಳು ಹಾಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ರೂಸಾ ಅನುದಾನಿತ ಪರಿಸರ ಜಾಗೃತಿ ಕುರಿತ ಎನ್‌ಎಸ್‌ಎಸ್ ಮತ್ತು ಇಕೋ ಕ್ಲಬ್ ಕಾರ್ಯಾಕ್ರಮಾಧಿಕಾರಿಗಳಿಗೆ’ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯವು ಪರಿಸರ ಕುರಿತಾಗಿ ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಪರಿಸರ ಸ್ನೇಹಿ ವಿಧಾನಗಳನ್ನು ನಾವೆಲ್ಲರು ಅನುಸರಿಸುವ ಮೂಲಕ ಕಟ್ಟುನಿಟ್ಟಾಗಿ ನಿಭಾಯಿಸಬೇಕಾಗಿದೆ. ಪರಿಸರ ಸಂರಕ್ಷಿಸುವ ಕಡೆಗೆ ಪ್ರತಿಯೊಬ್ಬರು ಜಾಗೃತಿ ಹೊಂದಬೇಕಾಗಿದೆ ಎಂದು ಹೇಳಿದರು.
ಎಸ್‌ಎಸ್‌ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಜಿ ಪ್ರಹ್ಲಾದ್ ಚೌದ್ರಿ ಮಾತನಾಡಿ, ಪ್ರತಿಯೊಂದು ಕಾರ್ಯಕ್ರಮದ ಹಿಂದೆ ಒಳ್ಳೆಯ ಉದ್ದೇಶವಿರುತ್ತದೆ. ಎನ್‌ಎಸ್‌ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತು ಕಾಳಜಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ವಿವಿಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿಗಳಾದ ಡಾ.ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಎನ್‌ಎಸ್‌ಎಸ್ ಎ ಘಟಕದ ಕಾರ್ಯಕ್ರಮಾಧಿಕಾರಿ ರಾಮಸ್ವಾಮಿ ನಿರೂಪಿಸಿದರು. ಎನ್‌ಎಸ್‌ಎಸ್ ಸಿ ಘಟಕದ ಪ್ರವೀಣ್ ಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕುಷ್ಟಗಿಯ ಎಸ್ ವಿ ಸಿ ಕಾಲೇಜಿನ ಅರುಣ್ ಡಿ ಕರ್ಮಕರ್, ಪರಮೇಶ್ವರ ವೇದಿಕೆಯಲ್ಲಿದ್ದರು. ಕಾರ್ಯಕ್ರಮಾಧಿಕಾರಿಗಳಾದ ನಾಜಿಯಾ ಖಾಜಿ, ಬಸಪ್ಪ ಕೆ, ರಾಘವೇಂದ್ರ ಸೇರಿದಂತೆ 100ಕ್ಕೂ ಹೆಚ್ಚು ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದ
ಪರಿಸರ ಜಾಗೃತಿಗೆ ಶ್ರಮಿಸಿ: ಪ್ರೊ.ತಿಪ್ಪೇರುದ್ರಪ್ಪ


