ಗೆಲ್ಲುವ ಭರವಸೆಯಲ್ಲಿ ಜೊಲ್ಲೆ :ಮೋಡಿ ಮಾಡುವರೇ ಪ್ರಿಯಾಂಕಾ?

Ravi Talawar
ಗೆಲ್ಲುವ ಭರವಸೆಯಲ್ಲಿ ಜೊಲ್ಲೆ :ಮೋಡಿ ಮಾಡುವರೇ ಪ್ರಿಯಾಂಕಾ?
WhatsApp Group Join Now
Telegram Group Join Now

ಬೆಳಗಾವಿ ,04: ಜಿಲ್ಲೆ ತಾಲೂಕು ಕೇಂದ್ರವಾಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ  ಈ ಭಾರಿ ಎರಡು ಪ್ರಮುಖ ಪಕ್ಷಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಇಲ್ಲಿ ಮೇ 7ರಂದು ಚುನಾವಣೆ ನಡೆದಿದ್ದು, ಬರೋಬ್ಬರಿ ಈ ಕ್ಷೇತ್ರವೊಂದರಲ್ಲೇ ಶೇಕಡಾ 78.66 ರಷ್ಟು ಮತದಾನ ಆಗಿದೆ. ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ  ಹಾಗೂ ಕಾಂಗ್ರೆಸ್‌ನಿಂದ ಕರ್ನಾಟಕದ ಹಾಲಿ ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಕಣದಲ್ಲಿದ್ದಾರೆ.

ಬಿಜೆಪಿಗೆ ಚಿಕ್ಕೋಡಿ ಗೆಲುವಿನ ಲೋಕಸಭಾ ಕ್ಷೇತ್ರವಾದರೂ ಈ ಬಾರಿ ಇಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಕಾಂಗ್ರೆಸ್ ನತ್ತ ಜನರ ಒಲವು ಜಾಸ್ತಿ ಎಂಬುದನ್ನು ಇದು  ತೋರಿಸುತ್ತದೆ.ಏತನ್ಮಧ್ಯೆ ಎರಡು ಭಾರಿ ಗೆಲುವು ಸಾಧಿಸಿದ್ದ ರಮೇಶ್ ಕತ್ತಿ ಅವರು ಈ ಸಲದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ  ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್  ನೀಡಲಾಯಿತು.

ಈ ಭಾಗದಲ್ಲಿ ಪ್ರಭಾವಿಗಳಾಗಿರುವ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಪುತ್ರಿ ಕಣಕ್ಕಿಳಿರುವುದು ವಿಶೇಷ.ಅವರನ್ನು ಕಾಂಗ್ರೆಸ್ ಮುಖಂಡರು ಒಮ್ಮತದಿಂದ ಚುನಾವಣೆಗೆ ಆಯ್ಕೆ ಮಾಡಿದ್ದರು. ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, ಮೊದಲ ಚುನಾವಣೆಯಲ್ಲೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಪರ  ಹಾಲಿ ಸಚಿವರು, ಸರ್ಕಾರದ ಮುಖ್ಯಸ್ಥರು  ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಅಂದಹಾಗೆ ಪ್ರಿಯಾಂಕಾ ಅವರಿಗೆ ಅನುಭವದ ಕೊರತೆ ಇದೆ.

ಆದರೆ  ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಅವರು 2019ರಲ್ಲಿ ಬಹುಮತ ಪಡೆದು ಗೆದ್ದವರು. ಅವರಿಗೆ ಸಾಕಷ್ಟು ಅನುಭವ ಇದೆ. ಕ್ಷೇತ್ರದ ಬಗ್ಗೆ ಹೇಳುವುದಾದರೆ ಇಲ್ಲಿ  ಜಾತಿ ಮತಗಳ ಮೇಲೆ ಲೆಕ್ಕಾಚಾರ ನಡೆಯಲಿದೆ. ಹಿಂದಿನ ಚುನಾವಣೆಗಳ ಬಗ್ಗೆ ನೋಡಿದರೆ 2014ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 4.74ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ  ಬಿಜೆಪಿಯ ರಮೇಶ್ ಕತ್ತಿ ಕಡಿಮೆ ಅಂತರದಿಂದ ಸೋತಿದ್ದರು.

2019ರಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಸೋಲಿಸಿ ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಅವರು 7.45ಲಕ್ಷ ಬಹುಮತ ಗಳಿಸಿ ವಿಜಯಸಾಧಿಸಿದ್ದರು. ಈ ಈ ಬಾರಿಯೂ  ಅಣ್ಣಾಸಾಹೇಬ್ ಜೊಲ್ಲೆ ಅವರೇ ಕಣ್ಣಕಿಳಿದಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

WhatsApp Group Join Now
Telegram Group Join Now
Share This Article