ಪ್ರಿಯಾ ಸುದೀಪ್ ಸಂಸ್ಥೆ ಸುಪ್ರಿಯಾನ್ವಿ ಹೊಸ ಕಥೆ ಪ್ರತಿಭೆಗಳಿಗೆ ಅವಕಾಶ

Sandeep Malannavar
ಪ್ರಿಯಾ ಸುದೀಪ್  ಸಂಸ್ಥೆ ಸುಪ್ರಿಯಾನ್ವಿ ಹೊಸ ಕಥೆ ಪ್ರತಿಭೆಗಳಿಗೆ ಅವಕಾಶ
WhatsApp Group Join Now
Telegram Group Join Now
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್‌ ಈಗಾಗಲೇ ನಿರ್ಮಾಪಕಿ ಹಾಗೂ ವಿತರಕಿಯಾಗಿದ್ದಾರೆ. ಈಗ ಅವರು  ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮುಂದಾಗಿದ್ದಾರೆ.
      ಪ್ರಿಯಾ ಸುದೀಪ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದ ದಿನದಂದು ಅವರು ಈ ಹೊಸ ಹೆಜ್ಜೆ ಇಟ್ಟಿದ್ದಾರೆ.
     ಪ್ರಿಯಾ ಸುದೀಪ್ ಅವರು ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ . ಮ್ಯಾಂಗೋ ಪಚ್ಚ ಚಿತ್ರದ ಮೂಲಕ . ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕರಾಗುತ್ತಿದ್ದಾರೆ.‌ ಅಲ್ಲದೇ ಇತ್ತೀಚೆಗೆ ಮಾರ್ಕ್ ಚಿತ್ರದ ವಿತರಣೆ ಮಾಡುವ ಮೂಲಕ ವಿತರಣೆ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೀಗ ತಮ್ಮದೇ ಸುಪ್ರಿಯಾನ್ವಿ‌ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ‌ ಕಲ್ಪಿಸಲು ತೀರ್ಮಾನ ಮಾಡಿದ್ದಾರೆ.
     ಪ್ರಿಯಾ ಸುದೀಪ್ ಹುಟ್ಟುಹಬ್ಬಕ್ಕೆ ಸುಪ್ರಿಯಾನ್ವಿ‌ ನಿರ್ಮಾಣ‌ ಸಂಸ್ಥೆಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾ ಸುದೀಪ್ “ಹೆಮ್ಮೆ ಮತ್ತು ಉತ್ಸಾಹದಿಂದ, ನಾವು ತಾಯಿ ಭದ್ರಕಾಳಿಯ ಪವಿತ್ರ ಆಶೀರ್ವಾದ ಮತ್ತು ನಮ್ಮ ಮೌಲ್ಯಯುತ ಪ್ರೇಕ್ಷಕರ ಆತ್ಮೀಯ ಪ್ರೋತ್ಸಾಹವನ್ನು ಕೋರುತ್ತೇವೆ. ನಾವು ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೋಷನ್ ಪೋಸ್ಟರ್ ಅನ್ನು ಪ್ರಸ್ತುತಪಡಿಸುತ್ತೇವೆ”. ಈ ಕ್ಷಣವು ಬಲವಾದ ವಿಷಯ, ಹೊಸ ಧ್ವನಿಗಳು ಮತ್ತು ಪ್ರಭಾವಶಾಲಿ ಸಿನೆಮಾಗಳಿಗೆ ಮೀಸಲಾಗಿರುವ ಸೃಜನಾತ್ಮಕ ವೇದಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಅರ್ಥಪೂರ್ಣ ಸಿನೆಮಾ ಮತ್ತು ಶಕ್ತಿಯುತ ಕಥೆಗಳ ಭರವಸೆಯೊಂದಿಗೆ ಮುಂದುವರಿಯುತ್ತದೆ.ಹೊಸ ಪ್ರಯಾಣ ಇಂದು ಪ್ರಾರಂಭವಾಗುತ್ತದೆ – ಮುಂದಿನದಕ್ಕಾಗಿ ಸಿದ್ಧ ಆಗಿರಿ” ಎಂದು ಬರೆದುಕೊಂಡಿದ್ದಾರೆ.
     ಹೊಸ ಹೊಸ ಕಥೆಗಳಿಗೆ, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕಲ್ಪಿಸಲು ವಿಭಿನ್ನ ಬಗೆಯ ಕಂಟೆಂಟ್ ಆಧಾರಿತ ಸಿನಿಮಾಗಳು ಸುಪ್ರಿಯಾನ್ವಿ ಪ್ರೊಡಕ್ಷನ್ ನಡಿ ಮೂಡಿ ಬರಲಿದೆ.
WhatsApp Group Join Now
Telegram Group Join Now
Share This Article