ಮೂಡಲಗಿ : ಮೂಡಲಗಿ ಶಿಕ್ಷಣ ಸಂಸ್ಥೆ 1987ರಲ್ಲಿ ನನ್ನ ಪ್ರತಿಭೆಯನ್ನು ಗುರುತಿಸಿ, ಪ್ರಾಧ್ಯಾಪಕ ವೃತ್ತಿಗೆ ಅವಕಾಶ ಕೊಟ್ಟು ನನ್ನ ವ್ಯಕ್ತಿತ್ವ ರೂಪಗೊಳ್ಳಲು ಕಾರಣವಾಯಿತು. ಇವತ್ತು ನನ್ನ 37ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದೇನೆ ಹೊರತು ಸಂಸ್ಥೆಯ ಜೊತೆಗಿನ ಭಾವ ಸಂಬಂಧದಿಂದಲ್ಲ ಎಂದು ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮೂಡಲಗಿ ಶಿಕ್ಷಣಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಂಗಮೇಶ ಎಮ್.ಗುಜಗೊಂಡ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಸೇವಾ ಅವಧಿಯ ನೆನಪುಗಳನ್ನು ಮೆಲುಕು ಹಾಕುತ್ತ, ಆಡಳಿತ ಮಂಡಳಿ, ಸಹೋದ್ಯೋಗಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳ ಸಹಕಾರ ಹಾಗೂ ವಿದ್ಯಾರ್ಥಿಗಳ ಒಡನಾಟ ಸ್ಮರಣೀಯವಾದುದು ಜೊತೆಗೆ ನನ್ನ ಯಶಸ್ವಿ ಸೇವೆಗೆ ಸಹಕರಿಸಿದ ನನ್ನ ಮಡದಿ, ಮಕ್ಕಳಿಗೂ ಅಭಾರಿಯಾಗಿದ್ದೇನೆ ಎಂದರು.
ಸಮಾರಂಭ ಮುಖ್ಯ ಅತಿಥಿ ಸಂಸ್ಥೆಯ ಮಾಜಿ ನಿರ್ದೇಶಕ ವಿ.ಟಿ.ಸೋನವಾಲಕರ ಹಾಗೂ ಅಧ್ಯಕ್ಷತೆ ವಹಿಸಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೊನವಾಲಕರ ಮಾತನಾಡಿ, ಪ್ರಾಚಾರ್ಯ ಪ್ರೊ.ಸಂಗಮೇಶ ಗುಜಗೊಂಡ ಅವರ ಸುದೀರ್ಘ 37 ವರ್ಷಗಳ ನಿಷ್ಕಳಂಕ ಸೇವೆ, ಸರಳ ಸಜ್ಜನಿಕೆ ಜೀವನ, ನಮ್ಮ ಶಿಕ್ಷಣ ಸಂಸ್ಥೆಗೆ ಕಳಶ ಪ್ರಾಯವಾಗಿದೆ. ಖ್ಯಾತ ಮಕ್ಕಳ ಸಾಹಿತಿಯೂ ಕೂಡ ಆಗಿರುವ ಇವರ ಕಥೆ ಕವನಗಳನ್ನು, ಶಿಕ್ಷಣ ಇಲಾಖೆ ತಮ್ಮ ಶಾಲಾ ಪಠ್ಯಗಳಲ್ಲಿ ಅಳವಡಿಸಿಕೊಂಡಿರುವುದು ನಮ್ಮ ಹೆಮ್ಮೆ ಎಂದರು.
