ಧಾರವಾಡದ ನೂತನ ಐಐಐಟಿ ನಿರ್ದೇಶಕರಾಗಿ ಪ್ರೊ.. ಎಸ್.ಆರ್.ಮಹಾದೇವ ಪ್ರಸನ್ನ

Ravi Talawar
ಧಾರವಾಡದ ನೂತನ ಐಐಐಟಿ ನಿರ್ದೇಶಕರಾಗಿ ಪ್ರೊ.. ಎಸ್.ಆರ್.ಮಹಾದೇವ ಪ್ರಸನ್ನ
WhatsApp Group Join Now
Telegram Group Join Now
*ಧಾರವಾಡ, ಮೇ09: ಧಾರವಾಡದ ನೂತನ ಐಐಐಟಿ ನಿರ್ದೇಶಕರಾಗಿ ಪ್ರೊ.. ಎಸ್.ಆರ್.ಮಹಾದೇವ ಪ್ರಸನ್ನ ಅವರು ನೇಮಕಗೊಂಡಿದ್ದಾರೆ.
ಇವರು 2023 ರಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಉತ್ತಮ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಈ ಹಿಂದೆ ಅವರು ಐಐಟಿ ಧಾರವಾಡದಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ (EECE) ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಡೀನ್  ಹಾಗೂ ಗುವಾಹಟಿಯ ಐಐಟಿಯ ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ) ಆಗಿದ್ದರು.  ಅವರು 2004 ರಲ್ಲಿ ಐಐಟಿ ಮದ್ರಾಸ್‍ನಿಂದ ಪಿಎಚ್‍ಡಿ ಪಡೆದಿದ್ದರು ಎಂದು ಪ್ರಕಟಣೆ ತಿಳಿಸಿದೆ.
WhatsApp Group Join Now
Telegram Group Join Now
Share This Article