ಪ್ರಧಾನಿ ನರೇಂದ್ರ ಮೋದಿ ಆಗಸ್ಟ್​​​ 23ಕ್ಕೆ ಉಕ್ರೇನ್ ಭೇಟಿ ಸಾಧ್ಯತೆ

Ravi Talawar
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್​​​ 23ಕ್ಕೆ ಉಕ್ರೇನ್ ಭೇಟಿ ಸಾಧ್ಯತೆ
WhatsApp Group Join Now
Telegram Group Join Now

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ಪೀಡಿತ ಉಕ್ರೇನ್​​ಗೆ ಆಗಸ್ಟ್​​​ 23ರಂದು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಉಕ್ರೇನ್ ಭೇಟಿ ವೇಳೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿ ಹೇಳಿದೆ. ರಷ್ಯಾ ಮತ್ತು ಉಕ್ರೇನ್​​ ಯುದ್ಧದ ನಂತರ ಪ್ರಧಾನಿ ಮೋದಿ ಅವರ ಇದು ಮೊದಲ ಭೇಟಿಯಾಗಿದೆ.

ಪ್ರಧಾನಿ ಮೋದಿ ಅವರು ಜುಲೈ 8-9ರಂದು ರಷ್ಯಾದ ಮಾಸ್ಕೋಗೆ ಭೇಟಿ ನೀಡಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ಮೋದಿ ಅವರನ್ನು 22ನೇ ಭಾರತ ಮತ್ತು ರಷ್ಯಾ ಶೃಂಗಸಭೆಗೆ ಆಹ್ವಾನಿಸಿದ್ದರು. ಈ ನಿಟ್ಟಿನಲ್ಲಿ  ಮೋದಿ ರಷ್ಯಾಕ್ಕೆ ಭೇಟಿ ನೀಡಿದರು.

ಇನ್ನು ಈ ಉಭಯ ನಾಯಕರ ಭೇಟಿಯ ಸಂದರ್ಭದಲ್ಲಿ ಉಕ್ರೇನ್​​​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಭೇಟಿಯನ್ನು ವಿರೋಧಿಸಿದರು. ಹಾಗೂ ತಮ್ಮ ಎಕ್ಸ್​​ ಖಾತೆಯಲ್ಲಿ ರಷ್ಯಾ ದಾಳಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಕೈವ್‌ನ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 37 ಜನ ಸಾವನ್ನಪ್ಪಿದ್ದಾರೆ. 170 ಜನ ಗಾಯಗೊಂಡಿದ್ದಾರೆ ಎಂದು ಹೇಳಿದರು

 

WhatsApp Group Join Now
Telegram Group Join Now
Share This Article