ನಿವೃತ ಗ್ರಂಥಪಾಲಕ ಬಾಲಶೇಖರ ಬಂದಿ ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ.ಜಿ.ವ್ಹಿ.ನಾಗರಾಜ ಮಾತನಾಡಿ, ಮೇರು ಪ್ರತಿಭೆಯನ್ನು ಹೊಂದಿದ ಪ್ರಾಚಾರ್ಯರು ಕೇವಲ ಬೋಧನೆಗಷ್ಟೇ ಸೀಮಿತವಾಗದೆ, ಮಕ್ಕಳ ಸಾಹಿತಿಯಾಗಿ ನಾಡಿನ ತುಂಬಾ ಹೆಸರು ಮಾಡಿದ ಹೆಗ್ಗಳಿಕೆ ಅವರದಾಗಿದೆ, ಗುಜಗೊಂಡ ಅವರು ವೃತ್ತಿಯಿಂದ ಭೋಗೋಳ ಶಾಸ್ತ್ರ ಪ್ರಾಧ್ಯಾಪಕರಾದರೂ, ಯಾವುದೇ ವಿಷಯ ಕುರಿತು ನಿರ್ಗಗಳವಾಗಿ ಮಾತನಾಡುವ ಅವರ ಪಾಂಡಿತ್ಯ ಗಮನಿಸಿದರೆ, ಅವರನ್ನು ನಡೆದಾಡುವ ಜ್ಞಾನ ಗಂಗೋತ್ರಿ ಎಂದರೆ ತಪ್ಪಾಗಲಾರದು ಎಂದು ಬನ್ನಿಸಿದರು. ಇದೇ ಸಂಧರ್ಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ವಿವಿಧ ಅಂಗಗಳ ಶಿಕ್ಷಕರು, ಅನೇಕ ವಿದ್ಯಾರ್ಥಿಗಳು ಹಾಗೂ ಅಭಿಮಾನಿ ಬಳಗದವರು ಸತ್ಕರಿಸಿ ಗೌರವಿಸಿದರು.
ಸಮಾರಂಭ ವೇದಿಕೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ ಸೋನವಾಲಕರ, ಎಸ್.ಆರ್.ಸೋನವಾಲಕರ, ಬಿ.ಎಚ್.ಸೋನವಾಲಕರ, ಅನೀಲ ಸತರಡ್ಡಿ, ಎ.ವ್ಹಿ.ಹೋಸಕೋಟಿ, ಮಾಜಿ ನಿರ್ದೇಶಕ ಬಿ.ವಿ.ಗುಲಗಾಜಂಬಗಿ, ಅಶೋಕ ಹೊಸೂರ, ಎಸ್.ಎಂ.ಕಮದಾಳ ಇದ್ದರು. ಸಮಾರಂಭದಲ್ಲಿ ಉಪನ್ಯಾಸಕರಾದ ಡಾ.ವಿ.ಆರ್.ದೇವರಡ್ಡಿ, ಡಾ.ಎಸ್.ಎಲ್.ಚಿತ್ರಗಾರ, ಎಸ್.ಸಿ.ಮಂಟೂರ, ಲೋಕೇಶ ಹಿಡಕಲ್, ವಿಷ್ಟು ಬಾಗಡಿ, ಎ.ಎಸ್.ಮೀಸಿನಾಯಕ, ಸಿದ್ರಾಮ ಸವಸುದ್ದಿ, ಸವಿತಾ ಕೊತ್ತಲ್, ಪ್ರೀತಿಬೆಳಗಲಿ, ನಿವೃತ್ತ ಉಪನ್ಯಾಸಕರಾದ ಎಸ್.ಬಿ.ಖೋತ, ಡಾ.ಬಿ.ಸಿಪಾಟೀಲ, ವಿ.ಎಸ್.ಹಂಪಣ್ಣವರ, ಎಸ್.ಜಿ.ನಾಯಿಕ, ಎ.ಡಿ.ತಳವಾರ, ಎ.ಪಿ.ರಡ್ಡಿ, ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಮ್.ಕೆ.ಕಂಕಣವಾಡಿ, ಪಿಯು ಕಾಲೇಜ ಪ್ರಾಚಾರ್ಯ ಎಂ.ಎಸ್.ಪಾಟೀಲ, ಎಸ್.ಎಸ್.ಆರ್ ಪ್ರೌಢ ಶಾಲೆಯ ಉಪಪ್ರಾಚಾರ್ಯ ಬಿ.ಕೆ.ಕಾಡಪ್ಪಗೋಳ, ಪ್ರಾಥಮಿಕ ಶಾಲೆಯ ಜೆ.ಬಿ.ಓಂಕಾರ, ಗ್ರಂಥಪಾಲಕ ಬಸವಂತ ಬರಗಾಲಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.