ಪಿಯು ಫಲಿತಾಂಶ: ವಿದ್ಯಾರ್ಥಿಗಳಿಗೆ ಪ್ರಿಯಾಂಕಾ ಜಾರಕಹೊಳಿ ಅಭಿನಂದನೆ

Ravi Talawar
ಪಿಯು ಫಲಿತಾಂಶ: ವಿದ್ಯಾರ್ಥಿಗಳಿಗೆ ಪ್ರಿಯಾಂಕಾ ಜಾರಕಹೊಳಿ ಅಭಿನಂದನೆ
WhatsApp Group Join Now
Telegram Group Join Now
ಬೆಳಗಾವಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆ (ಶೇ 65.37) ರಾಜ್ಯಕ್ಕೆ 26ನೇ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (ಶೇ 66.76) 24ನೇ ಸ್ಥಾನ ಪಡೆದುಕೊಂಡಿದ್ದು,   ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ  ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಉತ್ತೀರ್ಣರಾದ ನಾಡಿನ ಎಲ್ಲಾ  ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿರುವ ಅವರು,  ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಇದು ನಿಮ್ಮ ವರ್ಷದ ಕಲಿಕೆಯ ಫಲಿತಾಂಶವೇ ಹೊರೆತು ಜೀವನದ ಫಲಿತಾಂಶವಲ್ಲ, ಧೈರ್ಯದಿಂದಿರಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದಿದ್ದಾರೆ.
WhatsApp Group Join Now
Telegram Group Join Now
Share This Article