ಕೆ. ಎ. ಲೋಕಾಪುರ ಪದವಿ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

Ravi Talawar
ಕೆ. ಎ. ಲೋಕಾಪುರ ಪದವಿ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
WhatsApp Group Join Now
Telegram Group Join Now

ಬೆಳಗಾವಿ:  ಅಥಣಿಯ ಜೆ. ಇ. ಸಂಸ್ಥೆಯ  ಕೆ. ಎ. ಲೋಕಾಪುರ ಪದವಿ ಮಹಾವಿದ್ಯಾಲಯ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ   ವಿದ್ಯಾರ್ಥಿಗಳಿಗಾಗಿ  ಆಯೋಜಿಸಲಾದ ಬೆಳಗಾವಿಯಿಂದ ಕಥೆ ಹೇಳೂಣು ಎಂಬ  ಸ್ಪರ್ಧೆಯಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಡಾ. ಜೆ. ಪಿ. ದೊಡ್ಡಮನಿ ಅವರು ಮಾತನಾಡಿ, ಬಸವರಾಜ ಕಟ್ಟಿಮನಿ ಅವರ ಕಥೆ, ಕಾದಂಬರಿಗಳು ಸಾಮಾಜಿಕ, ರಾಜಕೀಯ ಹಾಗೂ ರಾಷ್ಟ್ರೀಯತೆಗೆ ಸಂಬಂಧಿಸಿದ ವಿಷಯ ವಸ್ತುವಿನೊಂದಿಗೆ ಮುಂದಿನ ಜನಾಂಗಕ್ಕೆ ಸಂದೇಶವನ್ನು ನೀಡಿದ್ದಾರೆ. ಬಸವರಾಜ ಕಟ್ಟೀಮನಿಯವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದವರು. ಕಟ್ಟೀಮನಿ ನೇರ  ನುಡಿಯ ಸಾಹಿತಿ ಮತ್ತು ಪತ್ರಕರ್ತರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ  ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ  ವಿಜೇತರಾದ ವಿದ್ಯಾರ್ಥಿಗಳು:  ಭವಾನಿ ಪಾಟೀಲ ಅವರಿಗೆ ಪ್ರಥಮ ,  ಪೂಜಾ ಸಾಂಗ್ಲಿ ಅವರಿಗೆ  ದ್ವಿತೀಯ  ,
ಸಕ್ಕುಬಾಯಿ ನಿಂಗನೂರ್  ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ  ಜಿ. ಎಮ್. ಕುಲಕರ್ಣಿ ಅವರು ವಹಿಸಿದ್ದರು. ಬಿ. ಎ. ಬಮನಾಳೆ,  ಎನ್. ಬಿ. ಝರೆ. ಡಾ. ಮಹಾವೀರ ಕಾಳೆ ಅವರು ಸ್ವಾಗತಿಸಿದರು. ಭಾರತಿ ಅಗಸರ ನಿರೂಪಿಸಿದರು.  ಮನೋಜಕುಮಾರ ಆಕಾಶ ಅವರು ವಂದಿಸಿದರು.  ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳು ಕಥೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

WhatsApp Group Join Now
Telegram Group Join Now
Share This Article