ಹುಕ್ಕೇರಿ : ರೈತರಿಗೆ ವಿವಿಧ ಸರಕಾರ ಯೋಜನೆಗಳ ತರಬೇತಿಗಾಗಿ ನಿರ್ಮಾಣವಾಗುತ್ತಿರುವ ಸಭಾಂಗಣ ಕಟ್ಟಡಗಳು ಸದ್ಬಳಕೆಯಾಗಲಿ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಅವರು ಗುರುವಾರ ಹುಕ್ಕೇರಿ ಪಟ್ಟಣದ ಪಶು ಸಂಗೋಪಣೆ ಹಾಗೂ ಕೃಷಿ ಇಲಾಖೆಯ ಆವರಣದಲ್ಲಿ ಪಂಚಾಯತ ರಾಜ್ಯ ಇಂಜನೀಯರಿಂಗ್ ಉಪ ವಿಭಾಗದಡಿ ದಾಸ್ತಾನು ಕೊಠಡಿ 6. ಲಕ್ಷರೂ ಹಾಗೂ ಕೃಷಿ ಇಲಾಖೆಯ ಸಭಾಂಗಣಕ್ಕೆ 10 ಲಕ್ಷರೂ ಸೇರಿದಂತೆ 16 ಲಕ್ಷರೂ ವೆಚ್ಚದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು .ರೈತರ ಜೀವನಾಡಿಗಳಾದ ಪಶು ಸಂಗೋಪಣೆ ಹಾಗೂ ಕೃಷಿ ಇಲಾಖೆಗಳಿಂದ ರೈತರಿಗೆ ಕೃಷಿ ಚಟುವಟಿಕೆಗಳ ನಿರಂತರ ಮಾಹಿತಿ ನೀಡುವ ಕೇಂದ್ರಗಳಾಗಿ ರೈತರ ಮತ್ತು ಸರಕಾರದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು ಈ ನಿಟ್ಟಿನಲ್ಲಿ ಇಲಾಖೆಗಳು ಅಧಿಕಾರಿಗಳು ಸಭಾಂಗಣ ಕಟ್ಟಡಗಳನ್ನು ಮುತವರ್ಜಿ ವಹಿಸಿ ನಿರ್ಮಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ಶಾಸಕ ನಿಖಿಲ್ ಕತ್ತಿ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಗ್ರಾಮಗಳ ಜನರಿಗೆ ತಲುಪಿಸುತ್ತಿದ್ದಾರೆ.ಸ್ಥಳಿಯ ಮುಖಂಡರು ಗುಣಮಟ್ಟದ ಕಾವiಗಾರಿಯ ಬಗ್ಗೆ ನಿಗಾ ವಹಿಸಿಕೊಳ್ಳಬೇಕು ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹಾಂತೇಶ ತಳವಾರ, ಸದಸ್ಯರಾದ ಎ.ಕೆ ಪಾಟೀಲ, ರಾಜು ಮುನ್ನೋಳಿ, ಮುಖಂಡರಾದ ಲಾಜಮ್ ನಾಯಿಕವಾಡಿ, ಚನ್ನಪ್ಪಾ ಗಜಬರ, ರವಿ ಜುಟಾಳೆ, ಬಸವರಾಜ ಗಂಗನ್ನವರ, ವಿನಾಯಕ ಸಂಕೇಶ್ವರಿ, ಪುಟ್ಟು ಖಾಡೆ, ಯಲ್ಲಪ್ಪಾ ಡಪ್ಪರಿ, ಗುರು ವಾಸೇದಾರ, ಜಿ..ಪಂ ಕಾರ್ಯಕಾರಿ ಸಹಾಯಕ ಅಭಿಯಂತರಾದ ಶಶಿಧರ ಭೂಸಗೋಳ, ಸಮೀರ ಲೋಕಾಪುರ, ಪುರುಷೋತ್ತಮ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.


