ಕೆಟ್ಟ ಆಹಾರ ಪದಾರ್ಥ ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ಸಮಸ್ಯೆ: ಡಾ. ವರ್ಷಾ ವ್ಹಿ. ಪಾಟೀಲ 

Ravi Talawar
ಕೆಟ್ಟ ಆಹಾರ ಪದಾರ್ಥ ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ಸಮಸ್ಯೆ: ಡಾ. ವರ್ಷಾ ವ್ಹಿ. ಪಾಟೀಲ 
WhatsApp Group Join Now
Telegram Group Join Now
ನೇಸರಗಿ. ಮಹಿಳೆಯರು ಇಂದಿನ ದಿನನಗಳಲ್ಲಿ ಆಹಾರ ಪದ್ಧತಿಯಲ್ಲಿ ಕೆಲವಾರು  ಪದಾರ್ಥಗಳ ದಿನನಿತ್ಯ ಸೇವನೆಯಿಂದ  ಸುಮಾರು 5 ಜನ ಗರ್ಭಿಣಿ ಮಹಿಳೆಯರಲ್ಲಿ ಇಬ್ಬರಿಗೆ  ಸಮಸ್ಯೆ ಉಂಟಾಗುತ್ತಿದ್ದು ಆದ್ದರಿಂದ ಗರ್ಭಿಣಿ ಮಹಿಳೆಯರು ಹಾಗೂ ಮದುವೆಯಾದ ಮಹಿಳೆಯರು ಮನೆಯಲ್ಲಿ ತಯಾರಿಸಿ ಶುದ್ಧ ಆಹಾರ ಪದಾರ್ಥಗಳನ್ನು ಸೇವಿಸುವದರಿಂದ ಬಂಜೆತನ ನಿವಾರಣೆಗೆ  ಮೊದಲ ಪಾಠ ಎಂದು  ಹೋಪ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ ಬೆಳಗಾವಿ ಇದರ ಮುಖ್ಯ ವೈದ್ಯರು ಹಾಗೂ ಕಣೇರಿ ಮಠದ  ಆಸ್ಪತ್ರೆಯ ನಿರ್ದೇಶಕರು, ಸ್ತ್ರಿರೋಗ ತಜ್ಞರಾದ ಡಾ. ವರ್ಷಾ ವಿವೇಕರಾವ ಪಾಟೀಲ ಹೇಳಿದರು.
    ಅವರು ರವಿವಾರದಂದು   ಗ್ರಾಮದ   ವೇದಾಂತ ಕ್ಲಿನಿಕ್  ಡಾ. ಪ್ರಕಾಶ ಹಳ್ಯಾಳ  (ಡಾ. ವನ್ನೂರ) ಆಸ್ಪತ್ರೆಯಲ್ಲಿ ಆಯೋಜಿಸಿದ್ದ  ಉಚಿತ ಬಂಜೆತನ ತಪಾಸಣೆ  ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ಡಾ. ಪ್ರಕಾಶ ಹಳ್ಯಾಳ ಅವರು ಅರೋಗ್ಯ ಸೇವೆಯನ್ನು  ಉನ್ನತ ಮಟ್ಟದಲ್ಲಿ ಸಲ್ಲಿಸುತ್ತಿದ್ದು ಅವರು ಈ ಭಾಗದ ಜನರ ಬಂಜೆತನ ನಿವಾರಣೆಗೆ ಶಿಬಿರ ಆಯೋಜನೆ ಮಾಡಿ ಜನಸೇವೆ ಮಾಡುತ್ತಿದ್ದಾರೆ ಎಂದರು.
