ಕಲಬುರಗಿ ಮಾ., 28:- ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ ಎಂದು ಸ್ವತ: ಪ್ರಿಯಾಂಕ ಖರ್ಗೆ ಅವರೇ ಹೇಳಿಕೊಂಡಿದ್ದಾರೆ.
ಇಂದು ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಯಾಂಕ್ ಖರ್ಗೆ ಅವರು,
ತಮಗೆ ಜೀವ ಬೆದರಿಕೆ ಬಂದಿರುವ ಬಗ್ಗೆ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಗಲಭೆ ಸೃಷ್ಟಿ ಮಾಡಿ ಬಿಜೆಪಿಯವರು ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದ್ರೂ ಚುನಾವಣೆಯಲ್ಲಿ ಗೆಲ್ಲುವ ಯೋಜನೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
’ಪತ್ರದಲ್ಲಿ ತನ್ನನ್ನು ಎನ್ಕೌಂಡರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ’ ಎಂದು ಅವರು ಹೇಳಿದ್ದಾರೆ. ಬಿಜೆಪಿ ಅವರೇ ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಕು ಮಾಡುತ್ತಿದ್ದಾರೆ.
ನನಗೆ ಎರಡು ಜೀವ ಬೆದರಿಕೆ ಪತ್ರಗಳು ಬಂದಿವೆ. ಇನ್ನೊಂದರಲ್ಲಿ ನನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಬೆದರಿಕೆ ಹಾಕಲಾಗಿದೆ. ಈ ಪತ್ರ ಫಿನ್‌ಲ್ಯಾಂಡ್‌ನಿಂದ ಬಂದಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆ ಬೆದರಿಕೆ ಪತ್ರವನ್ನೂ ಓದಿದ್ದಾರೆ. ”ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗು, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ.
ಜೊತೆಗೆ “ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ” ಎಂದರು.
ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಅವರಿಗೆ ರಾಜಕೀಯವಾಗಿ ಎದುರಿಸುವುದು ಗೊತ್ತಿಲ್ಲ. ಹೀಗಾಗಿ ವೈಯಕ್ತಿಕ ದಾಳಿ ಮಾಡುತ್ತಿದೆ. ’ನಾನು ಬಳೆ ತೊಟ್ಟುಕೊಂಡಿಲ್ಲ. ಅಖಾಡದಲ್ಲಿ ರೆಡಿಯಿದ್ದೇನೆ’ ಎಂದು ಸಂಸದ ಉಮೆಶ್ ಜಾದವ್ ಅವರೇ ಹೇಳುತ್ತಾರೆ. ಇದಕ್ಕೆ ಉತ್ತರ ನೀಡಬೇಕು ಎಂದರು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಮಾರ್ಚ್ ೧೩ರಂದು ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದರು.