ಸಂಕಷ್ಟದಲ್ಲಿದ್ದ ಕಬ್ಬು ಬೆಳೆಗಾರರಿಗೆ ರೂ 3300/-  ಬೆಲೆ ಘೋಷಣೆ, ವಿಜಯೋತ್ಸವದ ಆಚರಣೆ.

Ravi Talawar
ಸಂಕಷ್ಟದಲ್ಲಿದ್ದ ಕಬ್ಬು ಬೆಳೆಗಾರರಿಗೆ ರೂ 3300/-  ಬೆಲೆ ಘೋಷಣೆ, ವಿಜಯೋತ್ಸವದ ಆಚರಣೆ.
WhatsApp Group Join Now
Telegram Group Join Now
ಘಟಪ್ರಭಾ. ಇಲ್ಲಿನ  ಮೃತ್ಯುಂಜಯ ಸರ್ಕಲ್ ದಲ್ಲಿ ಶನಿವಾರ ದಿನಾಂಕ 08-11-2025 ರಂದು ಆಚರಿಸಲಾಯಿತು. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ, ಕೆಂಪಣ್ಣ ಚೌಕಶಿ ವಕೀಲರು,  ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಹಿರಿಯ ಮುಖಂಡ ಸುರೇಶ್ ಪಾಟೀಲ ಮಲ್ಲಾಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಮೇಶ್ ತುಕ್ಕಾನಟ್ಟಿ ರೆಹೆಮಾನ್ ಮುಖಾಸಿ ಮುಂತಾದವರು ಮಾತನಾಡಿ ರೈತ ಧುರೀಣರಾದ ಶಶಿಕಾಂತ ಗುರೂಜಿ ಹಾಗೂ ಚೂನಪ್ಪಾ ಪೂಜಾರಿ ಅವರಿಗೆ ಮತ್ತು ಸರಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು ಹೊಸಮಠ   ಅವರು ಆಶೀರ್ವಚನ ನೀಡಿದರು.
 ಈ ಸಂದರ್ಭದಲ್ಲಿ ಮಹಾಂತೇಶ ಉದಗಟ್ಟಿಮಠ, ಶಿವಪುತ್ರ ಕೊಗನೂರ, ಅಪ್ಪಾಸಾಬ ಮುಲ್ಲಾ,  ಪ್ರಶಾಂತ ಅರಳಿಕಟ್ಟಿ, ಮಾರುತಿ ಚೌಕಾಶಿ, ಮುತ್ತಣ್ಣ ಹತ್ತರವಾಟ, ರಾಜು ಕತ್ತಿ, ಪ್ರಲ್ಹಾದ ಕುಲಕರ್ಣಿ, ಕೃಷ್ಣಾ ಗಂಡವ್ವಗೋಳ, ಬಾಳೇಶ ಕಮತ, ಈರಪ್ಪ ಕಮತ ಕಾಡಪ್ಪಾ ಕರೋಶಿ, ಕೆಂಪಣ್ಣ ಕರಿಗಾರ, ಅಜೀತ ಗುಡಸಿ,  ಬಾಳೇಶ ಪೂಜೇರಿ, ಶೆಟ್ಟೆಪ್ಪ ಗಾಡಿವಡ್ಡರ್, ರವಿ ನಾವಿ, ಶಶಿ ಚೌಕಶಿ, ಘಟಪ್ರಭಾ ಪೋಲಿಸ್ ಸಿಬ್ಬಂದಿ, ಪಾಮಲದಿನ್ನಿ, ಬಡಿಗವಾಡ, ದುಪಧಾಳ, ಮಲ್ಲಾಪುರ ಪಿಜಿ, ರೈತ ಬಾಂಧವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article