   ದಿವ್ಯ ಸಾನಿಧ್ಯ ವಹಿಸಿದ್ದ ನೇಸರಗಿ – ಮಲ್ಲಾಪೂರ ಕೆ ಎನ್  ಶ್ರೀ ಗಾಳೇಶ್ವರ ಮಠದ  ಶ್ರೀ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಶಿಬಿರಕ್ಕೆ  ಬಂದ ವೈದರಾದ ಡಾ. ವರ್ಷಾ ಅವರು  ಬೇರೆ ಯಾರು ಅಲ್ಲ ಅವರು  ರಾಯಭಾಗ ಹುಲಿ, ಮಾಜಿ ಮಂತ್ರಿ ವಿ ಎಲ್ ಪಾಟೀಲ ಅವರ ಸೊಸೆ ಹಾಗೆ ಮಾಜಿ ಎಮ್ ಎಲ್ ಸಿ ವಿವೇಕರಾವ ಪಾಟೀಲ  ಅವರ ಧರ್ಮಪತ್ನಿ ಅಗಿದ್ದು ಅಂತಹ ದೊಡ್ಡ ಮನೆತನದ ಸೊಸೆ ಇಂದು ಇಂತಹ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವದು ಹೆಮ್ಮೆ ಎಂದರು.
     ಡಾ ಪ್ರಕಾಶ ಹಳ್ಯಾಳ  ಮಾತನಾಡಿ ನಾನು ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೈದ್ಯಕೀಯ ಸೇವೆಯಲ್ಲಿ ಸದಾ ಕೆಲಸ ಮಾಡುವ ಪ್ರಯುಕ್ತ ಬಿಡುವಿಲ್ಲದ ಪ್ರಯುಕ್ತ ಇಂತಹ ಶಿಬಿರಗಳನ್ನು ಆಯೋಜನೆ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಬಿಡುವು ಮಾಡಿಕೊಂಡು ಎಲ್ಲ ವಿಭಾಗದ  ಅರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತೇನೆ ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಮತ್ತು ಡಾ ವರ್ಷಾ ಮೇಡಮ್ ಅವರು ಬಂಜೆತನ ಚಿಕಿತ್ಸೆಗೆ ರಿಯಾಯತಿ ನೀಡುತ್ತಿದ್ದಾರೆ ಇದರ ಸದುಪಯೋಗ ಬಂಜೆತನ ಅನುಭವಿಸುತ್ತಿರುವ ಸ್ತ್ರೀಯರು ಪಡೆಯಬೇಕು  ಎಂದರು.
    ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ವೀರಭದ್ರ ಚೋಭಾರಿ, ಹಿರಿಯರಾದ ಮಲ್ಲಿಕಾರ್ಜುನ ಮದನಬಾವಿ, ಪತ್ರಕರ್ತ ಸಿ ವಾಯ್ ಮೆನಸಿಕಾಯಿ, ಪ್ರಕಾಶ ಕೆಳಗಿನಮನಿ , ಡಾ. ರಶ್ಮಿ, ಶ್ರೀಮತಿ ನಾಗರತ್ನ ಪ್ರಕಾಶ ಹಳ್ಯಾಳ, ಶಿವಶಕ್ತಿ ಮೆಡಿಕಲ್ ಮಾಲೀಕರಾದ ನಾಗರಾಜ ತುಬಾಕಿ ಸೇರಿದಂತೆ ನೇಸರಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಬಂಜೆತನ ಪಲಾನುಭವಿಗಳು, ವೇದಾಂತ ಕ್ಲಿನಿಕ್ ಸಿಬ್ಬಂದಿ ಪಾಲ್ಗೊಂಡಿದ್ದರು.
  ಕಾರ್ಯಕ್ರಮದ ನಿರೂಪಣೆ ಹಾಗೂ ನೇಸರಗಿ ಗ್ರಾಮದ ಪರಂಪರೆ, ಆದರ್ಶ, ಡಾ ಹಳ್ಯಾಳ ಅವರ ಸೇವೆಯನ್ನು ಶಿಕ್ಷಕರಾದ ರಾಜಶೇಖರ ಗೆಜ್ಜಿ ಅವರು  ಅರ್ಥಗರ್ಭಿತವಾಗಿ ನಡೆಸಿಕೊಟ್ಟರು.
WhatsApp Group Join Now
Telegram Group Join Now
Share This Article