ತಿರುವನಂತಪುರಂ, ಮೇ 02: ಈ ಕಾರ್ಯಕ್ರಮವು ಹಲವರ ನಿದ್ದೆಗೆಡಿಸುವುದಂತೂ ನಿಶ್ಚಿತ ಎಂದು ಪ್ರಧಾನಿ ನರೇಂದ್ರ ಮೋದ ಹೇಳಿದ್ದಾರೆ. ಕೇರಳಕ್ಕೆ ತೆರಳಲಿರುವ ಅವರು, ವಿಳಿಂಜಂ ಅಂತರರಾಷ್ಟ್ರೀಯ ಬಂದರನ್ನು ಉದ್ಘಾಟಿಸಿ ಮಾತನಾಡಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಉದ್ದೇಶಿಸಿ ಮಾತನಾಡಿ, ನೀವು ಇಂಡಿ ಮೈತ್ರಿಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕ ಜನರ ನಿದ್ದೆಗೆಡಿಸಲಿದೆ ಎಂದು ನಗೆ ಚಟಾಕಿ ಹಾರಿಸಿದರು.
ದೊಡ್ಡ ಸರಕು ಹಡಗುಗಳಿಗೆ ಬರಲು ಅವಕಾಶ ಪ್ರಧಾನಿ ಮೋದಿ ಅವರು ಈಗ ವಿಶ್ವದ ದೊಡ್ಡ ಸರಕು ಹಡಗುಗಳು ಇಲ್ಲಿಗೆ ಸುಲಭವಾಗಿ ಬರಲು ಸಾಧ್ಯವಾಗುತ್ತದೆ . ಭಾರತದ ಶೇ. 75 ರಷ್ಟು ಸಾಗಣೆಯನ್ನು ದೇಶದ ಹೊರಗಿನ ಬಂದರುಗಳಲ್ಲಿ ಮಾಡಲಾಗುತ್ತಿತ್ತು, ಇದರಿಂದಾಗಿ ಭಾರಿ ನಷ್ಟ ಉಂಟಾಗಿದೆ. ಈ ಪರಿಸ್ಥಿತಿ ಈಗ ಬದಲಾಗಲಿದೆ ಎಂದರು.
ಈಗ ದೇಶದ ಹಣ ದೇಶಕ್ಕೆ ಉಪಯುಕ್ತವಾಗುತ್ತದೆ. ವಿದೇಶಕ್ಕೆ ಹೋಗುತ್ತಿದ್ದ ಹಣ ಈಗ ಕೇರಳ ಮತ್ತು ವಿಳಿಂಜಂ ಜನರಿಗೆ ಹೊಸ ಅವಕಾಶಗಳನ್ನು ತರುತ್ತದೆ. ಗುಲಾಮಗಿರಿಗೂ ಮುನ್ನ, ನಮ್ಮ ಭಾರತ ಸಾವಿರಾರು ವರ್ಷಗಳ ಸಮೃದ್ಧಿಯನ್ನು ಕಂಡಿದೆ. ಒಂದು ಕಾಲದಲ್ಲಿ ಭಾರತವು ಜಾಗತಿಕ ಜಿಡಿಪಿಯಲ್ಲಿ ದೊಡ್ಡ ಪಾಲನ್ನು ಹೊಂದಿತ್ತು. ಆ ಸಮಯದಲ್ಲಿ ನಮ್ಮ ಸಮುದ್ರ ಸಾಮರ್ಥ್ಯಗಳು ನಮ್ಮನ್ನು ಇತರ ದೇಶಗಳಿಗಿಂತ ಭಿನ್ನವಾಗಿಸಿದವು.