ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸತೀಶ ಜಾರಕಿಹೊಳಿ ಪ್ರಯತ್ನದಿಂದ 25 ಕೋಟಿ ರೂ. ಅನುದಾನ: ಸಂಸದೆ ಪ್ರಿಯಾಂಕ

Ravi Talawar
ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸತೀಶ ಜಾರಕಿಹೊಳಿ ಪ್ರಯತ್ನದಿಂದ 25 ಕೋಟಿ ರೂ. ಅನುದಾನ: ಸಂಸದೆ ಪ್ರಿಯಾಂಕ
WhatsApp Group Join Now
Telegram Group Join Now
ರಾಯಬಾಗ: ಮತಕ್ಷೇತ್ರದ ಜನರ ಆಶಯದಂತೆ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿಯವರ ಪ್ರಯತ್ನದಿಂದ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ಬುಧವಾರ ತಾಲೂಕಿನ ಭೆಂಡವಾಡ, ರಾಯಬಾಗ ಮತ್ತು ಜಲಾಲಪುರ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 4 ಕೋಟಿ 30 ಲಕ್ಷ ರೂ. ಅನುದಾನದಲ್ಲಿ ಭೆಂಡವಾಡ-ಮೇಖಳಿ ರಸ್ತೆ ಡಾಂಬರೀಕರಣ, ರಸ್ತೆ ಅಗಲೀಕರಣ, ವಿದ್ಯುತ ದೀಪ ಅಳವಡಿಕೆ, 70 ಲಕ್ಷ ರೂ. ಅನುದಾನದಲ್ಲಿ ಮಂಟೂರ-ಕಟಕಬಾವಿ-ದೇವಾಪೂರಹಟ್ಟಿ ರಸ್ತೆ ಡಾಂಬರೀಕರಣ, 12 ಕೋಟಿ ರೂ. ಅನುದಾನದಲ್ಲಿ ರಾಯಬಾಗ-ಕಂಕಣವಾಡಿ ರಸ್ತೆ ಡಾಂಬರೀಕರಣ, ಅಗಲೀಕರಣ ಹಾಗೂ ಜಲಾಲಪುರ ಗ್ರಾಮದಲ್ಲಿ 3 ಕೋಟಿ ರೂ. ಅನುದಾನದಲ್ಲಿ ಭಿರಡಿ-ಬಾವನಸೌಂದತ್ತಿ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರಸ್ತೆ ಸುಧಾರಣೆ ಜೊತೆಗೆ ಸಾರ್ವಜನಿಕರ ರಾತ್ರಿ ಸಮಯದಲ್ಲಿ ಸಂಚರಿಸಲು ಅನುಕೂಲವಾಗಲು ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ ಎಂದರು.
ಶಾಸಕ ಡಿ.ಎಮ್.ಐಹೊಳೆ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿ ರಾಯಬಾಗ ಮತಕ್ಷೇತ್ರದಲ್ಲಿನ ರಸ್ತೆ ಸುಧಾರಣೆಗೆ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು 25 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಗ್ರಾಮೀಣ ಭಾಗದ ಜನರು ರಸ್ತೆ ಅಗಲೀಕರಣಕ್ಕಾಗಿ ಸಹಕರಿಸಿ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿಕೊಳ್ಳಬೇಕೆಂದರು.
ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಗ್ರಾ.ಪಂ.ಅಧ್ಯಕ್ಷೆ ಅನೀತಾ ದುಪದಾಳೆ,  ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಜಲಾಲಪೂರ ಗ್ರಾ.ಪಂ.ಅಧ್ಯಕ್ಷೆ ದೀಪಾ ಚೌಗಲಾ, ಪಿಡಬ್ಲ್ಯುಡಿ ಎಇಇ ಆರ್.ಬಿ.ಮನವಡ್ಡರ, ಸದಾಶಿವ ಘೋರ್ಪಡೆ, ಸಿದ್ರಾಮ ಪೂಜಾರಿ, ಶಿವನಗೌಡ ಪಾಟೀಲ, ಸಿದ್ದು ಬಂಡಗರ, ರಾಜು ಶಿರಗಾಂವೆ,  ಸುರೇಶ ಚೌಗಲಾ, ರಾಜು ಜಗದಾಳೆ, ನಾಮದೇವ ಕಾಂಬಳೆ, ಬಸವರಾಜ ಅವ್ವನ್ನವರ, ನಿರ್ಮಲಾ ಪಾಟೀಲ, ಅರ್ಜುನ ನಾಯಿಕವಾಡಿ, ಅರ್ಜುನ ಬಂಡಗಾರ, ಅಣ್ಣಾಸಾಹೇಬ ಸಮಾಜೆ, ವಿವೇಕ ಹಟ್ಟಿಕರ, ರೀಯಾನ ನದಾಫ ಸೇರಿ ಅನೇಕರು ಇದ್ದರು.
WhatsApp Group Join Now
Telegram Group Join Now
Share This Article