ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ

Ravi Talawar
ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ
WhatsApp Group Join Now
Telegram Group Join Now
ಬೆಳಗಾವಿ: ಬೆಳಗಾವಿ ಜಿಲ್ಲಾ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ ದಿನಾಚರಣೆ ಇದೇ ಭಾನುವಾರ ಬೆಳಗ್ಗೆ 11ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಿಕಾ ದಿನಾಚರಣೆ ಪ್ರಯುಕ್ತ ನಡೆದ ಕ್ರಿಕೆಟ್ ಪಂದ್ಯಾವಳಿ, ಕೇರಂ ಸ್ಪರ್ಧೆ, ಚೆಸ್ ಸ್ಪರ್ಧೆಯ ವಿಜೇತರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಹುಮಾನ ವಿತರಿಸಲಿದ್ದಾರೆ. ಸಂಘದ ಅಧ್ಯಕ್ಷ ಮಂಜುನಾಥ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಆಸೀಫ್ ಸೇಠ್, ವಿಶ್ವಾಸ ವೈದ್ಯ, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮುಖ್ಯ ಅತಿಥಿಗಳಾಗಲಿದ್ದಾರೆ.
*ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಹಾಗೂ ಪ್ರಶಸ್ತಿ ವಿತರಣೆ*
ಇದೇ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ
ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಹಾಗೂ ಪಶಸ್ತಿ ಪ್ರಧಾನ ಮಾಡಲಾಗುವುದು. ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಕೇಶವ ಆದಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮ ಸಲಹೆಗಾರ ಎಂ.ಕೆ ಹೆಗಡೆ, ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ವಿಲಾಸ್ ಜೋಶಿ, ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಹಿರಿಯ ವರದಿಗಾರ ನೌಶಾದ್ ವಿಜಾಪುರ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ವರದಿಗಾರ ರಾಜು ಗವಳಿ, ನ್ಯೂಸ್ ಫಸ್ಟ್ ಚಾನೆಲ್ ಹಿರಿಯ ವರದಿಗಾರ ಶ್ರೀಕಾಂತ್ ಕುಬಕಡ್ಡಿ, ಪ್ರಜಾಟಿವಿ ಹಿರಿಯ ವರದಿಗಾರ ಚಂದ್ರು ಶ್ರೀರಾಮುಡು, ಬೆಳಗಾವಿ ಸುದ್ದಿ ಸಂಪಾದಕ ಮೆಹಬೂಬ್ ಮಕಾಂದಾರ್, ಯುಎನ್ಐ ಛಾಯಾಗ್ರಾಹಕ ಎಚ್.ವಿ ನಾಗರಾಜ್, ತರುಣ್ ಭಾರತ ಪತ್ರಿಕೆಯ ಹಿರಿಯ ವರದಿಗಾರ ರಮೇಶ್ ಹಿರೇಮಠ ನ್ಯೂಸ್ 18 ಚಿಕ್ಕೋಡಿ ವರದಿಗಾರ ಲೋಹಿತ್ ಶಿರೋಳ, ಹಿರಿಯ ಛಾಯಾಗ್ರಾಹಕರಾದ ರವಿ ಮಬ್ರುಮಕರ್, ಸುಬಾನಿ ಮುಲ್ಲಾ, ರವಿ ಭೋವಿ ಅವರಿಗೆ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಹಾಗೂ ಪಶಸ್ತಿ ಪ್ರಧಾನ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಪಾಟೀಲ ‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article