ನವದೆಹಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಹ್ವಾನದ ಮೇರೆಗೆ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಪಿಎಂ ಮೋದಿ, ಭಾರತೀಯ ಭಾಷೆಗಳ ನಡುವೆ ಎಂದಿಗೂ ದ್ವೇಷವಿರಲಿಲ್ಲ. ಭಾಷಾಶಾಸ್ತ್ರದ ಆಧಾರದ ಮೇಲೆ ತಾರತಮ್ಯ ಮಾಡುವ ಪ್ರಯತ್ನಗಳಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾಷೆಗಳೇ ಪರಸ್ಪರ ಭಾಷೆಗಳನ್ನು ಶ್ರೀಮಂತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾಷಾ ಆಧಾರಲ್ಲಿ ಪ್ರದೇಶ ವಿಭಜಿಸುವ ಯತ್ನಬೇಡ: ಪ್ರಧಾನಿ ಮೋದಿ

“ಮರಾಠಿ ಶೌರ್ಯ, ಧೈರ್ಯ, ಸೌಂದರ್ಯ, ಸೂಕ್ಷ್ಮತೆ ಮತ್ತು ಸಮಾನತೆಯ ಅಂಶಗಳನ್ನು ಪ್ರತಿಬಿಂಬಿಸುವ ಸಂಪೂರ್ಣ ಭಾಷೆಯಾಗಿದೆ. ಭಾರತೀಯ ಭಾಷೆಗಳಲ್ಲಿ ಎಂದಿಗೂ ದ್ವೇಷವಿರಲಿಲ್ಲ. ಭಾಷೆಗಳು ಯಾವಾಗಲೂ ಪರಸ್ಪರ ಪ್ರಭಾವ ಬೀರಿವೆ. ಭಾಷೆಗಳ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಗಳು ನಡೆದಾಗ ಭಾರತದ ಹಂಚಿಕೆಯ ಭಾಷಾ ಪರಂಪರೆ ಸೂಕ್ತ ಉತ್ತರವನ್ನು ನೀಡಿತು” ಎಂದು ಮೋದಿ ಹೇಳಿದ್ದಾರೆ.